ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಚುನಾವಣೆ ಫಲಿತಾಂಶ

By Prasad
|
Google Oneindia Kannada News

Hubli-Dharwad city corporation election results
ಹುಬ್ಬಳ್ಳಿ-ಧಾರವಾಡ, ಮಾ. 11 : ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಉಳಿಸಿಕೊಳ್ಳಬೇಕಾದರೆ ಜನತಾದಳ (ಜಾತ್ಯತೀತ) ಪಕ್ಷದೊಡನೆ ಕೈಜೋಡಿಸಬೇಕಾದಂತಹ ಪರಿಸ್ಥಿತಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಈಗ ಎದುರಾಗಿದೆ.

ಆರಂಭದಲ್ಲಿ ಸ್ಪ್ರಿಂಟ್ ಮಾಡಿದ ಬಿಜೆಪಿ ಮುಂದೆ ಸಾಗುತ್ತಿದ್ದಂತೆ ಸುಸ್ತಾಗಿ 67 ಸ್ಥಾನಗಳಲ್ಲಿ 33 ಸ್ಥಾನಗಳನ್ನು ಮಾತ್ರ ಗಳಿಸಿಲು ಯಶಸ್ವಿಯಾಗಿದೆ. ಮೊದಲು ಮುಗ್ಗರಿಸಿದ ಕಾಂಗ್ರೆಸ್ ನಂತರ ಚೇತರಿಸಿಕೊಂಡು 22 ಸ್ಥಾನಗಳನ್ನು ಗಳಿಸಿ ಬಿಜೆಪಿಗೆ ಭಾರೀ ಪೈಪೋಟಿ ನೀಡಿತು. ಆರಂಭಶೂರತ್ವ ತೋರಿದ ಜೆಡಿಎಸ್ ಹಾಗೂಹೀಗೂ 9 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

ಜಗದೀಶ್ ಶೆಟ್ಟರ್ ಅವರ ತವರಿನಲ್ಲಿ ನಡೆದಿರುವ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಖ್ಯಮಂತ್ರಿಗೆ ಒಂದು ರೀತಿಯ ಲಿಟ್ಮಸ್ ಟೆಸ್ಟ್ ಇದ್ದಂತೆ. ಬಿಜೆಪಿ ತನ್ನ ಅಧಿಕಾರವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಉಳಿಸಿಕೊಳ್ಳುವುದಾ ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ. ಉಳಿಸಿಕೊಂಡರೂ ಹೇಗೆ ಉಳಿಸಿಕೊಳ್ಳಲಿದೆ ಎಂಬುದು ಇಲ್ಲಿ ಮುಖ್ಯವಾಗಲಿದೆ.

ಒಟ್ಟು 67 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅಧಿಕಾರ ಪಡೆಯಲು 35 ಸ್ಥಾನಗಳನ್ನು ಗೆದ್ದರೂ ಸಾಕಿತ್ತು. ಇಲ್ಲಿ ಮೊದಲಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಗುದ್ದಾಟ. ಶೆಟ್ಟರ್ ಅವರಿಗೆ ಮುಖಭಂಗ ಮಾಲು ಕೆಜೆಪಿ ನಾಯಕ ಯಡಿಯೂರಪ್ಪ ಸರ್ವಯತ್ನಗಳನ್ನು ನಡೆಸಿದ್ದರು. ಕೆಜೆಪಿಗೆ ಕೇವಲ ಒಂದೇ ಒಂದು ಸ್ಥಾನ ಗಳಿಸಲು ಸಾಧ್ಯವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 156 ವಾರ್ಡುಗಳಿಗೆ ಚುನಾವಣೆ ನಡೆದಿದ್ದು, ಅಣ್ಣಿಗೇರಿ(TMC), ನವಲಗುಂದ(TMC), ಕುಂದಗೋಳ(TP), ಅಳ್ನಾವರ(TP) ಮತ್ತು ಕಲಘಟಗಿ(TP)ಯಲ್ಲಿಯೂ ಮತಎಣಿಕೆ ಮುಂದುವರಿದಿದೆ. ಎಲ್ಲಾ ಒಟ್ಟಾರೆಯಾಗಿ ಗಮನಿಸಿದರೆ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಹಿಂದಿಕ್ಕಿ ಮುನ್ನುಗ್ಗಿದೆ. ಮೊದಲ ಬಾರಿ ಕಣದಲ್ಲಿರುವ ಕೆಜೆಪಿ 4 ಸ್ಥಾನಗಳನ್ನು ಕಬಳಿಸಿದೆ.

