ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು

By Mahesh
|
Google Oneindia Kannada News

ಮುಂಬೈ, ಮಾ.21: 1993ರ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಗೆ ಶಿಕ್ಷೆ ಪ್ರಕಟಿಸಲಾಗಿದೆ. ಇದೇ ವೇಳೆ 10 ಜನರ ಶಿಕ್ಷೆ ಪ್ರಮಾಣ ಇಳಿಕೆಯಾಗಿರುವುದು ಸಿಬಿಐಗೆ ಹಿನ್ನೆಡೆಯಾಗಿದೆ.

ಅಶ್ರಫುರ್ ರೆಹಮಾನ್ ಅಜಿಮುಲ್ಲಾ ಹಾಗೂ ಇಮ್ತಿಯಾಜ್ ಘಾವ್ಟೆ ಶಿಕ್ಷೆ ಪ್ರಮಾಣ ತಗ್ಗಿಸಲಾಗಿದೆ. ಅಶ್ರಫುರ್ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ತಗ್ಗಿಸಲಾಗಿದೆ.

ಟೈಗರ್ ಮೆಮೊನ್ ಸೋದರ ಯಾಕೂಬ್ ಮೆಮೊನ್ ಜೀವಾವಧಿ ಶಿಕ್ಷೆ ಸೇರಿದಂತೆ 17 ಜನರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯಲಾಗಿದೆ. 1994ರಲ್ಲಿ ಶರಣಾಗಿದ್ದ ಯಾಕೂಬ್ ಮೆಮೊನ್ ಗೆ ಮರಣದಂಡನೆ ಬದಲಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

1993 Mumbai blasts case: Timeline | Memons Death Sentence Upheld | 1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು

ಮುಂಬೈ ಸರಣಿ ಸ್ಫೋಟದ ಹಿನ್ನೋಟ ಇಲ್ಲಿದೆ:

ಮಾರ್ಚ್ 1993 : ಬಾಬ್ರಿ ಮಸೀದಿ ಕೆಡವಿದ ನಂತರ ಗಲಭೆಯಾದ ನಂತರ ಮುಂಬೈನಲ್ಲಿ ಸುಮಾರು 13 ಸರಣಿ ಸ್ಫೋಟಗಳು ಸಂಭವಿಸಿತ್ತು.

ನವೆಂಬರ್ 4, 1993: 10,000 ಪುಟಗಳ ಪ್ರಾಥಮಿಕ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಸಂಜಯ್ ದತ್ ಸೇರಿದಂತೆ 189 ಮಂದಿಯನ್ನು ಆರೋಪಿಯನ್ನಾಗಿಸಲಾಯಿತು.

ನವೆಂಬರ್ 19, 1993: ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಕೇಷನ್ (ಸಿಬಿಐ) ಕೈಗೆ ಸಂಪೂರ್ಣ ಕೇಸ್ ತನಿಖೆ ವಹಿಸಲಾಯಿತು.

ಏಪ್ರಿಲ್ 19, 1995 : ಪ್ರಕರಣದ ಕುರಿತು ಕೋರ್ಟಿನಲ್ಲಿ ವಿಚಾರಣೆ ಆರಂಭ.

ಏಪ್ರಿಲ್- ಜೂನ್ 1995 : ಆರೋಪಿಗಳ ಮೇಲಿನ ದೋಷರೋಪಣೆ ಸಾಬೀತು

ಅಕ್ಟೋಬರ್ 2000 : 684ಕ್ಕೂ ಅಧಿಕ ಸಾಕ್ಷಿಗಳ ವಿಚಾರಣೆ ಮುಕ್ತಾಯ

ಅಕ್ಟೋಬರ್ 2001 : ಸರ್ಕಾರಿ ವಕೀಲರ ವಾದ ಪ್ರತಿವಾದಗಳು ಮುಕ್ತಾಯ

ಆಗಸ್ಟ್ 2002 : ವಿಚಾರಣೆ ಮುಂದಕ್ಕೆ ಎಳೆದಾಡಿದ ಡಿಫೆನ್ಸ್ ಲಾಯರ್ ಗಳು ಕೊನೆಗೂ ವಾದ ಮುಗಿಸಿದರು

ಸೆಪ್ಟೆಂಬರ್ 2003 : ಎರಡು ಕಡೆ ವಾದ ಮುಕ್ತಾಯ, ಅಂತಿಮ ಆದೇಶಕ್ಕೆ ಕಾತುರ
ಸೆಪ್ಟೆಂಬರ್ 2006 : ಟೈಗರ್ ಮೆಮೊನ್ ಕುಟುಂಬದ ನಾಲ್ವರಿಗೆ ಶಿಕ್ಷೆ ಪ್ರಮಾಣ ಪ್ರಕಟ

