ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಸತ್ತಾ: ನಾಗರಿಕ ಚಳವಳಿಗೆ ದಕ್ಕಿದ ಮಾನ್ಯತೆ

By Srinath
|
Google Oneindia Kannada News

ಬೆಂಗಳೂರು, ಮಾ.21: ಎರಡು ದಶಕಗಳ ಹಿಂದೆ ನಾಗರಿಕ ಚಳವಳಿಯ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಲೋಕಸತ್ತಾ ಪಕ್ಷ 2006ರಲ್ಲಿ ರಾಜಕೀಯ ಪಕ್ಷವಾಗಿ ಸ್ಥಾನ ಗಳಿಸಿತು. ಜಯಪ್ರಕಾಶ ನಾರಾಯಣ್ ಅವರು ಹುಟ್ಟುಹಾಕಿದ ಲೋಕ ಸತ್ತಾ ಚಳವಳಿಯು ಸರಕಾರೇತರ ಸಂಸ್ಥೆಯಾಗಿ 1996ರಿಂದ ಕಾರ್ಯನಿರ್ವಹಿಸುತ್ತಿದೆ.

ಲೋಕ ಸತ್ತಾ ಪಕ್ಷದ ಪ್ರಧಾನ ಆಶಯವೆಂದರೆ ರಾಜಕೀಯ ನೇತಾರರು ನಾಗರಿಕರ ಜೊತೆ ಅಧಿಕಾರ ಹಂಚಿಕೊಳ್ಳಬೇಕು ಎಂಬುದು. ಮತ್ತು ಅವರು ನಾಗರಿಕರಿಗೆ ಉತ್ತರದಾಯಿತ್ವ ಆಗಿರಬೇಕು ಎಂಬುದು. ಆರೋಗ್ಯಕರ ಪ್ರಜಾಪ್ರಭುತ್ವವು ರಚಿತವಾಗುವುದು ಅಭ್ಯರ್ಥಿಗಳ ಕುರಿತು ಪೂರ್ಣಪ್ರಮಾಣದಲ್ಲಿ ಚರ್ಚೆಗಳು ಆದಾಗಲಷ್ಟೇ.

Karnataka Assembly Election: Lok Satta Party Ashwin Mahesh Interview with Oneindia

ಇಂತಿಪ್ಪ ಲೋಕ ಸತ್ತಾ ಪಕ್ಷವು ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಸ್ಪರ್ಧಿಸಿತು. ಮತ್ತು ಆ ಚುನಾವಣೆಯಲ್ಲಿ ಶೇ. 16ರಷ್ಟು ಮತಗಳನ್ನೂ ಗಳಿಸಿತು. ಡಾ. ಅಶ್ವಿನ್ ಮಹೇಶ್ ಅವರು ಆಗ ಅಭ್ಯರ್ಥಿಯಾಗಿದ್ದರು.

ಲೋಕ ಸತ್ತಾ ಪಕ್ಷವು ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಲೋಕ ಸತ್ತಾ ಪಕ್ಷವು Progress ಹೆಸರಿನಲ್ಲಿ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದೆ.
ಕಸ ರಾಜಧಾನಿ ಬೆಂಗಳೂರನ್ನು ಬಹುವಾಗಿ ಕಾಡುತ್ತಿದೆ. ಗ್ರಾಮಾತರ ಭಾಗದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ, ಪ್ರತಿ ಪೊಲೀಸ್ ಠಾಣೆಯಲ್ಲೂ ಒಬ್ಬ ಮಹಿಳಾ ಅಧಿಕಾರಿ ನೇಮಕ, ಸಾರ್ವಜನಿಕ ಸಾರಿಗೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸುವುದು ಇವೇ ಮುಂತಾದವು ಪಕ್ಷದ ಪ್ರಣಾಳಿಕೆಯಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿದೆ.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಶ್ವಿನ್ ಮಹೇಶ್ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಅಶ್ವಿನ್ ಮಹೇಶ್ ಅವರು 'ಒನ್ಇಂಡಿಯಾ'ಗೆ ನೀಡಿರುವ ಸಂದರ್ಶನದ ಪೂರ್ಣಪಾಠಕ್ಕೆ ಇಲ್ಲಿ ಕ್ಲಿಕ್ ಮಾಡಿ: ಅಶ್ವಿನ್ ಮಹೇಶ್ ಸಂದರ್ಶನ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka Assembly Election: Lok Satta Party Ashwin Mahesh Interview with Oneindia. The Loksatta Party, Karnataka will be fighting in the upcoming assembly elections in the state. They recently released the manifesto called Progress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X