ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಕಾಲೇಜಿನಲ್ಲಿ ಬುರ್ಖಾ ಬ್ಯಾನ್ ಫರ್ಮಾನ್

By Prasad
|
Google Oneindia Kannada News

Mangalore college bans burqa
ಮಂಗಳೂರು, ಏ. 27 : ಸೇಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಬುರ್ಖಾ ಹಾಕಿಕೊಂಡು ಬರುವ ವಿದ್ಯಾರ್ಥಿಯನಿಯರಿಗೆ ಪಾಠ ಕೇಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಕಾಲೇಜಿನ ಮ್ಯಾನೇಜ್ಮೆಂಟ್ ಫರ್ಮಾನು ಹೊರಡಿಸಿದೆ.

ಇಷ್ಟು ಮಾತ್ರವಲ್ಲ, ಈ ಬುರ್ಖಾ ನಿಷೇಧದ ಸಂಗತಿಯನ್ನು ಕಾಲೇಜಿಗೆ ದಾಖಲಾಗುವ ಮುನ್ನ, ಅರ್ಜಿಯೊಂದಿಗೆ ನೀಡುವ ಕಾಲೇಜು ಮಾಹಿತಿ ಪುಸ್ತಕದಲ್ಲಿಯೂ ಪ್ರಸ್ತಾಪಿಸುವುದಾಗಿ ಹೇಳಿದೆ. ಬುರ್ಖಾ ನಿಷೇಧ ವಿರೋಧಿಸುವವರಿಗೆ, ಕಾಲೇಜಿನಲ್ಲಿ ಪಾಠ ಕೇಳುವುದು ಹೋಗಲಿ, ಇನ್ನು ಮುಂದೆ ದಾಖಲಾತಿಯೂ ಸಿಗುವುದಿಲ್ಲ.

ಇದು ಅಲ್ಪಸಂಖ್ಯಾತರಲ್ಲಿ ಈಗಾಗಲೆ ರೊಚ್ಚಿನ ಕಿಡಿ ಹೊತ್ತಿಸಿದೆ. ರಾಜ್ಯದಲ್ಲಿ ಅನೇಕ ಕಾಲೇಜುಗಳಲ್ಲಿ ಮುಸ್ಲಿಂ ಯುವತಿಯರಿಗೆ ಬುರ್ಖಾ ಹಾಕಿಕೊಂಡು ