Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಹಬ್ಬದ ಸೀಸನ್ : ಸುವರ್ಣರಥ ರೈಲು ದರ ರಿಯಾಯಿತಿ

Posted by:
Updated: Friday, September 21, 2012, 15:33 [IST]
 

ಹಬ್ಬದ ಸೀಸನ್ : ಸುವರ್ಣರಥ ರೈಲು ದರ ರಿಯಾಯಿತಿ

ಬೆಂಗಳೂರು, ಸೆ.20 : ಹಬ್ಬದ ಋತು ಆರಂಭವಾಗುತ್ತಿದ್ದಂತೆ ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ತನ್ನ ಪ್ರಯಾಣ ದರದಲ್ಲಿ ಭಾರಿ ರಿಯಾಯಿತಿ ಘೋಷಿಸಿದೆ. ಸುವರ್ಣರಥ(golden chariot) ರೈಲು ಪ್ರಯಾಣ ದರದಲ್ಲಿ ಶೇ 15 ರಷ್ಟು ರಿಯಾಯಿತಿ ಘೋಷಿಸಲಾಗಿದೆ.

ನಾಡಿನ ನೈಸರ್ಗಿಕ, ಸಾಂಸ್ಕೃತಿಕ, ಪರಂಪರೆ ಹಾಗೂ ಪ್ರಾಣಿ ಪಕ್ಷಿ ವೈವಿಧ್ಯವನ್ನು ಪರಿಚಯಿಸುವ ಈ ಗೋಲ್ಡನ್ ಚಾರಿಯೇಟ್ ರೈಲು ಪ್ರಯಾಣದಲ್ಲಿ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಅಕ್ಟೋಬರ್ ಹಾಗೂ ನವೆಂಬರ್ 2012ರಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ. Pride of the South and Splendor of the South ಎಂಬ ಎರಡು ಬಗೆ ಪ್ರಯಾಣಕ್ಕೂ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ರೈಲು ನಿರ್ವಾಹಕರು ಹೇಳಿದ್ದಾರೆ.

ಅಕ್ಟೋಬರ್ 1 ರಂದು ಬೆಂಗಳೂರಿನಿಂದ ಪ್ರಯಾಣ ಆರಂಭಿಸಲಿರುವ ಸುವರ್ಣರಥ ರೈಲು 7 ರಾತ್ರಿ /8 ದಿನಗಳ ಪ್ಯಾಕೇಜ್ ಟೂರ್ ಹೊಂದಿದೆ. ಬೆಂಗಳೂರು-ಕಬಿನಿ- ಶ್ರೀರಂಗಪಟ್ಟಣ-ಮೈಸೂರು-ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಹಂಪೆ- ಬಾದಾಮಿ-ಪಟ್ಟದಕಲ್ಲು ಹಾಗೂ ಗೋವಾ ತಲುಪಲಿದೆ.

ಗಾಲಿ ರೆಡ್ಡಿ ಕಾಲದಿಂದಲೂ ತಗ್ಗದ ದರ: ಹಬ್ಬದ ಸೀಸನ್ ನಲ್ಲಿ ಪ್ರವಾಸದ ದರ ಪ್ರತಿ ಪ್ರಯಾಣಿಕರಿಗೆ ರು. 187,000 ಪ್ರತಿ ರಾತ್ರಿ ಪ್ರಯಾಣ(ಭಾರತೀಯರಿಗೆ) ವಿದೇಶಿ ಪ್ರವಾಸಿಗರಿಗೆ 640.90 ಯುಎಸ್ ಡಾಲರ್ ಇದೆ.

ಮೊದಲು ಆರಂಭಿಸಿದ ಈ ಮೈಸೂರು ಮಾರ್ಗದ ಸುವರ್ಣರಥವೇ ಏಳಿಗೆ ಕಾಣದಿದ್ದರೂ ನೆರೆ ರಾಜ್ಯಗಳ ಸಂಸ್ಕೃತಿ ಅನಾವರಣಕ್ಕಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಂದಿನ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೊಂದು ಸುವರ್ಣರಥ ಆರಂಭಿಸಿದ್ದರು.

ಗಾಲಿ ರೆಡ್ಡಿ ಅವರ ಕಾಲದಲ್ಲಿದ್ದ ವಾರಕ್ಕೆ ಒಂದೂವರೆ ಲಕ್ಷ ರು ಪ್ರಯಾಣ ದರ ಇಂದಿಗೂ ಮುಂದುವರೆದಿದೆ. ವಿದೇಶಿ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಸುವರ್ಣರಥ ಆರಂಭಿಸಿದ ಗಾಲಿ ರೆಡ್ಡಿ ಅವರು ಬೆಂಗಳೂರನ್ನು ದಕ್ಷಿಣ ಭಾರತದ ಮುಖ್ಯ ಪ್ರವಾಸಿ ಕೇಂದ್ರವನ್ನಾಗಿಸುವ ಉದ್ದೇಶ ಹೊಂದಿದ್ದರು.

ಇನ್ನೊಂದು ಪ್ರಯಾಣ ಅಕ್ಟೋಬರ್ 15 ರಿಂದ ಬೆಂಗಳೂರು ಬಿಟ್ಟು ಚೆನ್ನೈ-ಪುದುಚೇರಿ-ತಂಜಾವೂರು-ಮದುರೈ-ತಿರುವನಂತಪುರಂ-ಅಲೆಪ್ಪಿ-ಕೊಚ್ಚಿ ಕಡೆಗೆ ತೆರಳಿ 7 ರಾತ್ರಿ/ 8 ದಿನಗಳ ನಂತರ ಬೆಂಗಳೂರು ತಲುಪಲಿದೆ.

ಹಬ್ಬದ ಸೀಸನ್ ನಲ್ಲಿ ಪ್ರವಾಸದ ದರ ಪ್ರತಿ ಪ್ರಯಾಣಿಕರಿಗೆ 22440 ಪ್ರತಿ ರಾತ್ರಿ ಪ್ರಯಾಣ(ಭಾರತೀಯರಿಗೆ) ವಿದೇಶಿ ಪ್ರವಾಸಿಗರಿಗೆ 706.35 ಯುಎಸ್ ಡಾಲರ್ ಇದೆ. ಇಬ್ಬರು, ಮೂವರು ಪ್ರಯಾಣಿಕರಿಗೆ ಪ್ರತ್ಯೇಕ ದರ ನಿಗದಿಯಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : http://www.the-golden-chariot.com/

Story first published:  Thursday, September 20, 2012, 16:26 [IST]
English summary
The one and only South Indian luxury train Golden Chariot operators come up with festival offer 15 % discount during Dussehra and Diwali from October to November 2012
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like