ನವೆಂಬರ್ 2006 : ಕಾಂಗ್ರೆಸ್ ಸಂಸದ ನಟ ದಿವಂಗತ ಸುನೀಲ್ ದತ್ ಅವರ ಪುತ್ರ ಸಂಜಯ್ ದತ್ ಅವರು ಅಕ್ರಮವಾಗಿ 9mm ಪಿಸ್ತೊಲ್ ಹಾಗೂ ಎಕೆ 47 ರೈಫಲ್ ಹೊಂದಿದ್ದ ಆರೋಪದ ಮೇಲೆ ಟಾಡಾ ಕಾಯ್ದೆಯಂತೆ ಬಂಧನ

* ಸಂಜಯ್ ದತ್ 18 ತಿಂಗಳು ತಿಹಾರ್ ಜೈಲಿನಲ್ಲಿ ಕಳೆದರು.

* ಮಾರ್ಚ್ 12, 1993ರಲ್ಲಿ ಸ್ಫೋಟವಾದ ಸ್ಥಳಗಳು: ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಕಟ್ಟಡ, ನಾರಿಮನ್ ಪಾಯಿಂಟ್ ನ ಏರ್ ಇಂಡಿಯಾ ಕಟ್ಟಡ, ವೊರ್ಲಿಯ ಸೆಂಚುತಿ ಬಜಾರ್, ಹೋಟೆಲ್ ಸೀ ರಾಕ್ ಹಾಗೂ ಜುಹೂನ ಸೆಂಟ್ಯೂರ್

* ದಾವೂದ್ ಇಬ್ರಾಹಿಂ, ಟೈಗರ್ ಮೆಮೊನ್ ಹಾಗೂ ಅಯೂಬ್ ಮೆಮೊನ್ ಇಡೀ ಸ್ಫೋಟದ ರುವಾರಿಗಳು ಹಾಗೂ ಪ್ರಮುಖ ಅಪರಾಧಿಗಳಾಗಿದ್ದಾರೆ.

* ಎಲ್ಲೆಡೆ ಆರ್ ಡಿಎಕ್ಸ್ ಸ್ಫೋಟಕ ಬಳಸಲಾಗಿತ್ತು 28 ಕೋಟಿ ಗೂ ಅಧಿಕ ಆಸ್ತಿ ಪಾಸ್ತಿ ನಷ್ಟವಾಗಿತ್ತು. 257ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರೆ, 713ಕ್ಕೂ ಅಧಿಕ ಜನ ಗಾಯಗೊಂಡಿದ್ದರು.

* ಒಟ್ಟಾರೆ 100 ಜನರನ್ನು ಅಪರಾಧಿಗಳು ಎಂದು ಘೋಷಿಸಲಾಯಿತು. 12 ಜನರಿಗೆ ಮರಣದಂಡನೆ ಹಾಗೂ 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ಟಾಡಾ ಕೋರ್ಟ್ ಪ್ರಕಟಿಸಿತ್ತು.

* ಅಪರಾಧಿಗಳ ಪೈಕಿ ಮರಣದಂಡನೆ ಶಿಕ್ಷೆ ಪಡೆದಿದ್ದ ಮಹಮ್ಮದ್ ಇಕ್ಬಾಲ್ ಹಾಗೂ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕಸ್ಟಮ್ ಅಧಿಕಾರಿಯಾಗಿದ್ದ ಎಸ್ ಎನ್ ಥಾಪಾ ಅವರು ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಮೃತಪಟ್ಟಿದ್ದಾರೆ.

* ಜೀವಾವಧಿ ಶಿಕ್ಷೆ ಪಡೆದ 20 ಜನರಲ್ಲಿ ಒಬ್ಬ ಮೃತಪಟ್ಟಿದ್ದರೆ ಇಬ್ಬರಿಗೆ ಜಾಮೀನು ಮಂಜೂರಾಗಿದೆ. ಈಗ 17 ಜನ ಜೀವಾವಧಿ ಶಿಕ್ಷೆ ಹಾಗೂ 11 ಜನ ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದಾರೆ.

English summary
Over two decades since the first major terror attack India witnessed, the Supreme Court will on Thursday deliver its verdict on the 1993 Mumbai serial blasts case. The Supreme Court has upheld the death sentence of Yakub Memon, one of the main accused in the 1993 Bombay blasts case, and commuted the sentences of 10 other accused to life imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X