ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಮಾಣಿಕ ರಾಜಕಾರಣಿ ಸಿಎಂ ಸಿದ್ದರಾಮಯ್ಯ ವ್ಯಕ್ತಿಚಿತ್ರ

By Mahesh
|
Google Oneindia Kannada News

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಮೇ 13.2016ಕ್ಕೆ ಮೂರು ವರ್ಷಗಳನ್ನು ಪೂರೈಸಿದೆ. ಜನಪ್ರಿಯ ಯೋಜನೆಗಳ ಘೋಷಣೆ ಜೊತೆಗೆ ಎಲ್ಲಾ ಸ್ತರದ ಜನರ ಆಶೋತ್ತರವನ್ನು ಈಡೇರಿಸುವ ಭರವಸೆಯೊಂದಿಗೆ ಸರ್ಕಾರ ನಿಧಾನಗತಿಯಲ್ಲಿ ಆಡಳಿತ ಯಂತ್ರವನ್ನು ಚಲಿಸುತ್ತಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದಾಗ ಬರೆದ ವ್ಯಕ್ತಿಚಿತ್ರ ಲೇಖನ ಇಲ್ಲಿದೆ ಓದಿ...

ಸಿದ್ದರಾಮಯ್ಯ ಕರ್ನಾಟಕ ಕಂಡಿರುವ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು. ತವರು ಜಿಲ್ಲೆ ಮೈಸೂರು ಅಲ್ಲದೇ ನಾಡಿನ ವಿವಿಧೆಡೆ ಸಿದ್ದರಾಮಯ್ಯ ಬಗ್ಗೆ ಇಂದಿಗೂ ಒಳ್ಳೆ ಹೆಸರಿದೆ ಎಂದರೆ ಅದಕ್ಕೆ ಅವರ ಪ್ರಾಮಾಣಿಕತೆ, ರಾಜಕೀಯ ಅನುಭವ, ಹಗರಣದಲ್ಲಿ ಸಿಲುಕಿಕೊಳ್ಳದಿರುವುದೇ ಇದಕ್ಕೆ ಕಾರಣ. ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿರುವ ಸಿದ್ದರಾಮಯ್ಯ ಅವರ ಜೀವನದ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಸಿದ್ದರಾಮಯ್ಯ ಅವರು ಜನತಾ ಪರಿವಾರದ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಕರ್ನಾಟಕದ ಪ್ರಮುಖ ಹಾಗು ಪ್ರಬಲ ರಾಜಕಾರಣಿಯಾಗಿ, ನೇರ ನಡೆ-ನುಡಿಯ ವ್ಯಕ್ತಿಯೆಂದೆ ಹೆಸರುವಾಸಿ, ಹಗರಣ ಮುಕ್ತ, ಸರಳ ವ್ಯಕ್ತಿತ್ವವೇ ಸಿದ್ದರಾಮಯ್ಯ ಪ್ಲಸ್ ಪಾಯಿಂಟ್. ರಾಜಕೀಯ ಜೀವನದಲ್ಲಿ ಮೂರು ಬಾರಿ ಹಣಕಾಸು ಸಚಿವರಾಗಿ ನಾಡಿಗೆ ಬಹಳ ಉತ್ತಮವಾದ ಆಯ-ವ್ಯಯವನ್ನು ಕೊಟ್ಟಿದ್ದಾರೆ. ಎರಡು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗೋ ಕನಸು ನಿನ್ನೆ ಮೊನ್ನೆಯದಲ್ಲ, ಹಲವು ವರ್ಷಗಳ ತೀರದ ಬಯಕೆ, ಕಾಂಗ್ರೆಸ್ ಸೇರುವ ಮುನ್ನ ದಿನದಿಂದಲೂ ಸಿದ್ದು ಅವರಿಗೆ 'ಸಿಎಂ' ಆಗೋ ಅವಕಾಶಗಳು ಬಂದಿತ್ತು, ಆದರೆ, ಸಿದ್ದುಗೆ ಈ ಬಾರಿ ಸಿಎಂ ಆಗೋ ಕನಸು ಈಡೇರಿದೆ.

