ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರಕ್ಕೆ ನಾನೇ ಸರಕಾರ್: ಎಚ್ ಡಿ ಕುಮಾರಸ್ವಾಮಿ

By Srinath
|
Google Oneindia Kannada News

ರಾಮನಗರ, ಸೆಪ್ಟೆಂಬರ್ 6: ಬರೋಬ್ಬರಿ 2 ವರ್ಷದಿಂದ ಜೈಲಿನಲ್ಲಿರುವ ಜನಾರ್ದನ ರೆಡ್ಡಿಯ ಬಳ್ಳಾರಿ ರಿಪಬ್ಲಿಕ್ ಬಗ್ಗೆ ಕೇಳಿದ್ದೀರಿ. ಆದರೆ ಇದ್ಯಾವುದು ರಾಮನಗರ ಸರಕಾರ್!

'ರಾಮನಗರದ ಜನತೆಯೇ ಕೇಳಿಸಿಕೊಳ್ಳಿ... ರಾಜ್ಯದಲ್ಲಿ ಯಾವ ಸರ್ಕಾರವೇ ಬರಲಿ. ರಾಮನಗರಕ್ಕೆ ಕುಮಾರಸ್ವಾಮೀನೇ ಸರ್ಕಾರ. ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಆದರೆ ನಿಮಗೆ ನಾನೇ ಸರ್ಕಾರ ಇದ್ದಂತೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆಯಲ್ಲಿ ಅದಕ್ಕೂ ಮುನ್ನ ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ, ತಮ್ಮ ಧರ್ಮಪತ್ನಿ ಅನಿತಾ ಅವರು ಹೀನಾಯವಾಗಿ ಸೋತು, ಖುದ್ದು ರಾಮನಗರದ ಶಾಸಕರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿರುವ ಕುಮಾರಸ್ವಾಮಿ ಅವರು ಈ ಮಾತನ್ನು ಹೇಳಿರುವುದು ಜಿಲ್ಲಾ ರಾಜಕೀಯಕ್ಕೆ ಶಾಕ್ ನೀಡದಂತಿದೆ.

ಇತ್ತೀಚೆಗೆ ತೀವ್ರ ವಿವಾದ ಹುಟ್ಟುಹಾಕಿರುವ 'ಢುಂಢಿ' ಲೇಖಕ ಯೋಗೀಶ್ ಮಾಸ್ಟರರನ್ನು ಇದೇ ವೇಳೆ ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಂಶೋಧನಾ ಕೃತಿಗಳ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ. ಸಂಶೋಧನಾ ಕೃತಿ ಎಂದು ಸಮಾಜದ ಮೇಲೆ ಹೇರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ನಗರದ ಕೃಷ್ಣ ಸ್ಮೃತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಶಿಕ್ಷಕರ ಸಂಘದಿಂದ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 'ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಲು ಶಿಕ್ಷಕರು ಆದ್ಯತೆ ನೀಡಬೇಕು. ಹಿಂದೆ ಶಿಕ್ಷಕರ ಬಗ್ಗೆ ಪೂಜ್ಯ ಭಾವನೆ ಇತ್ತು. ಗುರುವನ್ನು ತಂದೆ, ತಾಯಿಗಿಂತಲೂ ಮಿಗಿಲಾಗಿ ಪೂಜಿಸುವ, ಗೌರವಿಸುವ ಕೆಲಸ ಆಗುತ್ತಿತ್ತು. ಇತ್ತೀಚೆಗೆ ಶಿಕ್ಷಕರನ್ನು ಲಘುವಾಗಿ ಬಿಂಬಿಸುವ ಮತ್ತು ಕಾಣುತ್ತಿರುವುದು ವಿಷಾದಕರ ಸಂಗತಿ ಎಂದರು.

ಶಿಕ್ಷಕರ ಬಗ್ಗೆ ಮಾಧ್ಯಮಗಳಿಗೆ ಕಿವಿಮಾತು

ಶಿಕ್ಷಕರ ಬಗ್ಗೆ ಮಾಧ್ಯಮಗಳಿಗೆ ಕಿವಿಮಾತು

ಶಿಕ್ಷಕರ ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದಾಗಿ ಬಿಂಬಿಸಿ, ಅವರ ತೇಜೋವಧೆ ಮಾಡುವುದನ್ನು ಮಾಧ್ಯಮಗಳು ಇನ್ನಾದರೂ ನಿಲ್ಲಿಸಬೇಕು. ಶಿಕ್ಷಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಮುಂದಾಗಬೇಕು ಎಂದು ಅವರು ಕಿವಿಮಾತು ಹೇಳಿದರು.

ಶಿಕ್ಷಕರ ಕೊರತೆ: ಸರಕಾರಕ್ಕೆ ತರಾಟೆ

ಶಿಕ್ಷಕರ ಕೊರತೆ: ಸರಕಾರಕ್ಕೆ ತರಾಟೆ

ರಾಮನಗರ ಜಿಲ್ಲೆಯಲ್ಲಿ ಸುಮಾರು 800 ಶಿಕ್ಷಕರ ಕೊರತೆ ಇದೆ. ಈ ಪ್ರಮಾಣವನ್ನೇ ಗಮನಿಸಿದರೆ ರಾಜ್ಯದಲ್ಲಿ ಸರಿ ಸುಮಾರು 25 ರಿಂದ 30 ಸಾವಿರ ಶಿಕ್ಷಕರ ಕೊರತೆ ಕಾಡುತ್ತಿರುವ ಸಾಧ್ಯತೆ ಇದೆ. ಕೊರತೆ ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರವು ಇಷ್ಟೊಂದು ಭಾರಿ ಪ್ರಮಾಣದಲ್ಲಿರುವ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳದಿರುವುದು ದುರಂತವೇ ಸರಿ ಎಂದು ಅವರು ಆರೋಪಿಸಿದರು.

ನಿವೃತ್ತ ಶಿಕ್ಷಕರಿಗೆ ಆತ್ಮೀಯ/ ಗೌರವಪೂರ್ಣ ಸನ್ಮಾನ

ನಿವೃತ್ತ ಶಿಕ್ಷಕರಿಗೆ ಆತ್ಮೀಯ/ ಗೌರವಪೂರ್ಣ ಸನ್ಮಾನ

ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ, ಜಿ.ಪಂ. ಅಧ್ಯಕ್ಷ ಎಚ್.ಸಿ. ರಾಜು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ಸದಸ್ಯರಾದ ಎಚ್.ಎಲ್. ಚಂದ್ರ, ಧನಂಜಯ, ಸಿಇಒ ಡಾ.ಎಂ.ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಮತ್ತಿತರರು ಭಾಗವಹಿಸಿದ್ದರು. ಉತ್ತಮ ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

English summary
Am the government in Ramanagara said JDS leader HD Kumaraswamy yesterday during teachers day celebrations. Also he made a scathing attack on controversial book Dhundi by Yogesh Master.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X