Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ರತಿಸುಖದ ರಾಣಿ ಜೆನ್ನಿ ಮಗುವಿನ ನಿಜವಾದ ಅಪ್ಪ ಯಾರು?

Posted by:
Updated: Monday, September 17, 2012, 18:58 [IST]
 

ರತಿಸುಖದ ರಾಣಿ ಜೆನ್ನಿ ಮಗುವಿನ ನಿಜವಾದ ಅಪ್ಪ ಯಾರು?

ಲಂಡನ್, ಸೆ. 17 : "ನಾನೀಗ 6 ತಿಂಗಳ ಗರ್ಭಿಣಿ. ನನ್ನ ಮಗುವಿನ ತಂದೆ ಯಾರು ಅಂತ ನನಗೆ ಚೆನ್ನಾಗಿ ಗೊತ್ತು. ಆದರೂ, ನನ್ನ ಮಗುವಿನ ಅಪ್ಪ ಯಾರೆಂದು ನಿಖರವಾಗಿ ತಿಳಿಯಲು ಡಿಎನ್ಎ ಪರೀಕ್ಷೆ ಮಾಡಿಸಿಕೊಳ್ಳಲಿದ್ದೇನೆ" ಎಂದು ಖ್ಯಾತ ಫುಟ್ಬಾಲ್ ತಾರೆ ವೇಯ್ನ್ ರೂನಿ ಸೇರಿದಂತೆ 100 ಪುರುಷರೊಂದಿಗೆ ಮಲಗಿರುವುದಾಗಿ ಯಾವುದೇ ಮುಜುಗರವಿಲ್ಲದೆ ಘಂಟಾಘೋಷವಾಗಿ ಸಾರಿರುವ 23 ವರ್ಷದ ಜೆನ್ನಿ ಥಾಪ್ಸನ್ ಬಾಂಬ್ ಸಿಡಿಸಿದ್ದಾಳೆ.

ಈ ಸಂಗತಿ ಖಂಡಿತ ಅನೇಕ ಪುರುಷರಲ್ಲಿ ತಳಮಳ ತರಲಿದೆ. ಅನೇಕರು ನನ್ನ ಮಗುವಿನ ಅಪ್ಪ ತಾನೇ ಇರಬಹುದೆಂದು ತಿಳಿಯಲು ಯತ್ನಿಸಲಿದ್ದಾರೆ. ಆದರೆ, ಖಂಡಿತವಾಗಿ ಹೇಳುತ್ತೇನೆ, ನಾನು 100 ಜನರೊಂದಿಗೆ ಹಾಸಿಗೆ ಹಂಚಿಕೊಂಡಿದ್ದರೂ, ಐವರು ನನ್ನ ಮಾಜಿ ಪ್ರಿಯತಮರಲ್ಲಿ ಒಬ್ಬರು ನನ್ನ ಮಗಳ ಅಪ್ಪ ಆಗಲಿದ್ದಾರೆ ಎಂದು ಜೆನ್ನಿ ಬಾಣ ಬಿಟ್ಟಿದ್ದಾಳೆ ಎಂದು ಸನ್ ಪತ್ರಿಕೆ ವರದಿ ಮಾಡಿದೆ.

ಮ್ಯಾಂಚೆಸ್ಟರ್ ಯುನೈಟೆಡ್ ಸ್ಟಾರ್ ರೂನಿಯ ಹೆಂಡತಿ ಐದು ತಿಂಗಳ ಗರ್ಭಿಣಿಯಾಗಿದ್ದಾಗ, ರೂನಿಯೊಡನೆ ಸಂಬಂಧ ಹೊಂದಿದ್ದುಗಾಗಿ ಮಾಜಿ ಎಸ್ಕಾರ್ಟ್ ಜೆನ್ನಿ ಥಾಂಪ್ಸನ್ ಹೇಳಿದ್ದಳು. ರೂನಿಯಲ್ಲದೆ ಇನ್ನೊಬ್ಬ ಖ್ಯಾತ ಫುಟ್ಬಾಲ್ ಆಟಗಾರ ಮಾರಿಯೋ ಬಲೋಟೆಲಿ ಜೊತೆ ಕೂಡ ಜೆನ್ನಿ ಅನೈತಿಕ ಸಂಬಂಧ ಹೊಂದಿದ್ದಳು. ಇನ್ನೂ ಅನೇಕ ಖ್ಯಾತನಾಮರೊಡನೆ ಚಕ್ಕಂದವಾಡಿರುವ ಜೆನ್ನಿ, ತನ್ನ ಮಗುವಿನ ಅಪ್ಪ ಯಾರೆಂಬುದನ್ನು ಮಾತ್ರ ಬಾಯಿ ಬಿಡುತ್ತಿಲ್ಲ.

