ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ ಫಲಿತಾಂಶ ಪ್ರಕಟ, ಸಿಇಟಿಗೆ ಸಜ್ಜಾಗಿ

By Srinath
|
Google Oneindia Kannada News

CBSE results declared - Get ready for Karnataka CET 2013 ranking
ಬೆಂಗಳೂರು, ಮೇ 27: ಸಿಬಿಎಸ್ಇ ಬೋರ್ಡ್ ಪರೀಕ್ಷಾ ಫಲಿತಾಂಶಗಳು ಸಾಕಷ್ಟು ವಿಳಂಬವಾಗಿಯೇ ಪ್ರಕಟವಾಗಿದೆ. ಇದೇ ವೇಳೆ ಮುಂದೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವ್ಯಾಸಂಗಕ್ಕಾಗಿ ಕರ್ನಾಟಕ ಸರಕಾರ ನಡೆಸುವ ಸಿಇಟಿ ಫಲಿತಾಂಶ ನಾಳೆ ಮಧ್ಯಾಹ್ನದ ವೇಳೆಗೆ ಪ್ರಕಟವಾಗಲಿದೆ.

ಈ ಮಧ್ಯೆ, CBSE 12ನೇ ತರಗತಿಯ ಫಲಿತಾಂಶ ವಿಳಂಬದಿಂದಾಗಿ ಸಿಇಟಿ ranking ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಆದರೆ ವಿದ್ಯಾರ್ಥಿಗಳು ಇದರ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ CET ಸೆಲ್ ಇದಕ್ಕೆ ಏರ್ಪಾಡುಗಳನ್ನು ಮಾಡಿದೆ.

ಏನಪಾ ಅಂದರೆ CBSE 12ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಗಳನ್ನು ಆದಷ್ಟು ಬೇಗ ಪಡೆದುಕೊಂಡು ಆ ದಾಖಲೆಯ ಜತೆಗೆ ಸಿಇಟಿ ಕೇಳುವಂತಹ ಇತರೆ ದಾಖಲೆಗಳೊಂದಿಗೆ ಸಾಧ್ಯವಾದರೆ ಇಂದೇ ಸಮೀಪದ ಸಿಇಟಿ ಸೆಲ್ ಗೆ ಸಲ್ಲಿಸಬೇಕು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) Karnataka CET 2013 ಗಾಗಿ, ವಿದ್ಯಾರ್ಥಿಗಳು ಸಲ್ಲಿಸುವ ಅಂಕಗಳನ್ನು ಆಧಿರಿಸಿ, ಅವರಿಗೆಂದೇ ಪ್ರತ್ಯೇಕ CET ranking ಅನ್ನು ಪ್ರಕಟಿಸುತ್ತದೆ. ಮತ್ತು ಜೂನ್ 5ರಿಂದ ಆ ranking ಅನ್ವಯ counselling ನಡೆಸುತ್ತಾರೆ.

Karnataka CET 2013 ಗಾಗಿ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಜೂನ್ 6ರಿಂದ Document verification/ counselling ಆರಂಭವಾಗುತ್ತದೆ. ಅದರ ಸಂಪೂರ್ಣ ವಿವರವನ್ನು KEA Websiteನಲ್ಲಿ ನೀಡಲಾಗಿದೆ. ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.

ಗಮನಿಸಿ: CET ಆಯ್ಕೆ ಬಯಸುವ ಹೊರನಾಡು ಕನ್ನಡಿಗರು ಮತ್ತು ಗಡಿನಾಡು ಕನ್ನಡಿಗರು ಮತ್ತು ಇತರೆ ವಿಶೇಷ ವರ್ಗದ ಅಭ್ಯರ್ಥಿಗಳು ಬೆಂಗಳೂರು ಕೇಂದ್ರದಲ್ಲಿಯೇ counsellingಗೆ ಹಾಜರಾಗಬೇಕು.

ಎಲ್ಲ ವರ್ಗದವರಿಗೂ ಅನ್ವಯವಾಗುವಂತೆ ಆಯಾ ದಿನಗಳಂದು (ಜೂನ್ 6 ರಿಂದ 23 ರವರೆಗೂ) counselling ಮುಗಿದ ನಂತರ ಸಂಜೆ ವೇಳೆಗೆ ಅರ್ಹ ಅಭ್ಯರ್ಥಿಗಳ ವಿವರವನ್ನು KEA ಪ್ರಕಟಿಸಲಿದೆ. All the Best!

English summary
CBSE results declared - Get ready for Karnataka CET 2013 ranking. Karnataka Examinations Authority (KEA), Bangalore has revised the document verification schedules dates for admission in to professional courses in colleges of Karnataka. Candidates need bring their original documents for verification for any of KEA's 13 Helpline centre detailed in KEA Website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X