ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಣ್ಣದ ಪೇಪರ್ರೂ ಕೀಳ್ತಾರೆ, ದುಡ್ಡೂ ಕೀಳ್ತಾರೆ

By Shami
|
Google Oneindia Kannada News

Removal of tinted paper on your Car is not free
ಬೆಂಗಳೂರು, ಮೇ. 14 : ಟಿಂಟೆಡ್ ಗ್ಲಾಸ್ ತೆಗೆಯುವ ಉಚಿತ ಕ್ಯಾಂಪಿನಲ್ಲೂ ಟ್ರಾಫಿಕ್ ಪೊಲೀಸರು ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ. ಸಂಪೂರ್ಣವಾಗಿ ಉಚಿತವೆಂದು ನಂಬಿ ಬಂದ ಕಾರು ಮಾಲಿಕ/ಚಾಲಕರಿಂದ 200-300 ರುಪಾಯಿ ಪೀಕಿಸುತ್ತಿದ್ದಾರೆ ಎಂದು ಬೆಂಗಳೂರು ನಾಗರಿಕರು ನಮ್ಮ ವೆಬ್ ಸೈಟಿಗೆ ಕರೆಮಾಡಿ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ವಾಹನದ ಗಾಜುಗಳ ಮೇಲೆ ಲಗ್ಗತ್ತಿಸಿರುವ ಬೆಳಕು ನಿರ್ಬಂಧಕ ಫಿಲ್ಮ್ ಗಳನ್ನು ತೆಗೆಯಲು ಅನುಕೂಲವಾಗುವಂತೆ ಬೆಂಗಳೂರಿನ ಹತ್ತುಕಡೆ ಇಂತಹ ಉಚಿತ ಕೇಂದ್ರಗಳನ್ನು ತೆರೆಯಲಾಗಿದೆ. ಮಾಧ್ಯಮದ ಮುಂದೆ ಉಚಿತವೆಂದು ಪೋಸ್ ನೀಡುವ ಪೊಲೀಸರು ಪ್ರತಿ ಕಾರು ಮಾಲೀಕರಿಂದ ದುಡ್ಡು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾರು ಮಾಲಿಕರು ಸೋಮವಾರ ಮಧ್ಯಾನ್ಹ ಆರೋಪಿಸಿದರು. ಇದು ಫ್ರೇಜರ್ ಟೌನ್, ಮಾಧವನ್ ಪಾರ್ಕ್ ಮುಂತಾದೆಡೆ ಅವ್ಯಾಹತವಾಗಿ ಸಾಗಿದೆ.

ಮೇ 10ರಿಂದ ಆರಂಭವಾದ ಈ ಕೇಂದ್ರಗಳಿಗೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಉಚಿತವೆಂದು ವಾದಿಸಿದರೆ ಬೇಕಾಬಿಟ್ಟಿಯಾಗಿ ಟಿಂಟೆಡ್ ಫಿಲ್ಮ್ ಕಿತ್ತೆಸೆಯುತ್ತಾರೆ ಎಂದು ಓದುಗರೊಬ್ಬರು ಅಲವತ್ತುಕೊಂಡಿದ್ದಾರೆ. ಈ ತಿಂಗಳ 19ನೇ ದಿನಾಂಕದವರೆಗೆ ಇರುವ ಈ ಕ್ಯಾಂಪಿನಲ್ಲಿ ಟ್ರಾಫಿಕ್ ಪೊಲೀಸರು ಲಕ್ಷಗಟ್ಟಲೆ ದುಡ್ಡು ಬಾಚಿಕೊಳ್ಳುವುದು ಗ್ಯಾರಂಟಿ.

ಪೊಲೀಸರ ಸಹವಾಸವೇ ಸಾಕು ಎಂದು ಖಾಸಗಿ ವೆಂಡರುಗಳ ಬಳಿ ಸಾಗಿದರೆ ಅಲ್ಲೂ ಗೋಲ್ ಮಾಲ್ ನಡೆಯುತ್ತಿದೆ. ಪ್ರತಿಕಾರಿಗೆ 500 ರು.ನಿಂದ 800 ರು.ವರೆಗೆ ಪಡೆಯುತ್ತಾರೆ. ಇವೆರಡೂ ಆಯ್ಕೆಯಿಂದ ನೊಂದ ಕೆಲವು ವಾಹನ ಮಾಲಿಕರು ಸ್ವತಃ ತಾವೇ ಟಿಂಟೆಡ್ ಗ್ಲಾಸ್ ರಿಮೂವ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. [ಟಿಂಟೆಡ್ ಫಿಲ್ಮ್ ಸುಲಿಯುವುದು ಹೇಗೆ?]

English summary
Even though removal of tinted papers on cars is free, it carries a price tag, only in Bangalore. Public complaints pouring to oneindia Kannada office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X