ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಢುಂಢಿ' ಲೇಖಕ ಯೋಗೇಶ್ ಮಾಸ್ಟರ್ ಯಾರು?

By * ಶ್ರೀಧರ ಕೆದಿಲಾಯ, ಉಡುಪಿ
|
Google Oneindia Kannada News

ಬೆಂಗಳೂರು, ಆ.30: ಗಣೇಶನ ಕುರಿತು ವಿವಾದಿತ ಢುಂಢಿ ಪುಸ್ತಕ ಬರೆದ ಯೋಗೇಶ್ ಮಾಸ್ಟರ್ ಬಂಧನಕ್ಕೆ ಕನ್ನಡ ಸಾರಸ್ವತ ಲೋಕ, ಪ್ರಗತಿಪರ ಚಿಂತಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಗೇಶ್ ಮಾಸ್ಟರ್ ಬಂಧನ ಸರಿಯಾಗಿದೆ ಎಂದೂ ಹಿಂದೂಪರರು ವಾದಿಸಿದ್ದಾರೆ. ಸದ್ಯಕ್ಕೆ ಮಾಸ್ಟರ್ ಗೆ ಜಾಮೀನು ಸಿಕ್ಕಿದೆ. ಲೇಖಕ ಯೋಗೇಶ್ ಮಾಸ್ಟರ್ ಯಾರು? ಅವರ ಹಿನ್ನೆಲೆಯೇನು? ಎಂಬುದರ ಬಗ್ಗೆ ಸಂಕ್ಷಿಪ್ತ ಲೇಖನ ಇಲ್ಲಿದೆ ಓದಿ...

ಬಹುಮುಖ ಪ್ರತಿಭೆ ಎಂಬುದಕ್ಕೆ ಅನ್ವರ್ಥದಂತಿರುವ ಯೋಗೇಶ್ ಮಾಸ್ಟರ್ ಅವರು ಸಾಹಿತ್ಯ, ಸಂಗೀತ, ನೃತ್ಯ, ನಟನೆ ಹೀಗೆ ಕಲೆಗಳನ್ನು ಮೈಗೂಡಿಸಿಕೊಂಡಿರುವ ಒಬ್ಬ ಕಲಾವಿದ.

ಕ್ರಿಯಾಶೀಲ ಬರವಣಿಗೆ, ಕಾದಂಬರಿ, ಕಥೆ ಬರೆಯುವತ್ತ ಆಸಕ್ತಿ ಬೆಳೆಸಿಕೊಂಡ ಯೋಗೇಶ್ 16ನೇ ವಯಸ್ಸಿಗೆ 'ಭಗ್ನ ಹೃದಯ' ಎಂಬ ಕವನ ಸಂಕಲನ ಹೊರ ತಂದರು. ತರಂಗ ಪತ್ರಿಕೆಯಲ್ಲಿ ಪ್ರಕಟವಾದ 'ಸಮಾನಾಂತರ ರೇಖೆಗಳು' ಜನಪ್ರಿಯತೆ ಪಡೆದಿದ್ದಲ್ಲದೆ ಹಲವಾರು ಒಡೆದ ಕುಟುಂಬಗಳನ್ನು ಒಂದುಗೂಡಿಸಿದೆ. ನೂರಾರು ಲೇಖನ, ಕವನ, ಹಾಡುಗಳನ್ನು ಯೋಗೇಶ್ ಹೊಸೆದಿದ್ದಾರೆ.

ಜೋ ಜೋ ಲಾಲಿ ಎಂಬ ಲಾಲಿಹಾಡುಗಳ ಸಂಗ್ರಹವಿರುವ ಆಲ್ಬಂ ಕೂಡಾ ಹೊರ ತಂದಿರುವ ಇವರು ಅಂತರಾಕ್ಷಿ, ಭೂಮಿ, ಸಿತಾರಾ ಮುಂತಾದ ಅಲ್ಬಂಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಯೋಗೇಶ್ ಅವರು 'ಮಾಸ್ಟರ್' ಆಗಿದ್ದು ಹೇಗೆ, ಅವರ ವೃತ್ತಿ ಬದುಕಿನತ್ತ ಒಂದು ಸಣ್ಣ ನೋಟ ಇಲ್ಲಿದೆ ನೋಡಿ.. ಚಿತ್ರಗಳೆಲ್ಲವೂ ಇಂಟರ್ನೆಟ್ ನಿಂದ ಹೆಕ್ಕಿದ್ದು,

