ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಗುರ್ತಿಸಿದ ಆಟೋಚಾಲಕ ಬಹುಮಾನ ಬೇಡವೆಂದ

By Srinath
|
Google Oneindia Kannada News

bomb-blast-unknown-autodriver-give-valuable-information
ಬೆಂಗಳೂರು, ಎ.24: ಬೆಂಗಳೂರು ಪೊಲೀಸರು ಮಲ್ಲೇಶ್ವರಂ ಸ್ಫೋಟಕ್ಕೆ ಸಂಬಂಧಿಸಿದಂತೆ ಒಂದಷ್ಟು ಉಗ್ರರನ್ನು ತಮಿಳುನಾಡಿನಿಂದ ಎತ್ಹಾಕಿಕೊಂಡು ಬಂದಿದ್ದಾರೆ. ಸ್ಫೋಟದ ಬಗ್ಗೆ ಆತಂಕಕಾರಿ ಮಾಹಿತಿಗಳು ಹೊರಬೀಳುತ್ತಿವೆ.

ಈ ಮಧ್ಯೆ, ಉಗ್ರರ ಬೆನ್ನುಹತ್ತಲು ಮಹತ್ವದ ಸುಳಿವು ನೀಡಿ, ಪೊಲೀಸರಿಗೆ ನೆರವಾಗಿರುವುದು ಒಬ್ಬ ಆಟೋ ಚಾಲಕ. ಆದರೆ ಭದ್ರತೆ ಮತ್ತು ತನಿಖೆ ಸುಗಮವಾಗಿ ನಡೆಯಲೆಂಬ ಕಾರಣಕ್ಕೆ ಪೊಲೀಸರು ಆಟೋದಾರನ ಹೆಸರು ವಿಳಾಸ ಬಹಿರಂಗಪಡಿಸಿಲ್ಲ.

ಬಾಂಬ್ ಸ್ಫೋಟವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದಾಗ ಸದರಿ ಆಟೋ ಚಾಲಕ ಅವರ ನೆರವಿಗೆ ಬಂದು ಕೆಲ ಶಂಕಿತರ ಚಲನವಲನದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾನೆ. ತಕ್ಷಣ ಪೊಲೀಸರು ಚಾಲಕನಿಂದ ಹೆಚ್ಚಿನ ಮಾಹಿತಿ ಕೋರಿದ್ದಾರೆ. ಕೊನೆಗೆ ಆತ ನೀಡಿದ ಮಾಹಿತಿಯನ್ನು ಆಧರಿಸಿ ತನಿಖೆಯ ದಿಕ್ಕು ಮುಂದುವರಿಸಿದ್ದಾರೆ.

ಅಷ್ಟೇ ಅಲ್ಲ. ತಮಿಳುನಾಡಿನಿಂದ ಕರೆತಂದ ಉಗ್ರರನ್ನು ಸದರಿ ಆಟೋ ಚಾಲಕನ ಮುಂದೆ ಪೆರೇಡ್ ಮಾಡಿಸಿದಾಗ ಆತ ಉಗ್ರರನ್ನು ಗುರುತಿಸಿದ್ದಾನೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.

ಈ ಮಧ್ಯೆ, ಸ್ಫೋಟದ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಅದರಂತೆ ಪೊಲೀಸರು ಆಟೋ ರಾಜನಿಗೆ ಬಹುಮಾನ ನೀಡಲು ಮುಂದಾದರು. ಶ್ಲಾಘನೀಯವೆಂದರೆ ಹೀಗೆ ಉಗ್ರರ ಪತ್ತೆಗೆ ಸಹಕರಿಸಿದ ಆಟೋ ರಾಜ ಬಹುಮಾನ ಬೇಡ. ಆ ಹಣವನ್ನು ಸ್ಫೋಟದಿಂದ ಗಾಯಗೊಂಡವರ ಚಿಕಿತ್ಸೆಗೆ ಬಳಸಿ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

English summary
Banglore bomb blast two held by Bangalore police in Chennai in a swift operation on Monday night (April 22). In the meanwhile Unknown auto driver gives valuable information about terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X