ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KPCC: ಬಿಡಿಎ ಸೈಟುಗಳಿಗಾಗಿ ಖತರನಾಕ್ ಐಡಿಯಾಗಳು!

By Srinath
|
Google Oneindia Kannada News

ಬೆಂಗಳೂರು, ಆಗಸ್ಟ್ 30: ಅಯ್ಯೋ ಶಿವನೇ, ಹೀಗೂ ಉಂಟೆ? ಎಂದು ಉದ್ಘರಿಸುವಂತೆ ಬಿಡಿಎ ಸೈಟಿಗಾಗಿ ಮಹಿಳೆಯೊಬ್ಬರು ವಿಧವೆಯಾಗಿದ್ದೂ ಅಲ್ಲದೆ ಅವರಿವರ ಮನೆಗಳಲ್ಲಿ ಮನೆಗೆಲಸದವಳಾಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ನಾನು ನಿರ್ಗತಿಕಳು. ನನಗೆ ಸೈಟು ಕೊಡಿ' ಎಂದು ಅರ್ಜಿ ಗುಜರಾಯಿಸಿರುವುದು ಬೆಳಕಿಗೆ ಬಂದಿದೆ.

ಛೀ, ಥೂ! ಯಾರಪ್ಪ ಇಂತಹ ಬಿಡಿಎ ಸೈಟು ಹೊಡೆಯಲು ಇಂತಹ ಮಾರ್ಗ ಕಂಡುಕೊಂಡಿದ್ದು ಎಂದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸಿ ನಂಜಪ್ಪ ಅಲಿಯಾಸ್ ಕಡೂರು ನಂಜಪ್ಪ ಅವರ ಧರ್ಮಪತ್ನಿ ಸುಗಂಧಮ್ಮನವರು.

ನೋಡಿ ನಾನು ನಿರ್ಗತಿಕಳು. ಹೊಟ್ಟೆಪಾಡಿಗಾಗಿ ಮನೆಗೆಲಸ ಮಾಡುತ್ತಾ ವಾರ್ಷಿಕ 18 ಸಾವಿರ ರೂಪಾಯಿಷ್ಟೇ ದುಡಿಯುತ್ತಿದ್ದೇನೆ. ಹಾಗಾಗಿ ಬನಶಂಕರಿ ಮೂರನೇ ಹಂತದಲ್ಲಿ ದಯವಿಟ್ಟು ನನಗೆ 20x30 ಸೈಟೊಂದನ್ನು ಕರುಣಿಸಿ ಎಂದು ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದಾರೆ.

ಇವರೊಬ್ಬರೇ ಅಲ್ಲ. ಇವರಿಬ್ಬರು ಪುತ್ರಿಯರೂ ಹೀಗೆ ಸುಳ್ಳೇ ಸುಳ್ಳು ಮಾಹಿತಿ ನೀಡಿ ಬಿಡಿಎ ನಿವೇಶನಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ. KPCC ಕಾರ್ಯದರ್ಶಿ ನಂಜಪ್ಪನವರಿಗೆ ನಾಲ್ವರು ಪುತ್ರಿಯರು. ಕೊನೆಯ ಪುತ್ರಿ ಎಸ್ಎನ್ ಲಕ್ಷ್ಮಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ MBA ಓದುತ್ತಿದ್ದಾರೆ.

ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ

ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ

ಆದರೆ ಆಕೆ ತಾನು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದು ವಾರ್ಷಿಕ 18 ಸಾವಿರ ರೂ ವರಮಾನ ಇದೆಯಷ್ಟೇ ಎಂದು ಅಲವತ್ತುಕೊಂಡು ಹಾಫ್ ಸೈಟಿಗೆ (20x30 ಅಡಿ) ಅಪ್ಲೈ ಮಾಡಿದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಶೋಷಣೆಗೊಳಗಾಗುತ್ತಾ ಬೆವರು ಸುರಿಸುವ ಹೆಣ್ಣು ಮಕ್ಕಳು ಸಹ ಈ ರೀತಿ ಮಾಡುವುದಿಲ್ಲ, ಅಲ್ವೇ.

ಈ ಪುಣ್ಯಾತಿಗಿತ್ತಿ ಇನ್ನೂ ಏನು ಮಾಡಿದ್ದಾಳೆ ಗೊತ್ತಾ? ನನಗೆ ಅಪ್ಪ ಇಲ್ಲ; ನನ್ನ ತಂದೆ ಚಿನ್ನಯೆಲ್ಲಯ್ಯ ಅವರು ನಿಧನರಾಗಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಈ ಚಿನ್ನಯೆಲ್ಲಯ್ಯ ಯಾರಪ್ಪ ಅಂತ ನೋಡಿದರೆ ಅವರು ನಂಜಪ್ಪನ ಅಪ್ಪ! ಇಡೀ ಖಾಂದಾನೇ ಭಾಗಿ!

