ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಆಗಿ ಜಗದೀಶ್ ಶೆಟ್ಟರ್ ಮೊದಲ ಸುದ್ದಿಗೋಷ್ಠಿ

By Mahesh
|
Google Oneindia Kannada News

ಬೆಂಗಳೂರು, ಜು. 12: ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯದ ನೂತನ ಸರ್ಕಾರ ಗುರುವಾರ(ಜು.12) ಅಸ್ತಿತ್ವಕ್ಕೆ ಬಂದಿದೆ. ಪ್ರಪ್ರಥಮ ಸಚಿವ ಸಂಪುಟ ಸಭೆ ಮಧ್ಯಾಹ್ನ ಚುಟುಕಾಗಿ ಮುಕ್ತಾಯವಾಗಿದೆ.

ನಂತರ ಸಿಎಂ ಆಗಿ ಜಗದೀಶ್ ಶೆಟ್ಟರ್ ಅವರು ವಿಧಾನಸೌಧದಲ್ಲಿ ಪ್ರಥಮ ಸುದ್ದಿಗೋಷ್ಠಿ ನಡೆಸಿದರು. ಶೆಟ್ಟರ್ ಅವರ ಎಡ ಬಲದಲ್ಲಿ ನೂತನ ಡಿಸಿಎಂಗಳಾದ ಆರ್ ಅಶೋಕ್ ಹಾಗೂ ಕೆಎಸ್ ಈಶ್ವರಪ್ಪ ಉಪಸ್ಥಿತರಿದ್ದರು. ಸುದ್ದಿಗೋಷ್ಠಿಯ ಪ್ರಥಮಾರ್ಧದಲ್ಲಿ ತಮಗೆ ಸಿಎಂ ಸ್ಥಾನ ಸಿಕ್ಕಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ಮುಖ್ಯಾಂಶ ಇಂತಿದೆ:
* ಇದು ಸಮಸ್ತ ಜನತೆಯ ಆಶೀರ್ವಾದ, ಪಕ್ಷದ ಹಿರಿಯ ನಾಯಕರ ಆಶಯದಂತೆ ನನಗೆ ಈ ಸ್ಥಾನ ಲಭಿಸಿದೆ.
* ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಎಲ್ಲರ ಬೇಡಿಕೆಗಳಿಗೂ ಮನ್ನಣೆ ಸಿಗುತ್ತದೆ.
* ಕಳೆದ 3.5 ವರ್ಷದಲ್ಲಿ ಯಡಿಯೂರಪ್ಪ ಅವರು ಹಾಗೂ ಸದಾನಂದ ಗೌಡರು ಕೈಗೊಂಡ ಯೋಜನೆಗಳು ಮುಂದುವರಿಕೆ
* ಯಡಿಯೂರಪ್ಪ ಅವರ ರೈತ ಪರ ಯೋಜನೆಗಳು, ಸದಾನಂದ ಗೌಡರ ಸಕಾಲ ಯೋಜನೆ ಮುಂದುವರೆಸುತ್ತೇನೆ.
* ಯಡಿಯೂರಪ್ಪ ಅವರ ಮಾರ್ಗದರ್ಶನ ಹಾಗೂ ದೂರದೃಷ್ಟಿಕೋನ ನನಗೆ ಸಹಕಾರಿಯಾಗಲಿದೆ.
* ಸರ್ಕಾರದ ಕ್ಲೀನ್ ಇಮೇಜ್ ಮುಂದುವರೆಸಿಕೊಂಡು ಹೋಗುತ್ತೇನೆ.

* ಎಲ್ಲಕ್ಕಿಂತ ಮುಖ್ಯವಾಗಿ ವಿರೋಧ ಪಕ್ಷಗಳ ಸಹಕಾರ ಕೋರುತ್ತೇನೆ. ಸರ್ಕಾರದ ತಪ್ಪು ಒಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಾರೆ ಎಂದು ನಂಬಿದ್ದೇನೆ.