ಬರೀ ಕುರುಬ ಜನಾಂಗದ ನಾಯಕರಾಗಿ ಬೆಳೆಯಲಿಲ್ಲ. ರಾಜ್ಯದ ಮೂರನೇ ಅತಿದೊಡ್ಡ ಜನಾಂಗದ ನಾಯಕ ಮಾತ್ರ ಎನಿಸಿಕೊಳ್ಳದೆ ಎಲ್ಲಾ ವರ್ಗಕ್ಕೂ ಸಲ್ಲುವ ಜನರ ನಿಜವಾದ ಪ್ರತಿನಿಧಿ ಎನಿಸಿಕೊಂಡಿರುವ ಸಿದ್ದರಾಮಯ್ಯ ಕುಟುಂಬ ಹಾಗೂ ರಾಜಕೀಯ ಅನುಭವ ಹಾಗೂ ವ್ಯಕ್ತಿತ್ವದ ಬಗ್ಗೆ ಮುಂದಿನ ಚಿತ್ರಾವಳಿಯಲ್ಲಿ ತಪ್ಪದೇ ಓದಿ...

ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ಸಿದ್ದು ಫ್ಯಾಮಿಲಿ: 12 ಆಗಸ್ಟ್ 1948ರಲ್ಲಿ ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಿದ್ದರಾಮಯ್ಯ ಜನಿಸಿದರು.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ. ದಂಪತಿಗೆ ಇಬ್ಬರು ಪುತ್ರರು. ಕಿರಿಯ ಮಗ ಯತೀಂದ್ರ ವೈದ್ಯರಾಗಿದ್ದಾರೆ. ಹಿರಿಯ ಪುತ್ರ ರಾಕೇಶ್ ಸಿನಿಮಾ ರಂಗ ಪ್ರವೇಶಿಸಿ ಸೋಲುಂಡು ಸುಮ್ಮನಾಗಿದ್ದಾರೆ. ಸಿದ್ದು ಅವರಿಗೂ ಸಿನಿಮಾರಂಗದಿಂದ ಕೆಲವು ಬಾರಿ ನಟಿಸುವಂತೆ ಕರೆ ಬಂದಿದೆ. ನಟನೆ ಎಂದರೆ ಮಾರು ದೂರ ಹಾರುವ ಸಿದ್ದರಾಮಯ್ಯ 'ರಿಯಲ್ ಸ್ಟಾರ್'

ರಾಜಕೀಯಕ್ಕೆ ಪ್ರವೇಶ ಪಡೆಯುವ ಮುನ್ನ ಮೈಸೂರಿನಲ್ಲಿ ಕೆಲಕಾಲ ವಕೀಲ ವೃತ್ತಿಯಲ್ಲಿದ್ದರು ಹಾಗೂ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ರಾಜಕೀಯ ಅನುಭವ: 1978ರಲ್ಲಿ ಮೈಸೂರಿನ ತಾಲೂಕು ಬೋರ್ಡ್ ಚುನಾವಣೆಗೆ ಭಾರತೀಯ ಲೋಕ ದಳ ಟಿಕೆಟ್ ಪಡೆದು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದರು. 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಲ್ಲದೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಹೊಸ ನಾಯಕದ ಉದಯವಾಯಿತು.

ನಂತರ ಸಮಾನ ಮನಸ್ಕರೊಡನೆ ಸೇರಿ ಜನತಾ ಪಕ್ಷಕ್ಕೆ ಸೇರಿಕೊಂಡರು. ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಹೆಸರು ಗಳಿಸಿದರು. ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸುವ ಪ್ರಯತ್ನ ಸಫಲವಾಯಿತು. ಮುಂದುವರೆದಿದೆ...

ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

1985ರಲ್ಲಿ ಮಧ್ಯಂತರ ಚುನಾವಣೆಯಲ್ಲಿ ಮತ್ತೊಮ್ಮೆ ಅಸೆಂಬ್ಲಿಗೆ ಎಂಟ್ರಿ ಕೊಟ್ಟಿದ್ದು ಬರೀ ಶಾಸಕರಾಗಿ ಅಲ್ಲ ಪಶು ಸಂಗೋಪಣೆ ಖಾತೆ ಸಚಿವರಾಗಿ ಕಾಣಿಸಿಕೊಂಡರು.

