ಹೊಗಳುಭಟ್ಟ ಧನಂಜಯ್ ಕುಮಾರ್ ಭಾರಿ ಡೇಂಜರ್

Posted by:
 
Share this on your social network:
   Facebook Twitter Google+ Comments Mail

Dhananjay Kumar
ಬೇಲೂರು, ಮಾ.5: ಕರ್ನಾಟಕ ಜನತಾ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಅವರು ಬಿಎಸ್ ಯಡಿಯೂರಪ್ಪ ಅವರ ಹೊಗಳುಭಟ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಕೆಜೆಪಿ ನಾಯಕರನ್ನು ಹೊಗಳುವ ಭರದಲ್ಲಿ ಬಿಜೆಪಿ ಇಮೇಜ್ ಹಾಳುಮಾಡುತ್ತಿದ್ದಾರೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಗೋ ಮಧುಸೂದನ್ ಆರೋಪಿಸಿದ್ದಾರೆ.

ಬಿಜೆಪಿ ತೊರೆದ ಮೇಲೆ ಧನಂಜಯ್ ಕುಮಾರ್ ಅವರು ಕೆಜೆಪಿಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಜೆಪಿಯಲ್ಲಿ ಸಿದ್ದಲಿಂಗಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಬಿಟ್ಟರೆ ಉಳಿದವರಿಗೆ ಸ್ಥಾನವಿಲ್ಲ. ಕೊನೆಗೆ ಉಳಿಯುವವರು ಈ ಮೂವರು ಮಾತ್ರ. ಈ ಪಕ್ಷದಿಂದ ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ಸಿಗಲಾರದು ಎಂದು ಮಧುಸೂದನ್ ಹೇಳಿದರು.

ಬಿಜೆಪಿ ಯಾವೊಂದು ಜನಾಂಗದ ಬೆಂಬಲಿತ ಪಕ್ಷವಾಗಿಲ್ಲ. ಸಮಾಜಿಕ ತಳಹದಿಯ ಮೇಲೆ ಪಕ್ಷ ಸಂಘಟಿತವಾಗಿದೆ. ಪಕ್ಷಕ್ಕಾಗಿ ಸಾವಿರಾರು ಜನ ಕಾರ್ಯಕರ್ತರು ತ್ಯಾಗ ಮಾಡಿದ್ದಾರೆ. ಒಬ್ಬರಿಂದ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ.ಕೆಜೆಪಿಯಾದರೆ, ಕೆಲವು ಮತ ಪಂಥಗಳನ್ನು ನಂಬಿಕೊಂಡು ಹುಟ್ಟಿಕೊಂಡಿರುವ ಪಕ್ಷ ಹಾಗಾಗಿ ಅಲ್ಪ ಕಾಲದ ಯಶಸ್ಸಿನ ಮೇಲೆ ಉಳಿಯುವಂತದ್ಧು ಎಂದರು.

ಬೇಲೂರು ಹಳೆಬೀಡು ಪ್ರದೇಶಗಳ ಅಭಿವೃದ್ಧಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವುದೇ ಕೊಡುಗೆ ನೀಡಿಲ್ಲ. ಬಿಜೆಪಿ ಸರ್ಕಾರ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಾ ಬಂದಿದೆ. ಆದರೆ, ಇಲ್ಲಿನ ಪ್ರವಾಸಿ ತಾಣಗಳು ದುಃಸ್ಥಿತಿಯಲ್ಲಿದೆ ಎಂದರು. ನಗರ ಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ ಕುಡಿಯುವ ನೀರು, ಒಳ ಚರಂಡಿ, ವಿದ್ಯುತ್ ಗೆ ಆದ್ಯತೆ ನೀಡಲಾಗುತ್ತದೆ ಎಂಬ ಆಶ್ವಾಸನೆ ನೀಡಿದರು.

ಕೆಜೆಪಿ ಸ್ಥಳೀಯ ಮುಖಂಡ ಅಗಿಲೆ ಯೋಗೀಶ್ ಅವರು ಇತ್ತೀಚೆಗೆ ಪ್ರಚಾರದ ಸಂದರ್ಭದಲ್ಲಿ ಮಾತನಾಡುತ್ತಾ ನಗರಸಭೆ ಚುನಾವಣೆಯಲ್ಲಿ ಕನಿಷ್ಠ 10 ಸ್ಥಾನಗಳಲ್ಲಿ ಜಯಗಳಿಸಲಿದೆ. ಯಾವ ಪಕ್ಷದ ನೆರವು ಪಡೆಯುವುದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೋ. ಮಧುಸೂದನ್, ಕೆಜೆಪಿ 1 ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ. ನಗರಸಭೆ ಚುನಾವಣೆಯಲ್ಲೇ ಭಾರಿ ಮುಖಭಂಗ ಅನುಭವಿಸಲಿದೆ ಎಂದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
BJP MLC spokesperson Go. Madhusudan slams KJP counterpart Dhananjay Kumar for damaging the image of BJP while praising his KJP leaders.
Please Wait while comments are loading...
Your Fashion Voice
Advertisement
Content will resume after advertisement