ವಿದೇಶದಲ್ಲಿರುವ ನಂಜಪ್ಪ ಮಗಳು ಗಾರ್ಮೆಂಟ್ ಕೆಲಸಗಾತಿ

ವಿದೇಶದಲ್ಲಿರುವ ನಂಜಪ್ಪ ಮಗಳು ಗಾರ್ಮೆಂಟ್ ಕೆಲಸಗಾತಿ

ಇನ್ನು ನಂಜಪ್ಪನ ಮೂರನೆಯ ಮಗಳು ಎಸ್ ಎನ್ ಮಮತಾ ವಿದೇಶದಲ್ಲಿದ್ದಾರೆ. ಆದರೆ ಈಯಪ್ಪ, ಇಲ್ಲೇ ಬೆಂಗ್ಳೂರಿನಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದು ವಾರ್ಷಿಕ 15 ಸಾವಿರ ರೂ ವರಮಾನ ಹೊಂದಿದ್ದಾಳಂತೆ. ಹಾಗಾಗಿ, BDA ಹಾಫ್ ಸೈಟಿಗೆ ಅರ್ಜಿ ಹಾಕಿಕೊಂಡಿದ್ದಾಳೆ.

ಯಪ್ಪಾ ! ಸಾಕಾ ಇವರ ಪ್ರವರ...

ಯಪ್ಪಾ ! ಸಾಕಾ ಇವರ ಪ್ರವರ...

ಇನ್ನು ಬಾಕಿ ಉಳಿದಿರುವ ದೊಡ್ಡ ಮಗಳ ಕಥೆಯೂ ಹೇಳ್ತೀವಿ ಕೇಳಿಬಿಡಿ. ಈ KPCC ಕಾರ್ಯದರ್ಶಿ ನಂಜಪ್ಪನವರ ಮೊದಲ ಮಗಳ ಹೆಸರು ಎಸ್ಎನ್ ಜಯಶ್ರೀ. ಯಪ್ಪಾ! ಈಯಮ್ಮ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳಂತೆ. ಆದಾಯ 5 ಸಾವಿರ ರೂ. ಇದೆಯಂತೆ. ಹಾಗಂತ ಹೇಳಿ 20x30 ಸೈಟು (ನಿವೇಶನ ಸಂಖ್ಯೆ 63) ಗಿಟ್ಟಿಸಿದ್ದಾರೆ.
ಯಪ್ಪಾ ಈಯಮ್ಮಾ ಯಾರು ಗೊತ್ತಾ? ರಾಜ್ಯ ಸರಕಾರದಲ್ಲಿ ಅಧೀನ ಕಾರ್ಯದರ್ಶಿ ಮಟ್ಟದ ಅಧಿಕಾರಿ ಸ್ವಾಮಿ. ಇನ್ನು ಈಯಮ್ಮನ ಗಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ ಅಧಿಕಾರಿ ರೀ! ಸಾಕಾ ಇವರ ಪ್ರವರ...

ಬಡಪಾಯಿಗಳ ನಿವೇಶನಕ್ಕಾಗಿ ಇವರು ನಿರ್ಗತಿಕರಾದರು!

ಬಡಪಾಯಿಗಳ ನಿವೇಶನಕ್ಕಾಗಿ ಇವರು ನಿರ್ಗತಿಕರಾದರು!

ಹಾಳಾಗಿ ಹೋಗಲಿ, ಇವರು ಇಷ್ಟು ಕೆಳಮಟ್ಟದಲ್ಲಿ ಯೋಚಿಸಿದ್ದಾದರೂ ಯಾಕಪ್ಪಾ ಅಂದರೆ ಹೊಸಕೆರೆಹಳ್ಳಿಯಲ್ಲಿ ಕೊಳೆಗೇರಿ ನಿವಾಸಿಗಳಿಗಾಗಿ ಪುನರ್ವಸತಿ ಕಲ್ಪಿಸುವ ಯೋಜನೆಯ ಅಂಗವಾಗಿ ಬನಶಂಕರಿ 3ನೇ ಹಂತದಲ್ಲಿ 228 ಸೈಟುಗಳ ಹಂಚಿಕೆಗೆ BDA ಅರ್ಜಿ ಕರೆದಿತ್ತು. ಆ ಬಡಪಾಯಿಗಳಿಗಾಗಿ ಮೀಸಲಾದ ನಿವೇಶನಗಳನ್ನು ಹೊಡೆಯಲು ಉಳ್ಳವರು ನಿರ್ಗತಿಕರಾಗಿದ್ದಾರೆ ಅಷ್ಟೇ!

ಇದೆಲ್ಲಾ ಆರಂಭವಾಗಿದ್ದು 2004-05ರಲ್ಲಿ.

ಇದೆಲ್ಲಾ ಆರಂಭವಾಗಿದ್ದು 2004-05ರಲ್ಲಿ.

