ಬಿಎಸ್ ಯಡಿಯೂರಪ್ಪ, ಅನಂತ್ ಕುಮಾರ್ ಬಂಧನ

Subscribe to Oneindia Kannada

bharat-bandh-yeddyurappa-ananth-kumar-arrested-bangalore
ಬೆಂಗಳೂರು, ಸೆ. 20: ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ, ಪ್ರತಿಭಟನೆಯಲ್ಲಿ ತೊಡಗಿದ್ದ ಬಿಜೆಪಿಯ ಹಿರಿಯ ನಾಯಕರಾದ ಬಿ ಎಸ್ ಯಡಿಯೂರಪ್ಪ, ಅನಂತ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರದ 6/12 ಸಿಲಿಂಡರ್, ಡಿಸೆಲ್ ಬೆಲೆ ಏರಿಕೆ, ಎಫ್ ಡಿಐ ನೀತಿಗಳನ್ನು ಖಂಡಿಸಿ, ಪ್ರತಿಭಟನಾರ್ಥವಾಗಿ ಇಂದು ಬೀದಿಗಿಳಿದ ಬಿಜೆಪಿ ನಾಯಕರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಹಾರಾಣಿ ಕಾಲೇಜಿನೆದುರು ಹೋಟೆಲ್ ಏಟ್ರಿಯಾ ಬಳಿ ಮೆರವಣಿಗೆಯಲ್ಲಿ ಸಾಗಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್, ಶಾಸಕ ಆಶ್ವತ್ಥ್ ನಾರಾಯಣ ಮುಂತಾದ ನಾಯಕರನ್ನು ಬಂಧಿಸಿ, ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಯಡಿಯೂರಪ್ಪ ಇದೇ ವೇಳೆ ಆಗ್ರಹಿಸಿದರು. 

English summary
Bharat Bandh effect: BJP senior leaders BS Yeddyurappa and Ananth Kumar were arrested in Bangalore a short while ago.
Please Wait while comments are loading...