ಚಾಂಪಿಯನ್ ಸ್ಪೇನ್ ಗೆಲುವಿಗೆ ಅಡ್ಡ ನಿಂತ ಇಟಲಿ

Posted by:
 
Share this on your social network:
   Facebook Twitter Google+ Comments Mail

Spain beat Italy
ಗಡ್ನಸ್ಕ್, ಜೂ.11: ಯುರೋ ಕಪ್ ನ ಸಿ ಗುಂಪಿನ ಇಟಲಿ ಹಾಗೂ ಸ್ಪೇನ್ ತಂಡಗಳ ಹಣಾಹಣಿ ಈವರೆವಿಗಿನ ಅತ್ಯಂತ ರೋಚಕ ಪಂದ್ಯ ಎಂದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಭಾನುವಾರ ನಡೆದ ಈ ಹೋರಾಟಕಾರಿ ಪಂದ್ಯದಲ್ಲಿ ಇಟಲಿ ಮತ್ತು ಹಾಲಿ ಚಾಂಪಿಯನ್ ಸ್ಪೇನ್ ಸಮಬಲ ಸಾಧಿಸಿ 1-1 ಡ್ರಾಗೆ ತೃಪ್ತಿಪಟ್ಟರು.

ಬದಲಿ ಆಟಗಾರ ಅಂಟನಿಯೊ ಡಿ ನಥಾಲೆ ಮೈದಾನಕ್ಕೆ ಇಳಿದ 5 ನಿಮಿಷದಲ್ಲೇ (60ನೇ ನಿಮಿಷ) ಮೊದಲ ಗೋಲು ಬಾರಿಸಿ ಇಟಲಿಗೆ ಮುನ್ನಡೆಯನ್ನು ಒದಗಿಸಿಕೊಟ್ಟರು. ಆದರೆ, ಇದರ ನಾಲ್ಕು ನಿಮಿಷಗಳ ಬಳಿಕ ಸೆಸ್ಕ್ ಫೆಬ್ರೆಗಾಸ್ ಬಾರಿಸಿದ ಗೋಲಿನಿಂದಾಗಿ ಸ್ಪೇನ್ ಸಮಬಲ ಸಾಧಿಸಿತು.

ನಿರೀಕ್ಷೆಯಂತೆಯೇ ಸ್ಪೇನ್ ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿ ಇಟಲಿಯನ್ನು ಕಾಡಿತು. ಎರಡೂ ತಂಡಗಳು ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಿ, ಕೊನೆಗೆ ಡ್ರಾಗೆ ತೃಪ್ತಿಪಡಬೇಕಾಯಿತು.

ಇಟಲಿ ಪರ ಆಂಡ್ರೆಯಾ ಪರ್ಲೊ ಪಂದ್ಯದ ಮೊದಲಾರ್ಧದಲ್ಲಿ ಮಿಂಚಿದರೆ, ದ್ವಿತೀಯಾರ್ಧದಲ್ಲಿ ಡಿ ನಥಾಲೆ ಉತ್ತಮ ಆಟವಾಡಿದರು. ಆದರೆ, ಪಂದ್ಯದುದ್ದಕ್ಕೂ ಮಿಂಚಿದ್ದು ಮಾತ್ರ ಅಂಟಾನಿಯೋ ಕಸ್ಸಾನೋ ಹಾಗೂ ಗೋಲ್ ಕೀಪರ್ ಬುಫನ್. ಬಹು ನಿರೀಕ್ಷೆ ಹುಟ್ಟಿಸಿದ್ದ ಮಾರಿಯೋ ಬಲಾಟೆಲ್ಲಿ ಮಾತ್ರ ಪಂದ್ಯದ ವಿಲನ್ ಎನಿಸಿದರು.

ಸ್ಪೇನ್ ಗೋಲ್ ಕೀಪರ್, ನಾಯಕ ಐಕರ್ ಕ್ಯಾಸಿಲಸ್ ಎದುರಲ್ಲಿ ಒನ್ ಆನ್ ಒನ್ ಅವಕಾಶ ಸಿಕ್ಕರೂ ಗೋಲು ಗಳಿಸುವಲ್ಲಿ ವಿಫಲರಾದ ಬಲಾಟೆಲ್ಲಿಯನ್ನು ಕೋಚ್ ಸಿಸರ್ ಪ್ರಾಂಡೆಲ್ಲಿ ಬದಲಿಸಿದ್ದು ಉಪಯೋಗಕ್ಕೆ ಬಂದಿತು.