ಹುಟ್ಟು ಶಿಕ್ಷಣ, ಇಷ್ಟದ ಕ್ಷೇತ್ರ

ಹುಟ್ಟು ಶಿಕ್ಷಣ, ಇಷ್ಟದ ಕ್ಷೇತ್ರ

20/12/1968ರಲ್ಲಿ ಹುಟ್ಟಿದ ಯೋಗೇಶ್ ಅವರು ಟಿಸಿಎಚ್ ಓದಿದ್ದು 16 ವರ್ಷಗಳ ಕಾಲ ಶಿಕ್ಷಕರಾಗಿದ್ದು, 25 ವರ್ಷಗಳ ಕಾಲ ಕೌನ್ಸಿಲರ್ ಆಗಿದ್ದು, 10 ವರ್ಷಗಳ ಕಾಲ ಆಧಾತ್ಮ ಪ್ರವಚಕರಾಗಿದ್ದು, 25 ವರ್ಷಗಳ ಕಾಲ ನಾಟಕಾಕಾರರಾಗಿ ಕಾಲ ಸವೆಸಿದ್ದಾರೆ. ಗುರುಗಳಾಗಿ ಹಲವರನ್ನು ನಾಟಕ ರಂಗ, ಕಿರುತೆರೆ, ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.

ಜನಪ್ರಿಯ ವ್ಯಕ್ತಿ

ಜನಪ್ರಿಯ ವ್ಯಕ್ತಿ

ಬಿ, ಜಯಶ್ರೀ, ಸುರೇಶ್ ಅನಗನಹಳ್ಳಿ, ಆರ್ ನಾಗೇಶ್, ಎಂಎಸ್ ಸತ್ಯು, ಹಂಸಲೇಖ, ವಿ ಮನೋಹರ್ ಅವರಿಗೆ ಇವರು ಗೊತ್ತು.
ಚಿತ್ರಕಥೆ, ನಿರ್ದೇಶನ, ಸಂಗೀತ ಸಂಯೋಜನೆ, ಭಾಷಣ, ನೃತ್ಯ ಸಂಯೋಜನೆ, ಪ್ರವಾಸ, ಫೋಟೋಗ್ರಾಫಿ, ಮಾನವ ಜನಾಂಗ ಬಗ್ಗೆ ಅಧ್ಯಯನ ಎಲ್ಲವೂ ಇವರಿಗೆ ಇಷ್ಟ

ನಾಟಕರಂಗದಲ್ಲಿ

ನಾಟಕರಂಗದಲ್ಲಿ

ಸುಮಾರು 208ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇಂಗ್ಲೀಷ್ ಹಾಗೂ ಕನ್ನಡ ನಾಟಕರಂಗ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಕೆರೆಗೆ ಹಾರ, ಮಹಾಕವಿ ಕಾಳಿದಾಸ, ಶ್ರೀರಾಘವೇಂದ್ರ ಮಹಿಮೆ, ಅಲ್ಲಮ ಪ್ರಭು, ಕಲ್ಯಾಣ ಕ್ರಾಂತಿ, ಸಿದ್ದರಾಮ, ಪುಷ್ಪಕ ವಿಮಾನ, basic instinct, mr, detective, ave maria, once upon a time, Call of the God ಮುಂತಾದ ನಾಟಕಗಳನ್ನು ಹೆಸರಿಸಬಹುದು.

ಸಾಹಿತ್ಯ ಮತ್ತು ಸಂಗೀತ

ಸಾಹಿತ್ಯ ಮತ್ತು ಸಂಗೀತ

ಜೋ ಜೋ ಲಾಲಿ, ದೂರಿ ದುದ್ದೂರಿ, ವೇದ-ಗಾದೆ, ಗೋಲ್ಗಾಥ ಗೀತೆ, ರಂಗ ಜ್ಯೋತಿ, ಅಂಧೇರಿ ನಗರಿ, ಚಿನ್ನಾರಿ ಚಿಲಿಪಿಲಿ ಸೇರಿದಂತೆ 17 ಆಲ್ಬಂಗಳಿಗೆ ಸಂಗೀಯ ಸಂಯೋಜಿಸಿದ್ದಾರೆ.

