Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ರಾಜಕೀಯಕ್ಕೆ ಬರೋಲ್ಲ: ರಾಧಿಕಾ ಕುಮಾರಸ್ವಾಮಿ ಘೋಷಣೆ

Posted by:
Updated: Monday, May 27, 2013, 9:21 [IST]
 

ರಾಜಕೀಯಕ್ಕೆ ಬರೋಲ್ಲ: ರಾಧಿಕಾ ಕುಮಾರಸ್ವಾಮಿ ಘೋಷಣೆ

ಮಡಿಕೇರಿ, ಮೇ 27: ಅತ್ತ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವ ಮಾತು ಹಾಗಿರಲಿ, ಪ್ರತಿಪಕ್ಷ ಸ್ಥಾನವೂ ದಕ್ಕುವುದು ದುರ್ಲಭವಾಗಿರುವಾಗ ನಟಿ, ನಿರ್ಮಾಪಕಿ ರಾಧಿಕಾ ಅವರು ತಾವು ರಾಜಕೀಯದಿಂದ ದೂರ ದೂರ. ಎಂದಿಗೂ ರಾಜಕೀಯಕ್ಕೆ ಬರೋಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ರಾಜಕೀಯದಿಂದ ದೂರವೆಂದಿರುವ ನಟಿ ರಾಧಿಕಾ ಅವರು ಸಿನಿಮಾ ರಂಗಕ್ಕೆ ಮತ್ತಷ್ಟು ಹತ್ತಿರವಾಗುವ ಮಾತನ್ನಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಮಾಧಾನ ತಂದಿದೆ.

ನಿರ್ಮಾಪಕಿ ರಾಧಿಕಾ ಅವರು ತಮ್ಮದೇ ನಿರ್ಮಾಣದ 'ಸ್ವೀಟಿ ನನ್ನ ಜೋಡಿ' ಚಿತ್ರೀಕರಣದ ನಡುವೆ ರಿಲ್ಯಾಕ್ಸ್ ಆಗಲು, ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಿಗೆ ವಿಹಾರದಲ್ಲಿದ್ದಾರೆ. ಕುಶಾಲನಗರದ ಹೊಟೇಲ್ ಉದ್ಯಮಿಯೊಬ್ಬರ ಮನೆಯಲ್ಲಿ ಆತಿಥ್ಯ ಸ್ವೀಕರಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯದ ಬಗ್ಗೆ ಮಾತನಾಡಿದರು.

'ಮೊದಲಿಂದಲೂ ಅಷ್ಟೇ ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಆದರೆ ಸಿನಿಮಾ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದೇನೆ. ಇದುವರೆಗೆ ಕನ್ನಡ, ತೆಲುಗು, ತಮಿಳು ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.

'6 ವರ್ಷಗಳಿಂದ ಸಿನಿಮಾ ಕ್ಷೇತ್ರದಿಂದ ದೂರವಿದ್ದೆ. ಈಗ ಮಗಳು ಶಮಿಕಾ ಕುಮಾರಸ್ವಾಮಿಗೆ 4 ವರ್ಷ ತುಂಬುತ್ತಿದೆ. ಆದ್ದರಿಂದ ಮತ್ತೆ ಸಿನಿಮಾದತ್ತ ಒಲವು ತೋರುತ್ತಿದ್ದೇನೆ. ನನ್ನ ನಿರ್ಮಾಣದ, ವಿಜಯ ಲಕ್ಷ್ಮಿಸಿಂಗ್ ನಿರ್ದೇಶಿಸಿರುವ 'ಸ್ವೀಟಿ ನನ್ನ ಜೋಡಿ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದಲ್ಲಿ ಆದಿತ್ಯ ನನಗೆ ಹೀರೋ ಆಗಿದ್ದಾರೆ. ನಟಿ ರಮ್ಯಾಕೃಷ್ಣ ತಾಯಿಯ ಪಾತ್ರ ಮಾಡಿದ್ದರೆ, ನಟ ಜೈಜಗದೀಶ್ ತಂದೆ ಪಾತ್ರದಲ್ಲಿದ್ದಾರೆ. ಎಂದಿನಂತೆ ಸಾಧು ಕೋಕಿಲಾ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ' ಎಂದು ರಾಧಿಕಾ ತಿಳಿಸಿದರು.

ಮಗಳೇ ಸರ್ವಸ್ವ: 'ಇದುವರೆಗೂ, ಸ್ವೀಟಿ ಮಗಳು ನನ್ನ ಜತೆ ಶೂಟಿಂಗಿಗೆಲ್ಲ ಬರುತ್ತಿದ್ದಳು. ಶಮಿಕಾಳನ್ನು ಈ ವರ್ಷ ಶಾಲೆಗೆ ಸೇರಿಸಬೇಕು ಎಂದು ತಾಯಿಯಾಗಿ ತಮ್ಮ ಜವಾಬ್ದಾರಿಯನ್ನು ನೆನಪಿಸಿಕೊಂಡ ರಾಧಿಕಾ, ನನಗೆ ಸ್ನೇಹಿತರು ಅಷ್ಟಾಗಿಲ್ಲ. ಹೀಗಾಗಿ ನನಗೆ ಮಗಳು ಶಮಿಕಾಳೇ ಉತ್ತಮ ಸ್ನೇಹಿತೆ' ಎಂದು ರಾಧಿಕಾ ಕುಮಾರಸ್ವಾಮಿ ಹೂ ನಗೆ ಚೆಲ್ಲಿದರು.

Story first published:  Monday, May 27, 2013, 9:17 [IST]
English summary
Kannada Actress Radhika Kumaraswamy not to join politics. She made it clear that she wont join politics at any time of her life. She was speaking to reporters in Madikeri yesterday (May 26).
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like