ಸ್ಪೇನ್ 1 - 1 ಇಟಲಿ
9(9) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 6(4)
7 ಕಾರ್ನರ್ಸ್ 2
12 ಫೌಲ್ಸ್ 19
2 ಆಫ್ ಸೈಡ್ 3
3 ಹಳದಿ ಕಾರ್ಡ್ 4
0 ಕೆಂಪು ಕಾರ್ಡ್ 0

ಡೇವಿಡ್ ವಿಲ್ಲಾ, ಪುಯೋಲ್ ಅನುಪಸ್ಥಿತಿಯಲ್ಲಿ ಸ್ಪೇನ್ ಪರ ಸೆಕ್ಸ್ ಫ್ಯಾಬ್ರಿಗಸ್ ಉತ್ತಮ ಆಟ ಪ್ರದರ್ಶಿಸಿದರು. ಕ್ಸಾವಿ, ಆಲ್ಬಾ, ಅಲಾನ್ಸೋ. ಸಿಲ್ವಾ ಉತ್ತಮ ಶಿಸ್ತುಬದ್ಧ ಆಟ ಪ್ರದರ್ಶಿಸಿದರೂ ಪಂದ್ಯದಲ್ಲಿ ಮಿಂಚಿದ್ದು ಆಂಡ್ರೆಸ್ ಇನಿಯಾಸ್ಟ ಹಾಗೂ ನಾಯಕ ಕ್ಯಾಸಿಲಸ್.

ಕೊನೆ ಅವಧಿಯಲ್ಲಿ ಮೈದಾನಕ್ಕೆ ಇಳಿದ ಫರ್ನಾಂಡೋ ಟೋರೆಸ್ ಹೆಚ್ಚಿನ ಕಮಾಲ್ ಮಾಡಲಿಲ್ಲ. ಚಾಂಪಿಯನ್ಸ್ ಲೀಗ್ ಗೆದ್ದ ಚೆಲ್ಸಿ ತಂಡದ ಸದಸ್ಯನಾಗಿದ್ದ ಟೋರೆಸ್ ಕಳೆದ ಒಂದು ವರ್ಷದಿಂದ ಕಳಪೆ ಫಾರ್ಮ್ ಮುಂದುವರೆಸಿಕೊಂಡೇ ಬಂದಿದ್ದಾರೆ.

ಕೊನೆಯ 20 ನಿಮಿಷಗಳಿರುವಾಗ ಉಭಯ ತಂಡಗಳು ಆಟದ ವೇಗವನ್ನು ಹೆಚ್ಚಿಸಿಕೊಂಡು ಗೋಲಿಗಾಗಿ ಪ್ರಬಲ ಹೋರಾಟ ನಡೆಸಿದವು. ಇದರಿಂದ ಎರಡೂ ತಂಡದ ಆಟಗಾರರು ಹಳದಿ ಕಾರ್ಡ್ ಪಡೆಯುವಲ್ಲಿ ಪೈಪೋಟಿ ನಡೆಸಿದಂತೆ ಕಂಡು ಬಂದಿತು. ಒಟ್ಟಿನಲ್ಲಿ ರೋಚಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು ನಿರಾಶೆಯಾದರೂ, ಯುರೋ ಕಪ್ ಗೆ ಕಿಕ್ ಕೊಟ್ಟ ಪಂದ್ಯ ಎನ್ನಬಹುದು.

ಸೋಮವಾರ ಇನ್ನೊಂದು ರೋಚಕ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇಂಗ್ಲೆಂಡ್ ತಂಡವನ್ನು ಫ್ರಾನ್ಸ್ ತಂಡ ಎದುರಿಸಲಿದೆ.

English summary
Reigning champions Spain were denied a winning start against a tricky Italian side settling for a 1-1 draw in their Group C opening match at Arena Gdansk in Gdansk.
Please Wait while comments are loading...
Your Fashion Voice
Advertisement
Content will resume after advertisement