ಅಣ್ಣಿಗೇರಿ - ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹಿಂದಿಕ್ಕಿರುವ ಜೆಡಿಎಸ್ 10 ಸ್ಥಾನಗಳನ್ನು ಗೆದ್ದುಕೊಂಡಿವೆ.
ನವಲಗುಂದ - ಇಲ್ಲಿ ಕಾಂಗ್ರೆಸ್ ನಾಗಾಲೋಟದಲ್ಲಿ ನಡೆದಿದೆ. ಬಿಜೆಪಿ ಗೆದ್ದಿರುವ 3 ಸ್ಥಾನ ಮಾತ್ರ.
ಕುಂದಗೋಳ - ಕಾಂಗ್ರೆಸ್ 6 ಸ್ಥಾನ ಗಳಿಸಿದ್ದರೆ, ಬಿಜೆಪಿ 4 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕೆಜೆಪಿ 2 ಸ್ಥಾನ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.
ಅಳ್ನಾವರ - ಇಲ್ಲಿ ಕಾಂಗ್ರೆಸ್ 8 ಸ್ಥಾನ ಗೆದ್ದು ಜಯಭೇರಿ ಬಾರಿಸಿದೆ. ಜೆಡಿಎಸ್ 3 ಸ್ಥಾನ ಕಬಳಿಸಿದ್ದರೆ, ಪಕ್ಷೇತರರು 2 ಸ್ಥಾನ ಗಳಿಸಿದ್ದಾರೆ.
ಕಲಘಟಗಿ - ಇಲ್ಲಿ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆಯುವ ಪಕ್ಷ ಯಾವುದೂ ಇಲ್ಲ. 13 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿದೆ.

ಕ್ಷೇತ್ರ ಸಂಖ್ಯೆ ಸ್ಥಳೀಯ ಸಂಸ್ಥೆ ಒಟ್ಟು ಸೀಟು ಘೋಷಿತ ಫಲಿತಾಂಶ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಪಕ್ಷೇತರರು ಬಿಎಸ್ಆರ್ ಕಾಂಗ್ರೆಸ್
137 ಹುಬ್ಬಳ್ಳಿ-ಧಾರವಾಡ CC
67 67 33 22 9 1 1 0
138 ಅಣ್ಣಿಗೇರಿ TMC
23 23 4 8 10 0 0 1
139 ನವಲಗುಂದ TMC 23 23
7 12 3 0 1 0
140 ಕುಂದಗೋಳ TP
15
15 4 6 3 2 0 0
141 ಅಳ್ನಾವರ TP
15
15 2 8 3 0 2 0
142 ಕಲಘಟಗಿ TP
13 13 0 8 1 2 0 2

ಒಟ್ಟಾರೆ 156 156 50 64 29 5 4 3


cc = city corporation - ಮಹಾನಗರಪಾಲಿಕೆ
cmc = city municipal corporation - ನಗರಸಭೆ
TMC = Town Municipal Corporation - ಪುರಸಭೆ
TP = ಪಟ್ಟಣ ಪಂಚಾಯಿತಿ

English summary
Hubli-Dharwad district Urban Local Body (ULB) election results 2013. The district has 67 seats. The part-wise split of winners and losers. BJP, Congress, KJP, JDs, CPI, CPI(M)have fielded their candidates including dozens of Independents in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X