ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ 'ಕೈ'ಕೊಟ್ಟ ವಾರ್ಟನ್ ಕೇಜ್ರಿವಾಲಾಗೆ ಮಣೆ

By Srinath
|
Google Oneindia Kannada News

Arvind Kejriwal to replace Narendra Modi at Wharton India Economic Forum Mar 23
ಅಹಮದಾಬಾದ್, ಮಾ.5‌: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಅಂಗೈ ನೋಡಿ ಅವಲಕ್ಷಣವೆಂದ ವಾರ್ಟನ್ ಭಾರತೀಯ ಆರ್ಥಿಕ ವೇದಿಕೆಯ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಮೋದಿಗೆ ಆಮಂತ್ರಿಸಲು ಈ ವೇದಿಕೆಗೆ ದುಂಬಾಲು ಬಿದ್ದವರು ಯಾರು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದರಿಂದ Wharton India Economic Forum ಭಾರಿ ಒತ್ತಡಕ್ಕೆ ಸಿಲುಕಿದ್ದು, ಈಗಾಗಲೇ ನಷ್ಟವನ್ನೂ ಅನುಭವಿಸುತ್ತಿದೆ. ಪ್ರಾಯೋಜಕ ಕಾರ್ಪೊರೇಟ್ ಕಂಪನಿಗಳು ಮೋದಿಗೆ ಅಪಮಾನ ಮಾಡಿದ Wharton ವಿರುದ್ಧ ಕಿಡಿಕಾರಿದ್ದು, ಕೆಲ ಕಂಪನಿಗಳು ಪ್ರಾಯೋಜಕತ್ವವನ್ನು ಹಿಂಪಡೆದಿವೆ.

Wharton Forumನ ಮತ್ತೊಬ್ಬ ಅತಿಥಿ, ಶಿವಸೇನೆಯ ಹಿರಿಯ ನಾಯಕ, ಸಜ್ಜನ ಖ್ಯಾತಿ ಸುರೇಶ್ ಪ್ರಭು ಅವರು Wharton ಆಹ್ವಾನವನ್ನು ತಿರಸ್ಕರಿಸಿದ್ದಾರೆ. Adani Group ಅಧ್ಯಕ್ಷ ಗೌತಮ್ ಅದಾನಿ ಸಹ ಪ್ರಭು ಜತೆಗೂಡಿ ವಾರ್ಟನ್ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಮಾರ್ಚ್ 23ರಂದು ಈ ಪ್ರತಿಷ್ಠಿತ ಭಾಷಣ ಮಾಲಿಕೆಯನ್ನು ಆಯೋಜಿಸಲಾಗಿದೆ. ಈ ಮಧ್ಯೆ, ಕೆಲ ಆಮಂತ್ರಿತರಿಗೆ Wharton Forum ಆಹ್ವಾನವನ್ನು ಒಪ್ಪಿಕೊಳ್ಳದಂತೆ ಬಿಜೆಪಿ ಸೂಚಿಸಿದೆ. ಮೋದಿ ಆಮಂತ್ರಣವನ್ನು ರದ್ದುಪಡಿಸಿದ ತನ್ನ ತಪ್ಪನ್ನು ತಿದ್ದುಕೊಳ್ಳಬೇಕೆಂದು ಬಿಜೆಪಿ ಮತ್ತು ಕೆಲ ಕಾರ್ಪೊರೇಟ್ ದಿಗ್ಗಜರು Wharton Forum ಸಂಸ್ಥೆ ಮೇಲೆ ಒತ್ತಡ ಹೇರಿದ್ದಾರೆ.

ಈ ಮಧ್ಯೆ, ಡ್ಯಾಮೇಜ್ ಕಂಟ್ರೋಲ್ ಸಲುವಾಗಿ ವಾರ್ಟನ್, ಭ್ರಷ್ಟಾಚಾರ ವಿರೋಧಿ ಅರವಿಂದ್ ಕೇಜ್ರಿವಾಲಾಗೆ ಮಣೆ ಹಾಕಿದೆ. ನಮ್ಮ ವಿದ್ಯಾರ್ಥಿಗಳನ್ನುದ್ದೇಶಿಸಿ ಆಶಯ ಭಾಷಣ ಮಾಡಲು ಬನ್ನಿ ಎಂದು ಮೋದಿಗೆ ಆಹ್ವಾನ ನೀಡಿದ್ದ ವಾರ್ಟನ್, ತೀವ್ರ ಒತ್ತಡಕ್ಕೆ ಸಿಲುಕಿ ಆಮಂತ್ರಣವನ್ನು ಹಿಂಪಡೆದಿದೆ ಎನ್ನಲಾಗಿದೆ. ಆದರೆ ಈಗ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲಾಗೆ ಅದೇ ಆಹ್ವಾನವನ್ನು ಕಳುಹಿಸಿದೆ.

IRS ಅಧಿಕಾರಿಯಾಗಿದ್ದ ಅರವಿಂದ್ ಬಳಿಕ ಭ್ರಷ್ಟಾಚಾರ ವಿರುದ್ಧ ಆಂದೋಲನಕಾರನಾಗಿ ಪರಿವರ್ತನೆಗೊಂಡು ಇದೀಗ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದಾರೆ. Wharton ಆಹ್ವಾನವನ್ನು ತಾವು ಒಪ್ಪಿಕೊಂಡಿದ್ದು, video-conference ಮೂಲಕ ಭಾಷಣ ಮಾಡಲಿದ್ದೇನೆ ಎಂದು ಅರವಿಂದ್ ಕೇಜ್ರಿವಾಲಾ ತಿಳಿಸಿದ್ದಾರೆ. 10 ದಿನಗಳ ಹಿಂದೆಯೇ ತನಗೆ ಆಹ್ವಾನ ಬಂದಿತ್ತು ಎಂದೂ ಅವರು ಹೇಳಿದ್ದಾರೆ.

English summary
Gujarat Chief Minister Narendra Modi is to address Wharton India Economic Forum on Mar 23, through video conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X