ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರತಾಪ್ ಮದುವೆ' ಪೌರೋಹಿತ್ಯ ವಹಿಸಿದ್ದ ಉಗ್ರರ ಪ್ರವರ

By Srinath
|
Google Oneindia Kannada News

bangalore-ccb-marriage-pratap-terror-operation-details
ಬೆಂಗಳೂರು, ಆಗಸ್ಟ್ 31: ಇದು 'ಪ್ರತಾಪ್ ಮದುವೆ' ಪೌರೋಹಿತ್ಯ ವಹಿಸಿದ್ದ ಉಗ್ರರ ಸೌಮ್ಯ ಮುಖಗಳ ಪ್ರವರ. ಸಿಸಿಬಿ ಪೊಲೀಸರಿಂದ ಬಂದನಕ್ಕೊಳಗಾಗಿರುವ ಶಂಕಿತ ಉಗ್ರರ ಪೈಕಿ ಅನೇಕರು ನಿಜಕ್ಕೂ ಬುದ್ಧಿವಂತರೇ. ಯಾರೂ ಮುವತ್ತರ ಗಡಿಯನ್ನೂ ದಾಟಿದವರಲ್ಲ. ಆದರೆ ಅವರ ಬುದ್ಧಿಗಳು ಗಡಿದಾಟಿ ನೆರೆಯ ರಾಷ್ಟ್ರಕ್ಕೆ ನೆರವಾಗಿವೆ.

ಮತಿ-ಉರ್‌-ರೆಹಮಾನ್‌ ಸಿದ್ದಿಕಿಗೆ ಇನ್ನೂ 26 ವರ್ಷ ವಯಸ್ಸು. ನೋಡಿದರೆ ಅಮಾಯಕನಂತೆ ಕಾಣುತ್ತಾನೆ. ಅದೂ ಪತ್ರಕರ್ತನ ಸೋಗು ಧರಿಸಿದರಂತೂ ಮುಗಿದೇ ಹೋಯಿತು. ಇಂತಿಪ್ಪ ಮತಿಗೆಟ್ಟ ರೆಹಮಾನ್‌ ಸಿದ್ದಿಕಿ 5 ವರ್ಷಗಳಿಂದ ಪತ್ರಿಕೋದ್ಯಮದಲ್ಲೂ ಮಣ್ಣು ಹೊತ್ತಿದ್ದಾನೆ.

ಅಪ್ಪ-ಅಮ್ಮನಿಲ್ಲದ ಅನಾಥ ರೆಹಮಾನ್‌ ಸಿದ್ದಿಕಿ ಆರಂಭದಲ್ಲಿ ಮುಂಬೈ ಮೂಲದ 'ಮಿಡ್-ಡೇ' ಟ್ಯಾಬ್ಲಾಯ್ಡ್ ದಿನಪತ್ರಿಕೆಯಲ್ಲಿ ಕ್ರೈಂ ರಿಪೋರ್ಟ್ ಆಗಿದ್ದವ. ಆ ಮೂಲಕವೇ ಅಪರಾಧ ಜಗತ್ತಿಗೆ ತೆರೆದುಕೊಂಡಿದ್ದಾನೆ.

ಅದಾದನಂತರ ಬಾಂಗ್ಲಾ ಮೂಲದ ಭಯೋತ್ಪಾದಕ ಸಂಘಟನೆಯ ಜತೆ ಸಂಪರ್ಕಕ್ಕೆ ಬಂದು ಮುಖ್ಯವಾಹಿನಿಯಲ್ಲಿರುವ ಆಂಗ್ಲ ಪತ್ರಿಕೆಗೆ ಈಗ್ಗೆ ಮೂರು ವರ್ಷಗಳ ಹಿಂದೆ entry ಹಾಕಿದ್ದಾನೆ. ಇದು ಭಯೋತ್ಪಾದಕ ಸಂಘಟನೆಗಳ ಹುನ್ನಾರ ಎಂಬುದು ಸಿಸಿಬಿ ಪೊಲೀಸರ ಎಣಿಕೆ.

ಏಕೆಂದರೆ ಇದುವರೆಗೆ ಉಗ್ರರು ಪತ್ರಿಕೋದ್ಯಮವೊಂದನ್ನು ಬಿಟ್ಟು ಬಹುತೇಕ ಇನ್ನೆಲ್ಲ ಕ್ಷೇತ್ರಗಳಲ್ಲೂ ಕಾಲಿಟ್ಟಿದ್ದರು. ಮತ್ತು ಪತ್ರಕರ್ತನಾಗಿದ್ದರೆ ತಮ್ಮ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಎಂದೆಣಿಸಿದ ಉಗ್ರರು ಗುಪ್ತ್ ಗುಪ್ತ್ ಆಗಿ ಆಯಕಟ್ಟಿನ ಪತ್ರಿಕಾಲಯಗಳಲ್ಲಿ ಕೆಲಸಗಿಟ್ಟಿಸತೊಡಗಿದ್ದಾರೆ. ಆ ಪ್ರಯತ್ನದಲ್ಲಿ 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ಸೇರಿಕೊಂಡವನೇ ಮತಿ-ಉರ್‌-ರೆಹಮಾನ್‌ ಸಿದ್ದಿಕಿ.

