ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ

|
Google Oneindia Kannada News

Mysore City Corporation
ಮೈಸೂರು, ಮಾ.11 : ಮೈಸೂರು ಮಹಾನಗರ ಪಾಲಿಕೆಗೆ ಮಾ.7ರಂದು ನಡೆದಿದ್ದ ಚುನಾವಣಾ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲದ ಹೋರಾಟ ಸಾಗಿತ್ತು. ಅಂತಿಮವಾಗಿ ಕಾಂಗ್ರೆಸ್ 22 ಸ್ಥಾನಗಳನ್ನು ಪಡೆದರೆ, ಜೆಡಿಎಸ್ 20 ಸ್ಥಾನಗಳನ್ನು ಪಡೆದುಕೊಂಡಿತು.

65 ವಾರ್ಡ್ ಗಳಿಗೆ ನಡೆದ ಮತದಾನದಲ್ಲಿ 433 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಗರದ 686 ಮತಗಟ್ಟೆಗಳಲ್ಲಿ ಶೇ.56.13 ರಷ್ಟು ಮತದಾನವಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 6,20,694 ಮತದಾರರಿದ್ದು, 3,48,373 ಜನರು ಮತದಾನ ಮಾಡಿದ್ದರು. ಇವರಲ್ಲಿ 1,76,449 ಪುರುಷ ಮತ್ತು 1,71,924 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಇಂದಿನ ಫಲಿತಾಂಶದಿಂದಾಗಿ ಯಾವ ಪಕ್ಷಕ್ಕೂ ಬಹುಮತ ಲಭ್ಯವಾಗಿಲ್ಲ. ಮತ್ತೊಮ್ಮೆ ಮೈಸೂರಿನಲ್ಲಿ ಸಮ್ಮಿಶ್ರ ಆಡಳಿತ ಜಾರಿಯಾಗುವ ಸಂಭವವಿದೆ. ಕಾಂಗ್ರೆಸ್ 22 ಸ್ಥಾನ ಮತ್ತು ಜೆಡಿಎಸ್ 20 ಸ್ಥಾನಗಳನ್ನು ಪಡೆದಿದೆ. ಬಿಜೆಪಿ ಕೇವಲ 12 ಸ್ಥಾನಗಳನ್ನು ಪಡೆದರೆ, ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಪಕ್ಷಗಳು ತಲಾ 1 ಸ್ಥಾನಗಳನ್ನು ಪಡೆದಿದ್ದು, ಪಕ್ಷೇತರರು 9 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಲು ಪಕ್ಷೇತರರ ನೆರವು ಅನಿವಾರ್ಯವಾಗಿದೆ.

ಪಕ್ಷೇತರರ ವಿಶ್ವಾಸಗಳಿಸುವ ಪಕ್ಷಗಳು ಪಾಲಿಕೆಯ ಅಧಿಕಾರ ಹಿಡಲಿಯಲಿವೆ. ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿ ಕೇವಲ 12 ಸ್ಥಾನ ಪಡೆದಿದ್ದು, ಇದರಿಂದ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಅವರಿಗೆ ತೀವ್ರ ಹಿನ್ನೆಡೆ ಉಂಟಾಗಿದೆ. ಮೈಸೂರು ಪಾಲಿಕೆ ನಮ್ಮದೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಘೋಷಿಸಿದ್ದರು. ಈಗಲೂ ಪಕ್ಷೇತರರ ಸಹಕಾರ ಪಡೆದರೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಬಹುದಾಗಿದೆ.

ಸ್ನೇಕ್ ಶ್ಯಾಂಗೆ ಗೆಲುವು : ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ವಾರ್ಡ್ ನಂ.17ರಿಂದ ಸ್ಪರ್ಧಿಸಿದ್ದ ಉರಗ ತಜ್ಞ ಸ್ನೇಕ್ ಶ್ಯಾಂ ಗೆಲುವು ಸಾಧಿಸಿದ್ದಾರೆ. ಹಾವುಗಳ ಸಂರಕ್ಷಕ ಸ್ನೇಕ್ ಶ್ಯಾಂ ಮೂಲ ಹೆಸರು ಎಸ್.ಬಾಲಸುಬ್ರಮಣ್ಯ. 1980 ರಲ್ಲಿ ಹಾವುಗಳನ್ನು ರಕ್ಷಿಸಲು ಪ್ರಾರಂಭಿಸಿದ ಶ್ಯಾಂ ಇದುವರೆಗೂ ಸುಮಾರು 26,894 ಹಾವುಗಳನ್ನು ರಕ್ಷಿಸಿದ್ದಾರೆ.

ನಗರದ ವಿವಿಧ ಪ್ರದೇಶಗಳಿಂದ ಹಾವು ಹಿಡಿಯಲು ಶ್ಯಾಂಗೆ ಕರೆ ಬರುತ್ತದೆ. ಮೈಸೂರಿನಾದ್ಯಂತ ಶ್ಯಾಂ ಅತ್ಯಂತ ಜನಪ್ರಿಯ ವ್ಯಕ್ತಿ. ಇದೇ ಜನಪ್ರಿಯತೆ ಗೆಲುವು ತಂದು ಕೊಡುತ್ತದೆ ಎನ್ನುವ ಆಧಾರದ ಮೇಲೆ ಶ್ಯಾಂ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದರು.

ನಾನು ರಾಜಕೀಯಕ್ಕೆ ಬಂದಿರುವುದೇ ಇದೇ ಮೊದಲು. ನಾನು ಮತದಾರರಿಗೆ ಯಾವುದೇ ಭರವಸೆ ನೀಡುವುದಿಲ್ಲ. ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಲೇ ಶ್ಯಾಂ ಪ್ರಚಾರ ಮಾಡಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಶ್ಯಾಂ ಅವರಿಗೆ ಟಿಕೆಟ್ ನೀಡಿ ಚುನಾವಣೆಗೆ ಕರೆತಂದಿದ್ದರು. ವಾರ್ಡ್ ನಂ.17ರ ಮತದಾರರು ಸ್ನೇಕ್ ಶ್ಯಾಂಗೆ ಬೆಂಬಲ ಸೂಚಿಸಿದ್ದು, ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ.

ಹಾವುಗಳ ಸಂರಕ್ಷಣೆ ಜೊತೆಗೆ ಸಮಾಜ ಸೇವೆಯನ್ನು ಮಾಡುತ್ತೇನೆ ಎಂದು ಶ್ಯಾಂ ಸಂತಸ ಹಂಚಿಕೊಂಡಿದ್ದಾರೆ. ಜನರು ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯರ್ನ ಮಾಡುವುದಾಗಿ ಅವರು ಹೇಳಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
congress and jds jointly ruled Mysore City Corporation election results 2013. The city has 65 wards. The part-wise split of winners and losers. BJP, Congress, KJP, JDs, BSR Congress have fielded their candidates including dozens of Independents in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X