ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮೃಗಾಲಯದ ವಾಲಿ ಇನ್ನಿಲ್ಲ

|
Google Oneindia Kannada News

chimpanzee
ಮೈಸೂರು, ಆ.7 : ಜಯಚಾಮರಾಜೇಂದ್ರ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಗಂಡು ಚಿಂಪಾಂಜಿ ವಾಲಿ ಮಂಗಳವಾರ ಮೃತಪಟ್ಟಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ವಾಲಿ ಕೆಲವು ದಿನಗಳಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅದಕ್ಕೆ ನೀಡಿದ ಚಿಕಿತ್ಸೆಗಳು ಫಲಕಾರಿಯಾಗದೆ ಸಾವನ್ನಪ್ಪಿದೆ.

52 ವರ್ಷ ವಯಸ್ಸಿನ ವಾಲಿ ಎರಡು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಮೃಗಾಲಯದ ವೈದ್ಯರು ವಾಲಿಗೆ ಅಗತ್ಯ ಚಿಕಿತ್ಸೆ ನೀಡಿದ್ದರು. ಆದರೆ, ಮಂಗಳವಾರ ಬೆಳಗ್ಗೆ ವಾಲಿ ಮೃತಪಟ್ಟಿದೆ.

ವಾಲಿ ಮೈಸೂರಿನ ಮೃಗಾಲಯದ ಹಿರಿಯ ಜೀವವಾಗಿತ್ತು. 1962 ಡಿ.1ರಂದು ಮ್ಯಾಕ್ಸ್‌ ಮತ್ತು ಮೀನಾ ಚಿಂಪಾಂಜಿಗೆ ಜನಿಸಿದ್ದ ಮರಿಗೆ ವಾಲಿ ಎಂದು ಹೆಸರಿಡಲಾಗಿತ್ತು. ವಾಲಿಯನ್ನು ಸರಿಯಾಗಿ ತಾಯಿ ಪೋಷಣೆ ಮಾಡಿರಲಿಲ್ಲ, ಆದ್ದರಿಂದ ಮೃಗಾಲಯದ ಸಿಬ್ಬಂದಿ ಅದರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

ಮೃಗಾಲಯದ ಭೀಷ್ಮ : ಮೃಗಾಲಯದ ಇತರ ಚಿಂಪಾಂಜಿಗಳೊಂದಿಗೆ ಬೆರೆಯದೇ ವಾಲಿ ಸದಾ ಏಕಾಂಗಿಯಾಗಿರುತ್ತಿತ್ತು. ಆದ್ದರಿಂದ ಸಿಬ್ಬಂದಿ ಇದನ್ನು ಭೀಷ್ಮ ಎಂದೇ ಕರೆಯುತ್ತಿದ್ದರು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಹೇಳಿದ್ದಾರೆ.

ವಾಲಿ ಮೃಗಾಲಯದ ಸಿಬ್ಬಂದಿ ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು. ಬೆಳಗ್ಗೆ ಚಹಾ ಸೇವಿಸುವ ಹವ್ಯಾಸ ವಾಲಿಗಿತ್ತು ಎಂದು ಮೃಗಾಲಯದ ಸಿಬ್ಬಂದಿ ವಾಲಿಯನ್ನು ನೆನಪಿಸಿಕೊಳ್ಳುತ್ತಾರೆ.

ಸಿನಿಮಾದಲ್ಲೂ ನಟಿಸಿತ್ತು : ವಾಲಿ ಬೆಳ್ಳಿಪರದೆಯ ಮೇಲೂ ಕಾಣಿಸಿಕೊಂಡಿತ್ತು. 1986ರಲ್ಲಿ ಬಿಡುಗಡೆಗೊಂಡ ಅಂಬರೀಶ್‌ ನಾಯಕನಾಗಿ ನಟಿಸಿದ್ದ ಮೃಗಾಲಯ ಚಿತ್ರದಲ್ಲಿ ವಾಲಿಯನ್ನು ಬಳಸಿಕೊಳ್ಳಲಾಗಿತ್ತು.

English summary
Wali the 52-year-old male chimpanzee at the Sri Chamarajendra Zoological Gardens Mysore died of old age-related illness on Tuesday, August 6. The animal was the main attraction at the zoo and often played pranks on visitors. zoo officials said, it had been sick for the past two weeks. RIP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X