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಸಿದ್ದರಾಮಯ್ಯ ಅವರ ಉತ್ಸಾಹ ಕಂಡು ರೇಷ್ಮೆ, ಸಾರಿಗೆ ಸೇರಿದಂತೆ ಹಲವಾರು ಖಾತೆಗಳನ್ನು ನೀಡಿದರು. ಈ ಮೂಲಕ ಸಿದ್ದರಾಮಯ್ಯ ಅವರು ವೈವಿಧ್ಯಮಯ ಕ್ಷೇತ್ರಗಳ ಖಾತೆಗಳನ್ನು ನಿಭಾಯಿಸಿದ ಅನುಭವ ಪಡೆದರು. ಮುಂದುವರೆದಿದೆ...
ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ಆದರೆ, ಕಾಂಗ್ರೆಸ್ ನಾಯಕ ರಾಜಶೇಖರಮೂರ್ತಿ ಅವರು 1989ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರಿಗೆ ಸೋಲಿನ ಕಹಿ ಉಣಿಸಿದರು. ಆದರೂ 1992ರಲ್ಲಿ ಜನತಾ ದಳದ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದರಾಮಯ್ಯ ಮುಂದುವರೆದರು.

ಎಚ್ ಡಿ ದೇವೇಗೌಡ ಹಾಗೂ ರಾಮಕೃಷ್ಣ ಹೆಗಡೆ ಅವರ ರಾಜಕೀಯ ಪರ್ವಕಾಲವನ್ನು ಹತ್ತಿರ ಕಂಡ ಸಿದ್ದರಾಮಯ್ಯ ಅವರು ಇಬ್ಬರಿಂದ ಸಾಕಷ್ಟು ಕಲಿತರು.ಮುಂದುವರೆದಿದೆ
ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ಆರ್ಥಿಕ ಸಚಿವರಾಗಿ ಸಿದ್ದರಾಮಯ್ಯ: 1994ರಲ್ಲಿ ದೇವೇಗೌಡರ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದಾಗ ಸಿದ್ದರಾಮಯ್ಯ ಅವರನ್ನು ವಿತ್ತ ಸಚಿವರಾದರು. ನಂತರ ಹೆಗಡೆ ಹಾಗೂ ದೇವೇಗೌಡ ಇಬ್ಬರಿಗೂ ಆಪ್ತರಾಗಿದ್ದ ಇನ್ನೊಬ್ಬ ನಾಯಕ ಜೆಎಚ್ ಪಟೇಲ್ ಅವರ ಸಖ್ಯ ಸಿದ್ದರಾಮಯ್ಯ ಅವರಿಗೆ ಸಿಕ್ಕಿತು. 1996ರಲ್ಲಿ ಪಟೇಲ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಪಡೆದರು. ಮುಂದುವರೆದಿದೆ

ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ನಂತರ ಜನತಾ ಪರಿವಾರ ಇಬ್ಭಾಗ ಜೆಡಿಎಸ್ ಉದಯ. ಹೆಗಡೆ ಹಿಂದೆ ಹೋಗದೆ ದೇವೇಗೌಡ ಬಳಿ ಬಂದ ಸಿದ್ದರಾಮಯ್ಯ ಕಂಗಳಲ್ಲಿ ಸಿಎಂ ಸ್ಥಾನ ಕನಸು ಚಿಗುರೊಡೆದಿತ್ತು.

ಆದರೆ, ಮತ್ತೊಮ್ಮೆ ಸೋಲಿನ ರುಚಿ ಕಾಣಬೇಕಾಯಿತು. 2004ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿ ನಾನೇ ಎಂದು ಸಿದ್ದರಾಮಯ್ಯ ರೆಡಿಯಾದರು ಆದರೆ, ಧರಂಸಿಂಗ್ ಗೆ ಸಿಎಂ ಪಟ್ಟ ಸಿಕ್ಕಿತು. ಮತ್ತೊಮ್ಮೆ ಸಿದ್ದು ಡಿಸಿಎಂ ಆದರು. ಮುಂದುವರೆದಿದೆ...
ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ಇದರಿಂದ ಮುನಿಸಿಕೊಂಡ ಸಿದ್ದರಾಮಯ್ಯ ದೇವೇಗೌಡ ಸಹವಾಸ ತೊರೆದು ಜೆಡಿಎಸ್ ತೊರೆದ ಮೇಲೆ ದೀನ ದಲಿತರನ್ನು ಒಂದು ಗೂಡಿಸಿ ಹೊಸ ಕ್ರಾಂತಿ ಮಾಡುವ ಸೂಚನೆಯನ್ನು ಸಿದ್ದರಾಮಯ್ಯ ನೀಡಿದರು.

