ಹುಬ್ಬಳ್ಳಿ ಸ್ಪೈಸ್ ಜೆಟ್ ಹಾರಾಟಕ್ಕೆ ಮುಹೂರ್ತ ಫಿಕ್ಸ್

Written by:
 
Share this on your social network:
   Facebook Twitter Google+    Comments Mail

ಹುಬ್ಬಳ್ಳಿ ಸ್ಪೈಸ್ ಜೆಟ್ ಹಾರಾಟಕ್ಕೆ ಮುಹೂರ್ತ ಫಿಕ್ಸ್
ಬೆಂಗಳೂರು, ಸೆ.13: ಸದ್ಯದಲ್ಲೇ ಹುಬ್ಬಳ್ಳಿ-ಬೆಂಗಳೂರು SpiceJet ಹಾರಾಟ ಎಂಬ ಶೀರ್ಷಿಕೆಯಡಿಯಲ್ಲಿ ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಸುದ್ದಿ ಓದಿರುತ್ತೀರಿ. ಹುಬ್ಬಳ್ಳಿಗೆ ಸ್ಪೈಸ್ ಜೆಟ್ ಮೂಲಕ ಪ್ರಯಾಣಿಸಲು ಇಚ್ಛಿಸುವವರಿಗೆ ದರ ಪಟ್ಟಿ, ವಿಮಾನ ಮೊದಲ ಹಾರಾಟ ದಿನಾಂಕ ಪ್ರಕಟಿಸುತ್ತಿದ್ದೇವೆ.

ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿ ನಡುವೆ ಸೆಪ್ಟೆಂಬರ್ 27,2012 ರಿಂದ ವಿಮಾನ ಹಾರಾಟ ಆರಂಭವಾಗಲಿದೆ.

ಉದ್ಘಾಟನಾ ದರ ಎಲ್ಲಾ ತೆರಿಗೆಗಳನ್ನು ಹೊರತುಪಡಿಸಿ ರು.1999 ಮಾತ್ರ. ಪ್ರತಿದಿನ ಬೆಂಗಳೂರು-ಹುಬ್ಬಳ್ಳಿ ವಿಮಾನ ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 19.50 ಗಂಟೆ ನಿರ್ಗಮಿಸಲಿದೆ ಹಾಗೂ ಹುಬ್ಬಳ್ಳಿಗೆ 20.45ಕ್ಕೆ ಆಗಮಿಸಲಿದೆ.

ವಾಪಸ್ ಬರುವಾಗ, ಹುಬ್ಬಳ್ಳಿ-ಬೆಂಗಳೂರು ವಿಮಾನ ಹುಬ್ಬಳ್ಳಿಯನ್ನು 21.05ಕ್ಕೆ ಬಿಡಲಿದ್ದು, ಬೆಂಗಳೂರನ್ನು 22ಕ್ಕೆ ತಲುಪಲಿದೆ.

Bombardier Q400 ಏರ್ ಕ್ರಾಫ್ಟ್ ಅನ್ನು ಬೆಂಗಳೂರು -ಹುಬ್ಬಳ್ಳಿ ಹಾಗೂ ಬೆಂಗಳೂರು ಕೊಯಮತ್ತೂರು ಮಾರ್ಗದಲ್ಲಿ ಪರಿಚಯಿಸಲಾಗುತ್ತಿದೆ. ಬೆಂಗಳೂರು- ಕೊಯಮತ್ತೂರಿನ ವಿಮಾನಯಾನ ಕೂಡಾ ಸೆ.27ರಂದು ಆರಂಭವಾಗಲಿದೆ.

Bombardier Q400 NextGen turboprop ಏರ್ ಕ್ರಾಫ್ಟ್ ನಲ್ಲಿ 78 ಮಂದಿ ಪ್ರಯಾಣಿಕರು ಒಮ್ಮೆಗೆ ಸಂಚರಿಸಬಹುದಾಗಿದೆ.

ಸೆಪ್ಟೆಂಬರ್ 30, 2011ರಿಂದ ಮಂಗಳೂರು ಮತ್ತು ಹೈದರಾಬಾದ್ ನಡುವೆ ಸ್ಪೈಸ್ ಜೆಟ್ ಏರ್ ಲೈನ್ಸ್ ದೈನಂದಿನ ಹಾರಾಟವನ್ನು ಆರಂಭವಾದ ಬೆನ್ನಲ್ಲೇ ಹುಬ್ಬಳ್ಳಿ-ಬೆಂಗಳೂರು ವಿಮಾನಯಾನಕ್ಕೆ ಬೇಡಿಕೆ ಹೆಚ್ಚಾಗಿತ್ತು.

ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಿಂಗ್ ಫಿಷರ್ ವಿಮಾನಗಳು ಸಂಚಾರ ಸ್ಥಗಿತಗೊಳಿಸಿದ್ದು ಬೇಡಿಕೆ ಇನ್ನಷ್ಟು ತೀವ್ರಗೊಳ್ಳಲು ಕಾರಣವಾಗಿತ್ತು.

ಈ ನಿಟ್ಟಿನಲ್ಲಿ, ಸ್ಪೈಸ್ ಜೆಟ್ ಸಂಸ್ಥೆ ಅಧಿಕಾರಿಗಳು ಇತ್ತೀಚೆಗೆ ಹುಬ್ಬಳ್ಳಿಗೆ ಭೇಟಿ ನೀಡಿ, ಅಲ್ಲಿನ ವಿಮಾನ ನಿಲ್ದಾಣದಲ್ಲಿನ ಮೂಲ ಸೌಕರ್ಯಗಳನ್ನು ಅವಲೋಕಿಸಿದೆ. ತದನಂತರ, ಭಾರತೀಯ ವಿಮಾನ ಪ್ರಾಧಿಕಾರ(AAI)ಕ್ಕೆ ವರದಿ ಸಲ್ಲಿಸಿದ್ದರು. ನಂತರ ಎಎಐ ವಿಮಾನ ಸಂಚಾರಕ್ಕೆ ಅಸ್ತು ಎಂದಿತ್ತು.

ದೆಹಲಿಯಿಂದ ಸ್ಪೈಸ್ ಜೆಟ್ ಸಂಸ್ಥೆಯ ತಾಂತ್ರಿಕ ಅಧಿಕಾರಿಗಳು ಭೇಟಿ ನೀಡಿದ್ದರು. ಶೀಘ್ರದಲ್ಲೇ ಹುಬ್ಬಳ್ಳಿ-ಬೆಂಗಳೂರು ನಡುವೆ ವಿಮಾನ ಯಾನ ಆರಂಭವಾಗಲಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಕೆಎಂ ಬಸವರಾಜು ಅವರು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸ್ಪೈಸ್ ಜೆಟ್ ಸಂಸ್ಥೆಯ ಆಡಳಿತಾಧಿಕಾರಿಗಳು ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮ ಕಚೇರಿ ಸ್ಥಾಪನೆ, ಟಿಕೆಟ್ ಕೌಂಟರ್ ಮತ್ತಿತರ ಸೌಲಭ್ಯಗಳನ್ನು ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಇದೇ ವೇಳೆ, ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಹುಬ್ಬಳ್ಳಿ- ಮುಂಬೈ ಮಧ್ಯೆಯೂ ವಿಮಾನ ಸಂಚಾರ ಪ್ರಾರಂಭಿಸಲು ಸ್ಪೈಸ್ ಜೆಟ್ ಯೋಜಿಸಿದೆ.

English summary
SpiceJet will operate flights between Bangalore and Hubli from September 27. The Bangalore-Hubli daily flight inaugural fare will be Rs 1,999.
Write a Comment