ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಕರ್ನಾಟಕ ಗೆದ್ದ ಸಂಭ್ರಮದಲ್ಲಿ ಕಾಂಗ್ರೆಸ್

By Mahesh
|
Google Oneindia Kannada News

ಬೆಂಗಳೂರು, ಮೇ.8: ಇದು ಬಿಜೆಪಿ ಸೋಲೋ, ಕಾಂಗ್ರೆಸ್ ಕ್ಲೀನ್ ಸ್ವೀಪೋ ಒಟ್ಟಾರೆ ಒಂದೇ ಪಕ್ಷ ಅಧಿಕಾರ ಹಿಡಿಯುತ್ತಿರುವುದು ಒಳ್ಳೆಯದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. 223 ಸೀಟುಗಳ ಪೈಕಿ ಮ್ಯಾಜಿಕ್ ನಂಬರ್ ದಾಟಿ 121 ಸೀಟು ಗೆದ್ದಿರುವ ಕಾಂಗ್ರೆಸ್ ಸಂಭ್ರಮಕ್ಕೆ ಈಗ ಕಡಿವಾಣ ಹಾಕುವುದು ಕಷ್ಟ.

ಬುಧವಾರ ಮಧ್ಯಾಹ್ನದಿಂದಲೇ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದೆಲ್ಲೆಡೆ ಕಾಂಗ್ರೆಸ್ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ನವದೆಹಲಿಯಲ್ಲೂ ಹೈಕಮಾಂಡ್ ನಾಯಕರು ಸಿಹಿ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಜಿ ಪರಮೇಶ್ವರ್ ಸೋಲಿನ ಕಹಿಯೊಂದಿಗೆ ಕಾಂಗ್ರೆಸ್ ನ ಹಳೆ ಹುಲಿಗಳೆಲ್ಲ ಮೇಲಕ್ಕೆದ್ದು ಸಿಎಂ ಕುರ್ಚಿ ಪಡೆಯಲು ಯತ್ನಿಸುತ್ತಿದ್ದಾರೆ.

ಬಿಜೆಪಿ ಪ್ರಾಬಲ್ಯವಿದ್ದ ಕ್ಷೇತ್ರಗಳನ್ನು ಕಸಿದುಕೊಂಡಿರುವ ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇದೇ ಶೋ ಮುಂದುವರೆಸುವ ಎಚ್ಚರಿಕೆ ನೀಡಿದೆ. ಸಿಎಂ ಆಯ್ಕೆ ವಿಚಾರ ಹೈ ಕಮಾಂಡ್ ಗೆ ಬಿಟ್ಟು ಕಾರ್ಯಕರ್ತರು, ಅಭ್ಯರ್ಥಿಗಳು ಸಂಭ್ರಮದಲ್ಲಿ ಬೀದಿಗಿಳಿದು ಕುಣಿದಾಡಿದ್ದಾರೆ. ಕೈ ಪಡೆ ಸಂಭ್ರಮಾಚರಣೆ ಚಿತ್ರಗಳನ್ನು ನೋಡಿ....

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ನಾನೇ ಗೆಲುವಿನ ರುವಾರಿ ಎನ್ನುವ ಭಂಗಿಯಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ಕಾಂಗ್ರೆಸ್ ಅಭಿಮಾನಿಯ ಆಕರ್ಷಕ ವೇಷಭೂಷಣ

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ಹಸ್ತಕ್ಕೆ ಮತ ದೇಶಕ್ಕೆ ಹಿತ

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ರಾಜ್ಯದೆಲ್ಲೆಡೆ ಕಾಂಗ್ರೆಸ್ ಬಾವುಟ ಹಾರಾಡುತ್ತಿದೆ.

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ಮಂಗಳೂರಿನಲ್ಲಿ ಎಲ್ಲೆಡೆ ಕಾಂಗ್ರೆಸ್ ಬಾವುಟ ಹಾರಾಟ, ಕರಾವಳಿ ಭಾಗ ವಶಪಡಿಸಿಕೊಂಡ ಸಂಭ್ರಮ ಮುಗಿಲು ಮುಟ್ಟಿದೆ.

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ಬೆಂಗಳೂರಿನ ಗಾಂಧಿನಗರ ಅಭ್ಯರ್ಥಿ ದಿನೇಶ್ ಗುಂಡೂರಾವ್ ಗೆಲುವಿನ ಸಂಭ್ರಮದಲ್ಲಿ ಅಭಿಮಾನಿ

ಕರ್ನಾಟಕ ಗೆದ್ದ ಕೈ ಪಡೆ

ಕರ್ನಾಟಕ ಗೆದ್ದ ಕೈ ಪಡೆ

ಮಂಗಳೂರಿನಲ್ಲಿ ಎಲ್ಲೆಡೆ ಕಾಂಗ್ರೆಸ್ ಅಭಿಮಾನಿಗಳ ಆರ್ಬಟ

English summary
The Congress on Wednesday(May.8) won a thumping victory in Karnataka to wrest power after a seven year gap, crushing the BJP in a key election ahead of next year's Lok Sabha ballot. Congress activists celebrated wildly all across Karnataka. Congress finish with 121 seats in the 224-member assembly
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X