ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಿತಕ್ಕೊಳಗಾದ ಯುವಕ ಪಾರು, ಹಾವು ಸಾವು!

By Prasad
|
Google Oneindia Kannada News

Snake dies after biting youth in Belgaum district
ಬೆಳಗಾವಿ, ಮೇ. 15 : ಮಂಗಳವಾರ ರಾತ್ರಿ ಯುವಕನೊಬ್ಬನನ್ನು ಕಚ್ಚಿ ಗಾಯಗೊಳಿಸಿದ್ದ ನಾಗರಹಾವೊಂದು ಬುಧವಾರ ಸತ್ತ ಘಟನೆ ಬೆಳಗಾವಿ ಜಿಲ್ಲೆಯ ಗ್ರಾಮಸ್ಥರನ್ನು ಚಕಿತಗೊಳಿಸಿದೆ. ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಬಳಿಯ ಶಿವಾಪುರ ಎಂಬ ಹಳ್ಳಿಯೊಂದರಲ್ಲಿ.

ಕಳೆದ ರಾತ್ರಿ 11 ಗಂಟೆಯ ಹೊತ್ತಿಗೆ ಮಲಗಿದ್ದ ಭರಮಪ್ಪನ ಬಳಿ ಹಾವು ಬಂದು ಮಲಗಿದೆ. ಭರಮಪ್ಪನ ಕೈತಗುಲಿದ್ದರಿಂದ ಎಚ್ಚೆತ್ತ ನಾಗರಹಾವು ಯುವಕನ ಬಲಗೈನ ತೋರುಬೆರಳನ್ನು ಕಚ್ಚಿದೆ. ಯಮಕನಮರಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭರಮಪ್ಪ ಸಾವಿನಿಂದ ಪಾರಾಗಿದ್ದಾನೆ. ಆದರೆ, ಆ ಅದೃಷ್ಟ ನಾಗರಹಾವಿಗಿರಲಿಲ್ಲ. ಕಚ್ಚಿದ ಹಾವು ಬುಧವಾರ ಬೆಳಗಿನ ಜಾವ ಸಾವನ್ನಪ್ಪಿದೆ.

ಗ್ರಾಮಸ್ಥರು ಹೇಳುವುದೇನೆಂದರೆ, ಹಾವನ್ನು ಯಾರೂ ಹೊಡೆದಿಲ್ಲ. ನಾಗರಹಾವನ್ನು ಹೊಡೆದರೆ ಕಚ್ಚಿದ ವ್ಯಕ್ತಿ ಸಾವಿಗೀಡಾಗುತ್ತಾನೆ ಎಂಬ ನಂಬಿಕೆ ಇಲ್ಲಿನ ಗ್ರಾಮಸ್ಥರಲ್ಲಿ ಬಲವಾಗಿದೆ. ಇಲ್ಲಿ ಕಚ್ಚಿಸಿಕೊಂಡ ಯುವಕ ಸತ್ತಿಲ್ಲ, ಬದಲಾಗಿ ಹಾವೇ ಸಾವಿಗೀಡಾಗಿದೆ. ಹಾವನ್ನು ತಾನು ಕೂಡ ಹೊಡೆದಿಲ್ಲ ಎಂದು ಯುವಕ ಭರಮಪ್ಪ ಹೇಳುತ್ತಾನೆ.

ಭರಮಪ್ಪನಿಗೆ ಹಾವು ಕಚ್ಚಿದ ಸಂಗತಿ ಸ್ನೇಹಿತರಿಂದ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಭರಮಪ್ಪನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಕಚ್ಚಿದ ಹಾವಿನ ಸುತ್ತ ಗ್ರಾಮಸ್ಥರು ಜಮಾಯಿಸಿದ್ದಾರೆ. ಯಾರೂ ಅದನ್ನು ಹೊಡೆಯದಂತೆ ಬೆಳಗಿನ ಜಾವದವರೆಗೆ ಎಚ್ಚರ ವಹಿಸಿದ್ದಾರೆ. ಬೆಳಿಗ್ಗೆ ನೋಡಿದಾಗ ಹಾವು ಸಾವಿಗೀಡಾಗಿತ್ತು. ಪಾಶಾಣ ತಿಂದ ಇಲಿಯನ್ನು ನುಂಗಿದ ಪರಿಣಾಮವಾಗಿ ಹಾವು ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ.

English summary
A young person was lucky enough to survive snake bite, but the snake was not. The cobra died on Wednesday morning in a village near Yamakanmaradi village in Hukkeri taluk in Belgaum district. Villagers believe that if the snake is beaten, the bitten person dies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X