ಸಾಯಿ ಪ್ಯಾಲೇಸ್ ನಿಂದ 10ಗ್ರಾಂಗೆ 20ಗ್ರಾಂ ಆಫರ್

Posted by:
 
Share this on your social network:
   Facebook Twitter Google+ Comments Mail

Sri Sai Gold Palace Bangalore
ಬೆಂಗಳೂರು, ಸೆ.14: ಗೌರಿ ಗಣೇಶ ಹಬ್ಬದ ಪ್ರಯುಕ್ತ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನ ಆಯ್ದ ಶಾಖೆಗಳಲ್ಲಿ ಭರ್ಜರಿ ಕೊಡುಗೆ ನೀಡುತ್ತಿದೆ.

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಬಸವನಗುಡಿ ಹಾಗೂ ಪದ್ಮನಾಭನಗರ ಶಾಖೆಗಳಲ್ಲಿ ಈ ಕೊಡುಗೆಗಳು ಲಭ್ಯವಿರುತ್ತದೆ. 10, 20, 30 ಗ್ರಾಂ ಚಿನ್ನಾಭರಣ ಖರೀದಿಗೆ 20, 40, 60 ಗ್ರಾಂ ನಂತೆ ಬೆಳ್ಳಿಯನ್ನು ಉಚಿತವಾಗಿ ಪಡೆಯಬಹುದು.

ಶ್ರೀಸಾಯಿ ಸ್ಯಾರಿ ಪ್ಯಾಲೇಸ್ ನಲ್ಲಿ ಕೊಳ್ಳುವ ಎಲ್ಲಾ ಸೀರೆ ಹಾಗೂ ಉಡುಪುಗಳ ಮೇಲೆ ಶೇ 15 ರಷ್ಟು ರಿಯಾಯತಿ ಪಡೆಯಬಹುದು. ಶೇ 10 ರಷ್ಟು ರಿಯಾಯಿತಿಯನ್ನು ಬಸವನಗುಡಿಯಲ್ಲಿರುವ ಶ್ರೀ ಸಾಯಿ ಪಾರ್ಟಿ ಹಾಲ್ ನ ಬುಕ್ಕಿಂ ಗ್ ಮೇಲೆ ಪಡೆಯಬಹುದು.

ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಆಭರಣಗಳ ಸಂಗ್ರಹವನ್ನು ನೋಡುವ ಅವಕಾಶವನ್ನು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ವಿನ್ಯಾಸದ antic ಆಭರಣ, ರೂಬಿ ಮತ್ತು ಎಮೆರಾಲ್ಡ್ ಆಭರಣ, ಹಾರ ಹಾಗೂ ವಿಶೇಷ ಚಿನ್ನ ಮತ್ತು ಡೈಮಂಡ್ ಆಭರಣಗಲು ಗ್ರಾಹಕರ ಮನಸೆಳೆಯಲಿದೆ.

ಬೆಳ್ಳಿಯ ವಿವಿಧ ಆಭರಣಗಳು ಕಣ್ಮನ ಸೆಳೆಯಲಿದ್ದು ಈ ಸೌಲಭ್ಯ ಸೆ.14 ರಿಂದ ಸೆ.23ರವರೆಗೆ ಮಾತ್ರ ಲಭ್ಯವಿರುತ್ತದೆ. ಗ್ರಾಹಕರು ಈ ವಿಶೇಷ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿಎ ಸರವಣ ಹೇಳಿದ್ದಾರೆ.

ಚಿನ್ನದ ದರ: ಜಾಗತಿಕ ಮಾರುಕಟ್ಟೆಯಲ್ಲಿ ಏರುಪೇರು, ಡಚ್ ಚುನಾವಣೆ, ಜರ್ಮನಿಯ ಯುರೋಪಿಯನ್ ಬೇಲ್ ಔಟ್ ಫಂಡ್ ಮುಂತಾದ ಕಾರಣಗಳ ಜೊತೆಗೆ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಪರಿಣಾಮ ಉದ್ಯಮಿಗಳು ಷೇರುದಾರರು ಹಳದಿ ಲೋಹ ಖರೀದಿಯತ್ತ ಹೆಚ್ಚಿನ ಆಸಕ್ತಿ ವಹಿಸದಿರುವುದರಿಂದ ಮಂಗಳವಾ(ಸೆ.11) ದಿಢೀರ್ ಕುಸಿತ ಕಂಡಿತ್ತು.

ಬೆಂಗಳೂರಿನಲ್ಲಿ ಶುಕ್ರವಾರ(ಸೆ.14) ಚಿನ್ನದ ದರ 32190.00 ರು (24K), 29,85೦ ರು(22K), ಬೆಳ್ಳಿ 1 ಕಿಲೋ 62,300 ರು ಇದೆ. ಉಳಿದಂತೆ ಚೆನ್ನೈನಲ್ಲಿ 22K(32720), 24K(32850.00) ಇದೆ. ಅಹಮದಾಬಾದಿನಲ್ಲಿ 32575.00(22K), 32699.00(24K). ಮುಂಬೈ, ದೆಹಲಿ, ಜೈಪುರಗಳಲ್ಲಿ 32 ಸಾವಿರ ಗಡಿಯಲ್ಲೇ ಚಿನ್ನದ ದರ ಮುಂದುವರೆದಿದೆ.

English summary
Sri Sai Gold Palace in Bangalore is giving many offers to his customer during the Gowri and Ganesh Festival
Please Wait while comments are loading...
Your Fashion Voice
Advertisement
Content will resume after advertisement