ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಕಲ್ಯಾಣದ ಲೇಖಕನಿಗೆ ದಲಿತ ಕಥಾ ಪ್ರಶಸ್ತಿ

By Prasad
|
Google Oneindia Kannada News

Machendra Anakal
ಬಸವಕಲ್ಯಾಣ, ಡಿ. 10 : ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಯುವ ಕತೆಗಾರ ಮಚ್ಚೇಂದ್ರ ಪಿ.ಅಣಕಲ್ ಅವರ ಕಥಾ ಸಂಕಲನ 'ಮೊದಲ ಗಿರಾಕಿ'ಗೆ ದಲಿತ ಸಾಹಿತ್ಯ ಪರಿಷತ್ತಿನ 2010-11ನೇ ಸಾಲಿನ ಉತ್ತಮ ದಲಿತ ಕಥಾ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.

ಬೆಳಗಾವಿಯಲ್ಲಿ ಡಿಸೆಂಬರ್ 30ರಂದು ನಡೆಯುಲಿರುವ 4ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅವರಿಗೆ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಗುವುದು ಎಂದು ಸಮ್ಮೇಳನದ ಸಂಯೋಜಕರಾದ ಡಾ. ಅರ್ಜುನ ಗೋಳಸಂಗಿ ತಿಳಿಸಿದ್ದಾರೆ.

ಮಚ್ಚೇಂದ್ರ ಅಣಕಲ್ ಅವರು ಅನೇಕ ಕಥೆ, ಕಾವ್ಯ ಮತ್ತು ಲೇಖನಗಳನ್ನು ಬರೆದಿದ್ದಾರೆ. ಲಾಟರಿ, ಮೊದಲ ಗಿರಾಕಿ ಎಂಬ ಕಥಾ ಸಂಕಲನಗಳನ್ನು ಮತ್ತು "ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು" ಎಂಬ ಕವನ ಸಂಕಲನ ಮತ್ತು ಜ್ಞಾನಸೂರ್ಯ ಹಾಗೂ ಜನಪದ ವೈದ್ಯರ ಕೈಪಿಡಿ ಎಂಬ ಕೃತಿಗಳನ್ನು ಸಂಪಾದಿಸಿದ್ದಾರೆ.

ಇವರ ಕತೆ 'ಡಾಂಬಾರು ದಂಧೆ ' 2010ರಲ್ಲಿ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ಆರನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಪ್ರಯುಕ್ತ ನಡೆಸಿದ ಕಥಾ ಸ್ಪರ್ಧೆಯಲ್ಲಿಯೂ ಮೆಚ್ಚುಗೆ ಪಡೆದು, ದೀಪ ತೋರಿದೆಡೆಗೆ ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ.

ಅಣಕಲ್ ಅವರು ಎಂ.ಎ.ಎಂ.ಎಡ್. ಪದವಿಧರರಾದರು ಕೂಡ ಅವರು ವೃತ್ತಿಯಲ್ಲಿ ಪೋಟೋಗ್ರಾಫರ್ ಹಾಗೂ ಪತ್ರಿಕೆಯೊಂದರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಬರಹಗಳು ಆಗಾಗ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಅವರು ಕವಿತೆಗಳನ್ನು 'ಮಚ್ಚು ಹೊಲೆಯಾರ್' ಎಂಬ ಕಾವ್ಯನಾಮದಿಂದ ಬರೆಯತೊಡಗಿದ್ದಾರೆ.

English summary
Dalit short story writer and upcoming poet Machendra Anakal's short story collection 'Modala Girakige' has been chosen for best short story award by Dalit Sahitya Parishat. The award will be presented on 30th December, 2012 in Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X