ಇದೆಲ್ಲಾ ಆರಂಭವಾಗಿದ್ದು 2004-05ರಲ್ಲಿ. ಈ ಅಪ್ಪ ನಂಜಪ್ಪ KPCC ಕಾರ್ಯದರ್ಶಿಯಷ್ಟೇ ಆಗಿರಲಿಲ್ಲ. ಜತೆಗೆ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಪರಮಾಪ್ತರೂ ಆಗಿದ್ದರು. ಹಾಗಾಗಿ ಈಯಪ್ಪಾನೇ ಮುಂದೆ ನಿಂತು ಕೊಳೆಗೇರಿ ನಿವಾಸಿಗಳಿಗಾಗಿ ಪುನರ್ವಸತಿ ಕಲ್ಪಿಸಲು 228 ಸೈಟುಗಳನ್ನು ತಾನೇ ಹಂಚಿಕೆ ಮಾಡುತ್ತೇನೆ ಎಂಬ ಮಹತ್ತರ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರು. ಜತೆಗೆ, ಕಳಂಕದ ಶನಿಯೂ ಅವರ ಹೆಗಲಿಗೇರಿತು. ಆ ಪ್ರಯತ್ನದಲ್ಲಿ ಬಡಬಗ್ಗರಿಗೆ ಸೈಟು ಕೊಡುವುದರ ಜತೆಗೆ ತಮ್ಮದೇ ಕುಟುಂಬದಲ್ಲಿರುವ 'ಬಡಬಗ್ಗರಿಗೂ' ಸೈಟುಗಳನ್ನು ವಿತರಿಸಿ ಕೃತಾರ್ಥರಾದರು.

Times of India ಪತ್ರಿಕೆಯಲ್ಲಿ ಪ್ರಕಟ:

Times of India ಪತ್ರಿಕೆಯಲ್ಲಿ ಪ್ರಕಟ:

ಸರಿ ಈ ಪಾಟಿ ಅಕ್ರಮವನ್ನು ಎಷ್ಟು ಕಾಲ ಅಂತ ಮುಚ್ಚಿಡಲು ಸಾಧ್ಯ? ಮುಂದೆ 2007ರಲ್ಲಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ಈ ಮಧ್ಯೆ, ಏನ್ರೀ ನಂಜಪ್ಪಾ ಇದೆಲ್ಲಾ ಎಂದು ಕೇಳಿದ್ದಕ್ಕೆ ಇದೆಲ್ಲಾ ವಿರೋಧಿ ಕೈವಾಡ. ನಾನು ಹಾಗೆಲ್ಲ ಮಾಡಿಯೇ ಇಲ್ಲ ಎಂದು ಕೈತೊಳೆದುಕೊಳ್ಳುತ್ತಾರೆ.

ಇನ್ನು BDA commissioner ಟಿ ಶ್ಯಾಂ ಭಟ್ಟರನ್ನು ಕೇಳಿದರೆ ಸದರಿ ಪ್ರಕರಣದಲ್ಲಿ 46 ಫಲಾನುಭವಿಗಳಿಗೆ ಅಕ್ರಮವಾಗಿ ಸೈಟು ವಿತರಣೆಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಫೈಲು ತರಿಸಿಕೊಂಡು ವಿಚಾರ ಮಾಡುತ್ತೇನೆ ಎಂದು ಪೈಲ್ಸು ಬಂದವರಂತೆ ಮುಖ ಮಾಡುತ್ತಾರೆ. ಇದೆಲ್ಲಾ Times of India ಆಂಗ್ಲ ಪತ್ರಿಕೆಯಲ್ಲಿ ಸವಿವರವಾಗಿ ಪ್ರಕಟವಾಗಿದೆ.

ಇರಿ ಸ್ವಾಮಿ ನಂಜಪ್ಪ ಸೈಟು ಪುರಾಣ ಇನ್ನೂ ಇದೆ

ಇರಿ ಸ್ವಾಮಿ ನಂಜಪ್ಪ ಸೈಟು ಪುರಾಣ ಇನ್ನೂ ಇದೆ

2005ರಲ್ಲಿ ತಾನೊಬ್ಬ ಪ್ರಭಾವಿ ನಾಯಕನೆಂದು ಹೇಳಿಕೊಂಡು BDA siteಗಳನ್ನು ಕೊಡಿಸಿಕೊಡುವುದಾಗಿ 6 ಜನರಿಂದ 60 ಲಕ್ಷ ರೂ ವಸೂಲಿ ಮಾಡಿದ್ದರು. ಆದರೆ ಸೈಟು ಮಾತ್ರ ಕೊಡಿಸಲೇ ಇಲ್ಲ. ಈ ಸಂಬಂಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ನಂಜಪ್ಪ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ನಂಜಪ್ಪನ ವಂಚನೆಯಿಂದ ರೊಚ್ಚಿಗೆದ್ದ ಜನ ಕಳೆದ ಏಪ್ರಿಲ್ ತಿಂಗಳಲ್ಲಿ ಮಹಾಲಕ್ಷ್ಮಿ ಲೇ ಔಟಿನಲ್ಲಿ ನಂಜಪ್ಪ ಮನೆಯೆದುರು ಧರಣಿಯನ್ನೂ ನಡೆಸಿದ್ದರು.

English summary
According to Times of India report, KPCC secretary Nanjappa wife Sugandhamma becomes widow housemaid to get BDA site. Two of his daughters also figure in this list, and have made false representations while applying for sites. The youngest of Nanjappa's four daughters, S N Lakshmi, pursuing an MBA in a reputed city college, has applied for a 20x30 sqft site, claiming to be a garment worker with an annual income of less than Rs 18,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X