ಫುಟ್ಬಾಲ್ ಆಟಗಾರರನ್ನೇ ಆಟವಾಡಿಸಿದ ಜೆನ್ನಿ, ವೇಯ್ನ್ ರೂನಿ ಮತ್ತು ಮಾರಿಯೋ ಬಲೋಟೆಲಿ ನಡುವೆ ಬಲೋಟೆಲಿಯೇ ನಿಜವಾದ ಪುರುಷ, ಆತನೇ ರೂನಿಗಿಂತ ಒಂದು ಕೈ ಮೇಲು ಎಂದು ಷರಾ ಬರೆದಿದ್ದಾಳೆ. ಎಲ್ಲಾ ರೀತಿಯಿಂದಲೂ ರೂನಿಗಿಂತ ಪೌರುಷವಂತನಾಗಿದ್ದ ಮಾರಿಯೋ ಜಾಣ ಮಾತ್ರವಲ್ಲ ಆತನಿಗೆ ಅಸಾಧ್ಯ ಹಾಸ್ಯ ಪ್ರಜ್ಞೆ ಇದೆ ಎಂದು ಜೆನ್ನಿ ಥಾಂಪ್ಸನ್ ಹೇಳಿದ್ದಾಳೆ. ಜೆನ್ನಿಯ ಮಗು ಈ ವರ್ಷದ ಕ್ರಿಸ್ಮಸ್ ಹೊತ್ತಿಗೆ ಹುಟ್ಟಲಿದೆ.

ತಮಾಷೆ ಅಂದ್ರೆ ಮಾರಿಯೋ ಬಲೋಟೆಲಿಯ ಗೆಳತಿಗೂ ಗೊತ್ತಾಗದಂತೆ ಆತನೊಡನೆ ಹಾಸಿಗೆ ಹಂಚಿಕೊಂಡಿದ್ದಾಳೆ. ಜೆನ್ನಿ ಬಹಿರಂಗಪಡಿಸಿರುವ ಮತ್ತೊಂದು ಸಂಗತಿಯೆಂದರೆ, ಆಕೆ ಹಾಸಿಗೆ ಹಂಚಿಕೊಳ್ಳಲು ಪ್ರತಿ ರಾತ್ರಿ 1,200 ಪೌಂಡ್ ಚಾರ್ಜ್ ಮಾಡುತ್ತಿದ್ದಳು. ಇಷ್ಟೆಲ್ಲ ಪುರುಷರೊಡನೆ ರತಿಸುಖ ಅನುಭವಿಸಿದ್ದರೂ ಮಾರಿಯೋ ಬಲೋಟೆಯಿಯಂಥ ಪುರುಷಪುಂಗವನನ್ನು ನಾನು ಕಂಡೇ ಇಲ್ಲ ಎಂದು ಉಳಿದವರಿಗೆ ಕಿಚ್ಚು ಹಚ್ಚಿದ್ದಾಳೆ ಜೆನ್ನಿ. ಅಂದ ಹಾಗೆ, ಜೆನ್ನಿಯ ಹುಟ್ಟಲಿರುವ ಮಗುವಿನ ನಿಜವಾದ ಅಪ್ಪ ಯಾರಿರಬಹುದು?

Story first published:  Monday, September 17, 2012, 18:30 [IST]
English summary
Who is the father of child of former escort Jenny Thompson, who has admitted that she has slept with more then 100 men. Jenny has revealed that she is now 6 months pregnant and the father of the child could be one of 5 lovers.
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like