ನೃತ್ಯಗಾರನಾಗಿ

ನೃತ್ಯಗಾರನಾಗಿ

ಯು.ಕೆ ಅರುಣ್ ಹಾಗೂ ಶ್ರೀಮತಿ ರಾಧಾ ಅಮರನಾಥ್ ಅವರಿಂದ ಭರತನಾಟ್ಯ ಕಲಿತ್ತಿದ್ದಾರೆ. ಶಾಸ್ತ್ರೀಯ ನೃತ್ಯ, ಬ್ಯಾಲೆ, ಪಾಶ್ಚಿಮಾತ್ಯ, ಸಮಕಾಲೀನ ನೃತ್ಯ ಪ್ರಕಾರಗಳಲ್ಲೂ ಪರಿಣತ

ಸಾಹಿತ್ಯ

ಸಾಹಿತ್ಯ

ಸಮಾನಾಂತರ ರೇಖೆಗಳು, ಶುಭ ರಾತ್ರಿ, ಬಾ ಕಂದ ಬಾ, ಭಗ್ನ ಹೃದಯ, ಕ್ಷಮೆಯಿರಲಿ, ಗಿರಿಜಾ, ಅಂಕುರ, ದಿವ್ಯ ಜೀವನಕ್ಕೆ ಪ್ರವೇಶಿಕೆ (ಅನುವಾದ), ಯೋಗ, ಮುದ್ರಾ, ಬಂಧ ಹಾಗೂ ಪ್ರಾಣಾಯಾಮ (ಅನುವಾದ)..ಮುಂತಾದ 17 ಕೃತಿಗಳು

ಅನಿಮೇಷನ್

ಅನಿಮೇಷನ್

ಹಲವಾರು ಚಿತ್ರಗಳಿಗೆ ವಾಯ್ಸ್ ಓವರ್- ನಿರ್ದೇಶನ ಮಾಡಿದ್ದಾರೆ,. ಬೆಡ್ ಟೈಮ್ ಸ್ಟೋರಿಸ್, ಟೇಲ್ಸ್ ಆಫ್ ತೆನಾಲಿ ರಾಮ, ಪಂಚತಂತ್ರ ಟೇಲ್ಸ್, ನೀತಿ ಕಥೆಗಳು, ಜಾತಕ ಟೇಲ್ಸ್ ಎಲ್ಲವೂ ಇಂಗ್ಲೀಷ್ ನಲ್ಲಿದೆ

ಸಾಕ್ಷ್ಯ ಚಿತ್ರ ಹಾಗೂ ಕಿರುಚಿತ್ರ

ಸಾಕ್ಷ್ಯ ಚಿತ್ರ ಹಾಗೂ ಕಿರುಚಿತ್ರ

ನಾಳೆ ಬರುವುದು ಮತ್ತೆ, ಅಹಿಂಸ ಪರಮೋಧರ್ಮ, ಬುದ್ಧ ಪೂರ್ಣಿಮಾ, ರಂಜಾನ್, ಕ್ಷಮೆಯಿರಲಿ, ಆನಂದವನ ಮುಂತಾದ ಎಂಟಕ್ಕೂ ಅಧಿಕ ಡಾಕ್ಯುಮೆಂಟರಿಗಳನ್ನು ಮಾಡಿದ್ದಾರೆ.

ಚಲನಚಿತ್ರಗಳಲ್ಲಿ ಇಷ್ಟವಾಗುವುದು

ಚಲನಚಿತ್ರಗಳಲ್ಲಿ ಇಷ್ಟವಾಗುವುದು

ಪ್ರೇಮ, ಬಂಧನ ಹಾಗೂ ಮಾನವೀಯತೆ ಇರುವ ಚಿತ್ರ ಇವರಿಗೆ ಇಷ್ಟವಂತೆ

ಇಷ್ಟವಾದ ಲೇಖಕರು

ಇಷ್ಟವಾದ ಲೇಖಕರು

ಹರ್ಮನ್ ಹೆಸ್ಸೆ, ಖಲೀಲ್ ಗಿಬ್ರಾನ್

ಪ್ರವಾಸಕ್ಕೆ

ಪ್ರವಾಸಕ್ಕೆ

ಜರ್ಮನಿ, ಸ್ವಿಟ್ಜರ್ಲೆಂಡ್ ಹಾಗೂ ಇಟಲಿಗೆ ಹೋಗುವುದು ಇಷ್ಟ

ದುಡ್ಡು ಸಿಕ್ಕರೆ

ದುಡ್ಡು ಸಿಕ್ಕರೆ

1 ಮಿಲಿಯನ್ ಡಾಲರ್ ಹಣ ಸಿಕ್ಕರೆ ಸಂಸ್ಕೃತಿ ಉಳಿಸುವ ಚಿತ್ರಗಳನ್ನು ನಿರ್ಮಿಸುತ್ತೇನೆ

English summary
A simple introduction to Yogesh master would be to call him 'multi talent personified' His interest in art and literature spreads over various dimensions like music, dance, acting so on so forth says his blog. Here is brief introduction of controversial author.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X