Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಮೋದಿ ಅಮೆರಿಕದಲ್ಲಿ ಭಾಷಣ ಮಾಡಲಿದ್ದಾರೆ

Posted by:
Updated: Wednesday, March 6, 2013, 13:19 [IST]
 

ಅಹಮದಾಬಾದ್, ಮಾ.5‌: ನಿರಾಶಿತ ಮೋದಿ ಅಭಿಮಾನಿಗಳಿಗೆ ಇಲ್ಲೊಂದು ಸಿಹಿ ಸುದ್ದಿ! ಅಮೆರಿಕ ವೀಸಾ ಕೊಡದಿದ್ದರೆ ಕತ್ತೆ ಬಾಲ ಹೋಯ್ತು! ಇನ್ನು ಅದ್ಯಾವುದೋ ವಾರ್ಟನ್ ಫೋರಂ ಅಂಗೈ ನೋಡಿ ಅವಲಕ್ಷಣ ಅನ್ನುವುದೂ ಬೇಡ. ಆದರೂ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ ಅವರು ಅಮೆರಿಕದಲ್ಲಿ ಭಾಷಣ ಮಾಡಲಿದ್ದಾರೆ.

Overseas Friends of BJP in Chicago and New Jersey ಮೋದಿಗೆ ಇಂತಹ ಒಂದು ಅವಕಾಶ ಕಲ್ಪಿಸಿ ಕೃತಾರ್ಥವಾಗಿದೆ. ಇದೇ ಮಾರ್ಚ್ 10ರಂದು video conference ಮೂಲಕ ಭಾರತೀಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮೋದಿ ಅಮೆರಿಕದಲ್ಲಿ ಭಾಷಣ ಮಾಡಲಿದ್ದಾರೆ

ಅಮೆರಿಕ ಮತ್ತು ಕೆನಡಾದಲ್ಲಿರುವ ಅನೇಕ ಎನ್ನಾರೈಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಗುಜರಾತಿನ ಸಮಗ್ರ ಅಭಿವೃದ್ಧಿಯನ್ನು ಕಲ್ಪಿಸಿರುವ ಮೋದಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಗಳಿಸಿದ್ದಾರೆ ಎಂದು Overseas Friends of BJP ಹೇಳಿಕೆ ತಿಳಿಸಿದೆ.

ಮಾರ್ಚ್ 10ರಂದು ಭಾನುವಾರ ಬೆಳಗ್ಗೆ 6.30ಕ್ಕೆ (ಭಾರತೀಯ ಕಾಲಮಾನ) ನರೇಂದ್ರ ದತ್ತಾತ್ರೇಯ ಮೋದಿ ಚಿಕಾಗೋ ಮತ್ತು ನ್ಯೂಜೆರ್ಸಿಯಲ್ಲಿ ನಡೆಯುವ ಸಮುದಾಯ ಸಮಾವೇಶವನ್ನುದ್ದೇಶಿಸಿ ಏಕಕಾಲಕ್ಕೆ ಮಾತನಾಡಲಿದ್ದಾರೆ. TV Asia ಇದನ್ನು ನೇರ ಪ್ರಸಾರ ಮಾಡಲಿದೆ. ಅಂತರ್ಜಾಲದಲ್ಲೂ ಈ ಭಾಷಣ ನೇರವಾಗಿ ಪ್ರಸಾರವಾಗಲಿದೆ.

2012ರ ಮೇನಲ್ಲಿ ಅಮೆರಿಕದ 12 ನಗರಗಳಲ್ಲಿ video conference ಮೂಲಕ ಅಪಾರ ಸಂಖ್ಯೆಯ ಎನ್ನಾರೈಗಳನ್ನು ಉದ್ದೇಶಿಸಿ ಮಾತನಾಡಿದ್ದರು.

Story first published:  Tuesday, March 5, 2013, 15:33 [IST]
English summary
Gujarat Chief Minister Narendra Modi is to address Indian diaspora on 10th March 2013, through video conference. The event is organized by the Overseas Friends of BJP in Chicago and New Jersey
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like