ಬರ ನಿವಾರಣೆಗೆ ಆದ್ಯತೆ: ಬರ ಪರಿಸ್ಥಿತಿಗೆ ಪರಿಹಾರ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನನ್ನ ಸರ್ಕಾರದ ಮೊದಲ ಆದ್ಯತೆ. ಸಮಗ್ರ ಕರ್ನಾಟಕದ ಅಭಿವೃದ್ಧಿ, ಪ್ರಾದೇಶಿಕ ಅಸಮತೋಲನ ನಿವಾರಣೆ, ಹಿಂದುಳಿತ ತಾಲೂಕುಗಳ ಅಭಿವೃದ್ಧಿ, ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಅನುದಾನ ಮಂಜೂರು ನಮ್ಮ ಮುಖ್ಯ ಉದ್ದೇಶ.

* ಜಾಗತಿಕವಾಗಿ ಕರ್ನಾಟಕ ಪ್ರಗತಿಪಥದಲ್ಲಿ 79ನೇ ಸ್ಥಾನದಲ್ಲಿದೆ. ಬೆಂಗಳೂರು 16ನೇ ಸ್ಥಾನದಲ್ಲಿದೆ.
* ನಮ್ಮ ಸಾರಿಗೆ ವ್ಯವಸ್ಥೆ, ಇ ಆಡಳಿತ ದೇಶದಲ್ಲೇ ಅತ್ಯುತ್ತಮವಾಗಿದೆ. ಸಾರಿಗೆ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸತತವಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ.
* ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ(ಜಿಮ್) ದಿಂದಾಗಿ ಅನೇಕ ಉದ್ಯೋಗವಕಾಶಗಳು, ಅಭಿವೃದ್ಧಿಗಳು ಆಗುತ್ತಿದೆ.
* ಸಶಕ್ತ, ಪ್ರಮಾಣಿಕ, ಪಾರದರ್ಶಕ ಸರ್ಕಾರ ನೀಡುವುದು ನಮ್ಮ ಉದ್ದೇಶ. ವಿರೋಧ ಪಕ್ಷದ ಸಹಕಾರವೂ ಇದರಲ್ಲಿ ಮುಖ್ಯವಾಗಿದ್ದು, ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಸಿ ನಂ.1 ಪಟ್ಟಕ್ಕೇರಿಸುವುದು ನನ್ನ ಗುರಿ ಎಂದರು.

* ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ, ಬೀದರ್, ಕೊಪ್ಪಳ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಏಕೆ? ಎಂದು ಪತ್ರಕರ್ತರು ಪ್ರಶ್ನಿಸಿದರು.
ಸಂಪುಟದಲ್ಲಿ 33 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ. ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲಾಗುವುದು ಎಂದು ಜಗದೀಶ್ ಶೆಟ್ಟರು ಹೇಳಿದರು.

* ಪಬ್ಲಿಕ್ ನಲ್ಲಿ ಈಗಾಗಲೇ ನಿಮ್ಮ ಪಕ್ಷದ ಇಮೇಜ್ ಡ್ಯಾಮೇಜ್ ಆಗಿದೆ. ನೀವು ಕ್ಲೀನ್ ಇಮೇಜ್ ಮುಂದುವರೆಯಲಿದೆ ಎನ್ನುತ್ತಿದ್ದೀರಾ ಹೇಗೆ?
ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಹಾಗೂ ಇಮೇಜ್ ಹಾಳಾಗಿಲ್ಲ. ಪಕ್ಷದ ಇಮೇಜ್ ಬೆಳೆಸುತ್ತೇವೆ. ಎಂದು ಸಿಎಂ ಶೆಟ್ಟರ್ ಹೇಳಿದರು.

* ನಿಮ್ಮ ಮೇಲೆ ಭೂ ಹಗರಣದ ಆರೋಪ ಕೇಳಿ ಬಂದಿದೆ ಅದಕ್ಕೆ ಏನಂತೀರಾ?
It is a false allegation and I will battle it out will take legal action ಎಂದು ಹೇಳಿ ಸುದ್ದಿಗೋಷ್ಠಿಗೆ ಮುಕ್ತಾಯ ಹಾಡಿದರು.

English summary
Jagadish Shettar First Pressmet as CM of Kanataka held today(jul.12) at Vidhanasoudha. Shettar assured to clean image and corruption free government. first priority will be given to drought hit areas of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X