ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮಿನಾರಾಯಣ ದಿಕ್ಕುತಪ್ಪಿಸಲು ಮೊಬೈಲ್ ನಾಟಕ

By Srinath
|
Google Oneindia Kannada News

call-data-to-destabilise-cbi-lakshminarayana
ಹೈದರಾಬಾದ್, ಜುಲೈ 14: ಗೆಳೆಯರಾದ ಜನಾರ್ದನ ರೆಡ್ಡಿ ಮತ್ತು ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಲಕ್ಷ್ಮಿನಾರಾಯಣರನ್ನು ಅಸ್ಥಿರಗೊಳಿಸಲು ಇತ್ತೀಚೆಗೆ ಅವರ ಮೊಬೈಲ್ ಕರೆ ವಿವರ ಬಹಿರಂಗಪಡಿಸಲಾಗಿದೆ ಎಂದು ಆಂಧ್ರ ಸಿಐಡಿ ಪೊಲೀಸರು ಹೈಕೋರ್ಟಿಗೆ ತಿಳಿಸಿದ್ದಾರೆ.

ದೂರಸಂಪರ್ಕ ಇಲಾಖೆಯ ನೌಕರರೊಬ್ಬರು ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ಅವರ ಮೊಬೈಲ್ ಕಾಲ್ ಡಿಟೇಲ್ಸ್ ಅನ್ನು ಉದ್ಯಮಿ ಆರ್ ಆರ್ ಕೃಷ್ಣರಾಜು ಎಂಬುವವರಿಗೆ ನೀಡಿದ್ದಾರೆ ಎಂಬುದನ್ನು ಸಿಐಡಿ ವಕೀಲ ಎನ್ ಶ್ರೀನಿವಾಸ ರೆಡ್ಡಿ ಅವರು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.

high profile ಕೇಸುಗಳ ತನಿಖೆಯ ದಿಕ್ಕುತಪ್ಪಿಸಲು ಮತ್ತು ಸಿಬಿಐ ಲಕ್ಷ್ಮಿನಾರಾಯಣರನ್ನು ಅನಗತ್ಯವಾಗಿ ಕಾನೂನು ಚೌಕಟ್ಟಿನಲ್ಲಿ ಸಿಲುಕಿಸಲು ಕಾನೂನುಬಾಹಿರವಾಗಿ ಈ ದೂರವಾಣಿ ದತ್ತಾಂಶ ಪ್ರಕರಣ ಹುಟ್ಟುಹಾಕಲಾಗಿದೆ. ಉದ್ದೇಶಪೂರ್ವಕವಾಗಿಯೇ ಕೃಷ್ಣರಾಜು ಈ ರೀತಿ ಕಾಲ್ ಡಿಟೇಲ್ಸ್ ಪಡೆದಿರುವುದರಿಂದ ಅವರಿಗೆ ಜಾಮೀನು ನೀಡಬಾರದು' ಎಂದು ವಕೀಲ ಶ್ರೀನಿವಾಸ ಅವರು ಪ್ರತಿವಾದ ಮಂಡಿಸಿದರು.

ಕಾಲ್ ಡಿಟೇಲ್ಸ್ ವೃತ್ತಾಂತ ಹೀಗಿದೆ: ಕಾಲ್ ಡಿಟೇಲ್ಸ್ ಪಡೆಯಲು ಪ್ರಧಾನ ಆರೋಪಿ, ಉದ್ಯಮಿ ಕೃಷ್ಣರಾಜು ತನ್ನ ಗೆಳೆಯ ಎಂವಿ ರಾಮರಾವ್ ನನ್ನು ಸಂಪರ್ಕಿಸಿದರು. ಆತ ಕುಷೈಗೂಡಾದಲ್ಲಿರುವ MIC Electronics ಸಂಸ್ಥೆಯ ಮಾಲೀಕ. ನಂತರ ಕೃಷ್ಣರಾಜು ಸೂಚನೆಯ ಮೇರೆಗೆ ರಾಮರಾವ್, ನಾಗಪುರದ ದೂರಸಂಪರ್ಕ ಇಲಾಖೆಯ (DOT) ಕೆ ಹನುಮಂತ ರಾವ್ ರನ್ನು ಸಂಪರ್ಕಿಸಿದರು.

ಹನುಮಂತ ರಾವ್ ಅಷ್ಟೂ ಕಾಲ್ ಡಿಟೇಲ್ಸ್ ಅನ್ನು ರಾಮರಾವ್ ಗೆ ಇಮೇಲ್ ಮಾಡಿದರು. ರಾಮರಾವ್ ಅದೆಲ್ಲವನ್ನೂ ನಲ್ಲಿ ಶೇಖರಿಸಿಕೊಂಡು ಕೃಷ್ಣರಾಜುಗೆ ಹಸ್ತಾಂತರಿಸಿದರು' ಎಂದು ಇಡೀ ವೃತ್ತಾಂತವನ್ನು ವಕೀಲ ಶ್ರೀನಿವಾಸ ಕೋರ್ಟಿನಲ್ಲಿ ಬಿಚ್ಚಿಟ್ಟರು.

ಇಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯಿದೆ: ರಾಮರಾವ್ ಮಾಲೀಕತ್ವದ MIC Electronics ಸಂಸ್ಥೆಯ ಉಪಾಧ್ಯಕ್ಷ ಕೆವಿ ರೆಡ್ಡಿ ಎಂಬಾತ ಮುಖೇಡ್ ಪೊಲೀಸರಿಗೆ ಒಂದು ದೂರು ಸಲ್ಲಿಸುತ್ತಾರೆ. 'ಸಿಬಿಐ ಜಂಟಿ ನಿರ್ದೇಶಕ ಮತ್ತು ಅವರ ಇಬ್ಬರು ಸಹೋದ್ಯೋಗಿಗಳು ನನಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ' ಎಂಬುದು ದೂರಿನ ತಾತ್ಪರ್ಯ.

ಕೆವಿ ರೆಡ್ಡಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆಗೆ ಇಳಿಯುತ್ತಾರೆ. ಆ ದೂರಿನ ಆಧಾರವಾಗಿಸಿಕೊಂಡು ಪೊಲೀಸರು ಅಧಿಕೃತವಾಗಿಯೇ ಸದರಿ ದೂರವಾಣಿಯ ಕಾಲ್ ಡೀಟೇಲ್ಸ್ ಪಡೆಯುತ್ತಾರೆ!

English summary
The Andhra CID has found that an employee (K. Hanumanth Rao) working with the telecom department at Nagpur provided the call data on CBI J D VV Lakshminarayana to industrialist R.R. Krishna Raju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X