2005ರಲ್ಲಿ ಅಲ್ಪ ಸಂಖ್ಯಾತ ಹಿಂದುಳಿದ ದಲಿತ (ಅಹಿಂದ) ರಚನೆಯಾಯಿತು. ಆದರೆ, ಆಗಾಗ ಸುದ್ದಿಯಲ್ಲಿದ್ದರೂ ಹೊಸ ಕ್ರಾಂತಿ ಹುಟ್ಟು ಹಾಕುವಲ್ಲಿ ಅಷ್ಟು ಯಶಸ್ವಿಯಾಗಲಿಲ್ಲ. ಮುಂದುವರೆದಿದೆ...
ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

2006ರ ಹೊತ್ತಿಗೆ ಸಂಪೂರ್ಣ ಕಾಂಗ್ರೆಸ್ ನಾಯಕರಾಗಿಬಿಟ್ಟರು. ಚಾಮುಂಡೇಶ್ವರಿ ಕ್ಷೇತ್ರದ ಮರು ಚುನಾವಣೆಯಲ್ಲಿ ಕೇವಲ 257 ಮತಗಳ ಅಂತರದಿಂದ ಗೆದ್ದು ಬಿಜೆಪಿ -ಜೆಡಿಎಸ್ ಮಾಡಿದ ತಂತ್ರಕ್ಕೆ ತಿರುಗೇಟು ನೀಡಿದರು.

2008ರಲ್ಲಿ ತವರು ಕ್ಷೇತ್ರ ವರುಣಾದಿಂದ ಸ್ಪರ್ಧಿಸಿ ಆಯ್ಕೆಯಾದರು. 2013ರಲ್ಲಿ ಗೆದ್ದು ಸಿಎಂ ಸ್ಥಾನ ಪಡೆಯುವ ಕನಸನ್ನು ನನಸಾಗಿಸಿಕೊಳ್ಳುವ ಆತುರದಲ್ಲಿದ್ದಾರೆ.

ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ಸಿದ್ದು ಮೈನಸ್ ಪಾಯಿಂಟ್ : ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿಯಾದರೂ ಅಮಾಯಕರಲ್ಲ. ದೇವೇಗೌಡ, ರಾಮಕೃಷ್ಣ ಹೆಗಡೆ ಅವರಂತೆ ಸೂಕ್ಷ್ಮವಾದ ರಾಜಕೀಯ ನಡೆ ಮೂಲಕ ಅಂದುಕೊಂಡಿದ್ದನ್ನು ಸಾಧಿಸಲು ಹಠಮಾರಿಯಾಗಬಲ್ಲ ವ್ಯಕ್ತಿ.

ಭ್ರಷ್ಟಾಚಾರ ನಿರ್ಮೂಲನೆ, ರಾಮರಾಜ್ಯ ನಿರ್ಮಾಣ, ಗ್ರಾಮ ಸ್ವರಾಜ್ಯ, ಹಿಂದುಳಿದ ಅಲ್ಪ ಸಂಖ್ಯಾತರ ಉದ್ದಾರ ಎಂಬ ಕಾಂಗ್ರೆಸ್ ಘೋಷ ವಾಕ್ಯಕ್ಕೆ ತಕ್ಕಂತೆ ನಡೆದುಕೊಳ್ಳುವ ಭರವಸೆ ನೀಡಬಲ್ಲ ನಾಯಕ ಎನಿಸಿದರೂ ಜಾಣ ಮರೆವು, ಜಾಣ ಪೆದ್ದು ಕೆಲವೊಮ್ಮೆ ಎದ್ದು ಕಾಣುತ್ತದೆ.

ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ಕೆಲವೊಮ್ಮೆ ನಿರ್ಲಕ್ಷ್ಯದ ಹೇಳಿಕೆ ನೀಡುವ ವ್ಯಕ್ತಿ ಎನಿಸಿದರೂ ಸ್ಟ್ರಾಂಗ್ ಕ್ಯಾರೆಕ್ಟರ್. ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಕೆಯಲ್ಲಿ ಇನ್ನೂ ಸಂಪೂರ್ಣ ಯಶ ಸಿಕ್ಕಿಲ್ಲ. ಮೈಸೂರು ಪ್ರಾಂತ್ಯದಲ್ಲೇ ಮೇಲ್ವರ್ಗದ ಜನರಿಗೆ ಸಿದ್ದು ಮೇಲೆ ಮುನಿಸಿದೆ. ಇತ್ತೀಚೆಗೆ ಗೋಹತ್ಯೆ ಬಗ್ಗೆ ನೀಡಿದ ಹೇಳಿಕೆ ಕರಾವಳಿ, ಮಲೆನಾಡು ಪ್ರಾಂತ್ಯದ ಮಡಿವಂತರನ್ನು ಕೆಣಕಿದೆ.

ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ಇನ್ನು ಮಠ ಮಾನ್ಯ, ದೇವರು ದಿಂಡರು ಎಂದರೆ ಸಿದ್ದುಗೆ ಅಷ್ಟ ಕಷ್ಟೇ. ಜನರಿದ್ದರೆ ದೇವರು ಎನ್ನುವ ತತ್ತ್ವಕ್ಕೆ ಅಂಟಿಕೊಂಡಿರುವ ಸಿದ್ದುಗೆ ಉಡುಪಿ ಶ್ರೀಕೃಷ್ಣ ಮಠದ ಮೇಲೂ ಕಣ್ನು ಬಿದ್ದಿತ್ತು. ಇದರಿಂದ ಜಿಲ್ಲೆ ಜನತೆ ಸಿದ್ದು ವಿರುದ್ಧ ಗರಂ ಆಗಿದ್ದರು.

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವುದು, ಮಠಗಳ ದುಡ್ಡಿನ ಲೆಕ್ಕಾಚಾರಕ್ಕೆ ಕೈ ಹಾಕುವುದು, ಮೇಲ್ವರ್ಗದವರಿಗೆ ಸಿಗುವ ಸೌಲಭ್ಯಕ್ಕೆ ಕೊಕ್ಕೆ ಹಾಕುವುದು ಮುಂತಾದ ನಡೆಗಳು ಸಿದ್ದರಾಮಯ್ಯ ಅವರನ್ನು ಸಮಗ್ರ ಕರ್ನಾಟಕದ ನೇತಾರರನ್ನಾಗಿಸುವಲ್ಲಿ ವಿಫಲವಾಗಿದೆ.
ಸೂಪರ್ ಸಿದ್ದು ಈಗ ಸಿಎಂ

ಸೂಪರ್ ಸಿದ್ದು ಈಗ ಸಿಎಂ

ಇಂದಿನ ಉತ್ತರ ಕರ್ನಾಟಕದ ಮಂದಿಗೆ ಸಿದ್ದರಾಮಯ್ಯ ಬಗ್ಗೆ ಅಷ್ಟಾಗಿ ಗಬರಿಲ್ಲ. ಅಂದಿನ ವಿತ್ತ ಸಚಿವ ಸಿದ್ದು ಅಷ್ಟೇ ಗೊತ್ತಿರುವುದು. ಹಾಗಾಗಿ ನಾಡಿನ ಎಲ್ಲಾ ಜನರ ಆಶೋತ್ತರಕ್ಕೆ ಸಿದ್ದು ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಮುಂದಿನ ರಾಜಕೀಯ ಭವಿಷ್ಯ ಮುಂದುವರೆಯಲಿದೆ.

ಮೈಸೂರು ಪ್ರಾಂತ್ಯದ ಡಿ. ದೇವರಾಜ್ ಅರಸು ಅವರು 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದರು. ಹಿಂದುಳಿದ ವರ್ಗದವರ ಹರಿಕಾರರೆಂದೇ ಪ್ರಸಿದ್ಧಿಯಾಗಿದ್ದ ಅರಸು ಅವರಂತೆ ಸಿದ್ದರಾಮಯ್ಯ ಕೂಡಾ ವರುಣಾ ಕ್ಷೇತ್ರದಿಂದ ಬಂದಿರುವ ಜನನಾಯಕರಾಗಿದ್ದು, ರಾಜ್ಯದ ಚುಕ್ಕಾಣಿ ಕೈಲಿ ಹಿಡಿದಿದ್ದಾರೆ.

English summary
Karnataka Chief Minister Siddaramaiah Profile : Siddaramaiah a mass leader is a member of the Indian National Congress party. Siddaramaiah was Deputy chief minster of Karnataka on two occasions and served as leader of opposition. On May 13, 2016 Siddaramaiah led Congress government in Karnataka completed three years of administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X