ಇನ್ನುಳಿದ 10 ಮಂದಿಯ ನಾಮಧೇಯ ಹೀಗಿದೆ:
ಹುಬ್ಬಳ್ಳಿ ಮೂಲದ ಶೋಹಿಬ್‌ ಅಹಮ್ಮದ್‌ ಮಿರ್ಜಾ ಅಲಿಯಾಸ್‌ ಚೋಟು (25), ಅಬ್ದುಲ್ಲಾ ಅಲಿಯಾಸ್‌ ಅಬ್ದುಲ್‌ ಹಕೀಂ (25), ಏಜಾಜ್‌ ಮಹಮ್ಮದ್‌ ಮಿರ್ಜಾ (25), ಬಾಗಲಕೋಟೆಯ ಮೊಹಮ್ಮದ್‌ ಯೂಸುಫ್ ನಾಲಬಂದ್‌ (28), ರಿಯಾಜ್‌ ಅಹಮ್ಮದ್‌ (28), ಎಲೆಕ್ಟ್ರಿಕಲ್ ಇಂಜಿನಿಯರ್ ಉಬೆದುಲ್ಲಾ ಇಮ್ರಾನ್‌ ಬಹುದ್ದೂರ್‌ ಅಲಿಯಾಸ್‌ ಸಮೀರ್‌ (24), ಗುತ್ತಿಗೆದಾರ ಮಹಮ್ಮದ್‌ ಸಾಧಿಕ್‌ ಲಷ್ಕರ್‌ ಅಲಿಯಾಸ್‌ ರಾಜು (28), ಎಂಬಿಎ ಪದವೀಧರ ವಾಹಿದ್‌ ಹುಸೇನ್‌ ಅಲಿಯಾಸ್‌ ಸಾಹಿಲ್‌ (26), ಗಾರೆ ಕೂಲಿಯವ ಬಾಗಲುಕೋಟೆ ಬಾಬಾ ಅಲಿಯಾಸ್‌ ಮೆಹಬೂಬ್‌ (26) ಹಾಗೂ ಡಾ.ಜಾಫ‌ರ್‌ ಇಕ್ಬಾಲ್‌ ಸೊಲ್ಲಾಪುರ್‌ (27) ಬಂಧಿತರು.

ಏನೆಲ್ಲ ಸಿಕ್ಕಿದೆ:
ಆರೋಪಿಗಳಿಂದ ಮೊಬೈಲ್ ಫೋನುಗಳು, ವಿದೇಶಿ ನಿರ್ಮಿತ 7.65 ಎಂಎಂ ಪಿಸ್ತೂಲ್‌, ಲ್ಯಾಪ್‌ಟಾಪ್ ಹಾಗೂ 2 ಹಾರ್ಡ್ ಡಿಸ್ಕ್, 7 ಮದ್ದುಗುಂಡು, ಸಿ.ಡಿ, ಜಿಹಾದಿ ಸಾಹಿತ್ಯ, ವಿವಿಧ ಧರ್ಮಗಳ ಪುಸ್ತಕಗಳು ಸೇರಿದಂತೆ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಎಲ್‌ಇಟಿ ಹಾಗೂ ಹುಜಿ ಸಂಘಟನೆಗಳ ಮುಖಂಡರ ಆಣಿತಿಯಂತೆ ಕರ್ನಾಟಕದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು, ಪತ್ರಕರ್ತರು, ಸಂಸದರು ಮತ್ತಿತರ ಜನನಾಯಕರ ಕೊಲೆಗೆ ಹೊಂಚು ಹಾಕಿದ್ದರು.

ಪ್ರತಿಷ್ಠಿತ DRDO ವಿಜ್ಞಾನಿ:
ಆರೋಪಿಗಳ ಪೈಕಿ ಒಬ್ಬ ಶೋಹಿಬ್‌ ಅಹಮ್ಮದ್‌ ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ Airborne Early Warning and Control System ವಿಭಾಗದಲ್ಲಿ ಕಿರಿಯ ವಿಜ್ಞಾನಿ, ಆತನ ಸೋದರ ಏಜಾಜ್‌ ಮಹಮ್ಮದ್‌ ಖಾಸಗಿ ಕಾಲೇಜಿನ ಎಂಸಿಎ ವಿದ್ಯಾರ್ಥಿ, ಒಬ್ಬ ಟೆಕ್ಕಿ, ಒಂದಿಬ್ಬರು ಹುಬ್ಬಳ್ಳಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು.

rank ಗಳಿಸಿದ್ದ ವೈದ್ಯ:
ಇನ್ನು ಡಾ.ಜಾಫ‌ರ್‌ ಇಕ್ಬಾಲ್‌ ಸೊಲ್ಲಾಪುರ್‌ ಹುಬ್ಬಳ್ಳಿಯಲ್ಲಿ ದಂತವೈದ್ಯ. ಪತ್ನಿಯೂ ವೈದ್ಯೆ. 2 ತಿಂಗಳ ಹಿಂದೆ ಈತನ ಮದ್ವೆಯಾಗಿದೆ. CETನಲ್ಲಿ 104ನೇ rank ಪಡೆದಿರುವ ಪ್ರತಿಭಾವಂತ. ಮುಂದ ದಿಲ್ಲಿ AIIMS ಸಂಸ್ಥೆಯಲ್ಲಿ MS ಮಾಡಲು ಸಿದ್ಧತೆ ನಡೆಸಿದ್ದವ. ಇವರೆಲ್ಲ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕ ಹೊಂದಿದ್ದವರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರ ಬೇಟೆ ಹೇಗಾಯಿತು?

English summary
Bangalore CCB arrest Marriage Pratap terror suspects. English journalist Muti-Ur-Rehman arrested by CCB Bangalore on Aug 29 in Bangalore JC Nagar. Details of the arrested terror suspects...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X