Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಭಾರತದಲ್ಲಿ 53 ಅತಿ ಶ್ರೀಮಂತರು, ಮುಖೇಶ್ ನಂ.1

Posted by:
Updated: Tuesday, March 5, 2013, 15:24 [IST]
 

ಭಾರತದಲ್ಲಿ 53 ಅತಿ ಶ್ರೀಮಂತರು, ಮುಖೇಶ್ ನಂ.1

ಬೆಂಗಳೂರು, ಮಾ.5: ಭಾರತದ ಅತ್ಯಂತ ಶ್ರೀಮಂತ ಎಂಬ ಗೌರವಕ್ಕೆ ರಿಲಯನ್ಸ್ ಸಂಸ್ಥೆಯ ಮುಖೇಶ್ ಅಂಬಾನಿ ಪಾತ್ರರಾಗಿದ್ದಾರೆ. ಹೂರನ್ ಗ್ಲೋಬಲ್ ಶ್ರೀಮಂತರ ಪಟ್ಟಿ 2013ರ ಪ್ರಕಾರ ಭಾರತದಲ್ಲಿ 53 ಮಂದಿ ಬಿಲಿಯನೇರ್ ಇದ್ದಾರೆ.

ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮುಖೇಶ್ ಆವರು ಸತತ 6ನೇ ಬಾರಿ ಭಾರತದ ಕುಬೇರ ಎನಿಸಿದ್ದಾರೆ. ಮುಖೇಶ್ ಅಂಬಾನಿ ಅವರು 20.5 ಬಿಲಿಯನ್ ಡಾಲರ್ ಗಳಿಕೆ ಹೊಂದಿದ್ದು, ಹಾಗೂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 27ನೇ ಶ್ರೇಯಾಂಕ ಪಡೆದಿದ್ದಾರೆ. ವಿಶ್ವದ ಅತಿ ಶ್ರೀಮಂತ ಐಷಾರಾಮಿ ಬಂಗಲೆ ಕೂಡಾ ಅಂಬಾನಿ ಹೆಸರಲ್ಲಿದೆ.

ಮುಖೇಶ್ ಬಂಗಲೆ: 27 ಅಂತಸ್ತಿನ 1.8 ಬಿಲಿಯನ್ ಡಾಲರ್ ಮೊತ್ತದ ಬಂಗಲೆ, 9 ಲಿಫ್ಟ್ ಗಳು, 6 ಅಂತಸ್ತಿನ ಪಾರ್ಕಿಂಗ್, 3 ಹೆಲಿ ಪ್ಯಾಡ್ ಗಳಿದೆ.

ಒಂದು ಕಾಲದಲ್ಲಿ ರೈಸ್ ಟ್ರೇಡರ್ ಆಗಿದ್ದ ಸುಭಾಶ್ ಚಂದ್ರ ಜೀ ಟೆಲಿವಿಷನ್ ನೆಟ್ವರ್ಕ್ ಮೂಲಕ ಹೊಸ ಕ್ರಾಂತಿ ಹುಟ್ಟು ಹಾಕಿದ್ದಲ್ಲದೆ ಶ್ರೀಮಂತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. (3.1 ಬಿಲಿಯನ್ ಡಾಲರ್, 450 ಶ್ರೇಯಾಂಕದಲ್ಲಿದ್ದಾರೆ)

ಮುಂಬೈನಲ್ಲಿ ಹೆಚ್ಚು ಶ್ರೀಮಂತರಿದ್ದಾರೆ ನಂತರ ದೆಹಲಿ ಹಾಗೂ ಬೆಂಗಳೂರಿನಲ್ಲಿ ಕುಬೇರರ ಸಂತತಿ ಕಂಡು ಬಂದಿದೆ ಎಂದು ವರದಿ ಹೇಳುತ್ತದೆ.

ಭಾರತದ 2ನೇ ಶ್ರೀಮಂತ ಉದ್ಯಮಿ ಲಕ್ಷ್ಮಿ ಮಿತ್ತಲ್ 41ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಎನ್ನಾರೈಗಳಲ್ಲಿ ಎಸ್ ಪಿ ಹಿಂದೂಜಾ ಹಾಗೂ ಕುಟುಂಬ(ಲಂಡನ್), ಮಿಕಿ ಜಿಗ್ತಿಯಾನಿ(ದುಬೈ), ಅನಿಲ್ ಅಗರ್ ವಾಲ್(ಲಂಡನ್), ಅಲೋಕ್ ಲೋಹಿಯಾ(ಬ್ಯಾಂಕಾಕ್), ಕವಿತಾ ರಾಮ್ ಶ್ರೀರಾಮ್(ಕ್ಯಾಲಿಫೋರ್ನಿಯಾ), ರೋಮೇಶ್ ಟಿ ವಾಧ್ವಾನಿ(ಕ್ಯಾಲಿಫೋರ್ನಿಯಾ), ಮನೋಜ್ ಭಾರ್ಗವ(ಮಿಚಿಗನ್), ಶ್ರೀ ಪ್ರಕಾಶ್ ಲೋಹಿಯಾ(ಲಂಡನ್) ಹಾಗೂ ವಿನೋದ್ ಖೊಸ್ಲಾ (ಕ್ಯಾಲಿಫೋರ್ನಿಯಾ) ಶ್ರೀಮಂತರ ಪಟ್ಟಿಯಲ್ಲಿದ್ದಾರೆ.

ಅಜೀಂ ಪ್ರೇಂಜಿ ದಿಲೀಪ್ ಸಾಂಘ್ವಿ, ಕುಮಾರ್ ಮಂಗಲಂ ಬಿರ್ಲಾ, ಸಾವಿತ್ರಿಜಿಂದಾಲ್, ಸುನಿಲ್ ಮಿತ್ತಲ್, ಅನಿಲ್ ಅಂಬಾನಿ ಎಂದಿನಂತೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Story first published:  Tuesday, March 5, 2013, 12:29 [IST]
English summary
India has 53 billionaires and India ranks No 6 in the Hurun Global Rich List 2013 pecking order with 53 billionaires.
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like