ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶುಗೆ ಈ ಸ್ಥಿತಿ ಬರಬಾರದಿತ್ತು : ಬಿಎಸ್ ವೈ

By Mahesh
|
Google Oneindia Kannada News

BS Yeddyurappa has soft corner for KS Eshwarappa
ಬೆಂಗಳೂರು, ಮೇ.10: ಯಾರ ಬಗ್ಗೆಯೂ ದ್ವೇಷ ಸಾಧನೆ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ. ಯಾರ ಹಂಗೂ ಇಲ್ಲದೆ ಕೆಜೆಪಿಯನ್ನು ರಾಜ್ಯದಲ್ಲಿ ಬಲಪಡಿಸುವುದು ಮಾತ್ರ ನನ್ನ ಗುರಿಯಾಗಿದೆ. ಹೀಗಾಗಿ ಬಿಜೆಪಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈ ನಡುವೆ ತಮ್ಮ ಬಹುಕಾಲದ ಮಿತ್ರ ಈಶ್ವರಪ್ಪ ಅವರ ಸೋಲಿಗೆ ಬಿಎಸ್ ವೈ ಮರುಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕೆಜೆಪಿ ಸ್ಥಾಪಿಸಲಾಗಿತ್ತು. ಹೀಗಾಗಿ ನಿಮ್ಮ ಗುರಿ ಈಗ ಈಡೇರಿದೆಯೇ? ಮತ್ತೆ ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗಳಿಗೆ ನಿರೀಕ್ಷಿತ ಉತ್ತರಗಳನ್ನೇ ಯಡಿಯೂರಪ್ಪ ನೀಡಿದರು.ಶಿವಮೊಗ್ಗ ಜಿಲ್ಲೆ ಮತದಾರ ಸಾರಾಸಗಟಾಗಿ ಬಿಜೆಪಿಯನ್ನು ತಿರಸ್ಕರಿಸಿದ್ದು, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮತ್ತೊಮ್ಮೆ ಪ್ರತಿಫಲಿಸಿದಂತೆ ಆಗಿದೆ ಎಂದರು. ಆದರೆ, ಮಾತಿನಲ್ಲಿ ಎಂದಿನ ವ್ಯಂಗ್ಯ, ಸಿಟ್ಟು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು ಗಮನೀಯವಾಗಿತ್ತು.

ಬಿಜೆಪಿಗೆ ಯಾವ ದಾರಿ ತೋರಿಸಬೇಕೋ ಅದನ್ನು ಜನ ತೋರಿಸಿಕೊಟ್ಟಿದ್ದಾರೆ. ಹಾಗೆಂದು ಯಾರ ಬಗ್ಗೆಯೂ ದ್ವೇಷ ಸಾಧನೆ ಮಾಡುವ ವ್ಯಕ್ತಿ ನಾನಲ್ಲ. ಯಡಿಯೂರಪ್ಪ ಅವರಿಲ್ಲದೆ ಬಿಜೆಪಿಗೆ ಅಸ್ತಿತ್ವ ಇದೆಯೇ ಎಂಬ ಬಗ್ಗೆ ಫಲಿತಾಂಶ ಕಣ್ಣ ಮುಂದಿದ್ದು, ಆ ಪಕ್ಷದ ನಾಯಕರು ಇದನ್ನು ತೀರ್ಮಾನಿಸಬೇಕು ಎಂದರು.
[ 2013 ಫಲಿತಾಂಶ: ಗೆದ್ದವರು, ಸೋತವರು ]

ಈಶ್ವರಪ್ಪ ಸೋಲಿನ ಬಗ್ಗೆ: ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಅವರ ಸೋಲಿನ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರಿಗೆ ಆ ರೀತಿ ಆಗಬಾರದಿತ್ತು. ಇನ್ನೊಬ್ಬರ ಸೋಲಿನ ಬಗ್ಗೆ ಖುಷಿ ಪಡುವ ಮನಸ್ಥಿತಿ ನನ್ನದಲ್ಲ. ಉಪಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದ ವ್ಯಕ್ತಿಗೆ ಸೋಲಿನ ಕಹಿ ಸಹಿಸಲು ಕಷ್ಟವಾಗುತ್ತದೆ. ಈಶ್ವರಪ್ಪ ಅವರಂಥ ಜನಪ್ರತಿನಿಧಿಗಳು ಸದನದಲ್ಲಿರಬೇಕಿತ್ತು ಎಂದರು. ಆದರೆ, ತಮ್ಮನ್ನು ಟೀಕಿಸಿದ ಬಿಜೆಪಿ ನಾಯಕರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಕುಟುಕಿದರು.

ಆಯೋಗದ ಮಾನ್ಯತೆ: ಪಕ್ಷ ಸ್ಥಾಪನೆಯಾಗಿ 5 ತಿಂಗಳಿನಲ್ಲೇ ವಿಧಾನಸಭೆ ಚುನಾವಣೆ ಎದುರಿಸಿದ್ದೇವೆ. ನಾವು ಆರು ಸ್ಥಾನ ಗೆದ್ದಿದ್ದರೂ 35 ಕ್ಷೇತ್ರಗಳಲ್ಲಿ 2ನೇ ಸ್ಥಾನ ಗಳಿಸಿದ್ದೇವೆ. ಕಡಿಮೆ ಸ್ಥಾನ ಗಳಿಸಿದರೂ ಶೇ.10ರಷ್ಟು ಮತವನ್ನು ಕೆಜೆಪಿ ಗಳಿಸಿದೆ. ಚಿನ್ಹೆ ಗೊಂದಲ ಇಲ್ಲದಿದ್ದರೆ ಇನ್ನೂ ಶೇ. 4ರಿಂದ 5ರಷ್ಟು ಹೆಚ್ಚುವರಿ ಮತ ಬರುತ್ತಿತ್ತು. ಇದೀಗ ಶೇ.10ರಷ್ಟು ಮತ ಗಳಿಸಿರುವುದರಿಂದ ಚುನಾವಣಾ ಆಯೋಗದ ಮಾನ್ಯತೆಯೂ ಸಿಗಲಿದೆ. ಇದು ಅತ್ಯಂತ ಸಂತೋಷದ ವಿಷಯ ಎಂದು ಯಡಿಯೂರಪ್ಪ ಹೇಳಿದರು.

English summary
KJP president BS Yeddyurappa still has soft corner for his good old friend KS Eshwarappa. Karnataka Assembly Election results reflected that former BJP President KS Eshwarappa and Shimoga last its BJP charm
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X