ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದಲ್ಲಿ 25 ಅಕ್ರಮ ರೆಸಾರ್ಟ್ ನೆಲಸಮ

|
Google Oneindia Kannada News

Koppal dist
ಕೊಪ್ಪಳ, ಫೆ.26 : ಹಂಪಿಯ ಬಳಿ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳು ಘರ್ಜಿಸಿವೆ. ಜಿಲ್ಲಾಡಳಿತದ ಅನುಮತಿ ಪಡೆಯದೆ ವಿರೂಪಾಪುರ ಗೆಡ್ಡೆಯಲ್ಲಿ ನಿರ್ಮಿಸಲಾಗಿದ್ದ ಸುಮಾರು 25 ರೆಸಾರ್ಟ್ ಗಳನ್ನು ಜಿಲ್ಲಾಡಳಿತ ತೆರವು ಗೊಳಿಸಿದೆ. ರೆಸಾರ್ಟ್ ಮಾಲೀಕರ ತೀವ್ರ ಪ್ರತಿರೋಧವನ್ನೆ ಲೆಕ್ಕಸದೆ ರೆಸಾರ್ಟ್ ಗಳನ್ನು ನೆಲಸಮಗೊಳಿಸಲಾಗಿದೆ.

ವಿರೂಪಾಪುರ ಗೆಡ್ಡೆಯಲ್ಲಿ ಜಿಲ್ಲಾಡಳಿತದ ಅನುಮತಿ ಪಡೆಯದೆ ರೆಸಾರ್ಟ್ ನಿರ್ಮಿಸಲಾಗಿದೆ. ಈ ರೆಸಾರ್ಟ್ ಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿಗಳು ಉತ್ತರ ನೀಡುವಂತೆ 25 ರೆಸಾರ್ಟ್ ಮಾಲೀಕರಿಗೆ ನೋಟೀಸ್ ಜಾರಿಗೊಳಿಸಿದ್ದರು.

ನೋಟೀಸ್ ನೀಡಿ ಆರು ತಿಂಗಳು ಕಳೆದರೂ ರೆಸಾರ್ಟ್ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಸಾರ್ಟ್ ಗಳನ್ನು ನೆಲಸಮ ಮಾಡುವಂತೆ ಗಂಗಾವತಿ ತಹಶೀಲ್ದಾರ್ ಗೆ ಜಿಲ್ಲಾಧಿಕಾರಿ ಅದೇಶ ನೀಡಿದ್ದರು. ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಜೆಸಿಬಿಯೊಂದಿಗೆ ಬಂದ ತಹಶೀಲ್ದಾರ್ 25 ರೆಸಾರ್ಟ್ ಗಳನ್ನು ನೆಲಸಮ ಗೊಳಿಸಿದರು.

ವಿದೇಶಿಯರಿದ್ದರು : ಬೆಳಗ್ಗೆ ಜೆಸಿಬಿಗಳು ರೆಸಾರ್ಟ್ ಗಳನ್ನು ನೆಲಸಮ ಗೊಳಿಸಲು ಮುಂದಾದಾಗ ಅದರಲ್ಲಿದ್ದವರು ಮತ್ತು ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಬಹುತೇಕ ರೆಸಾರ್ಟ್ ಗಳಲ್ಲಿ ವಿದೇಶೀಯರು ನೆಲೆಸಿದ್ದರು. ಸ್ಥಳೀಯ ಪೊಲೀಸರ ಸಹಕಾರ ಪಡೆದ ತಹಶೀಲ್ದಾರ್ ರೆಸಾರ್ಟ್ ಗಳನ್ನು ತೆರವುಗೊಳಿಸಿದರು.

English summary
In Koppal dist Virupaksha Gedde 25 resort demolished on Feb 26, Tuesday by district administration. It was alleged that illegal activities were going on in the resorts and they were set up without proper permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X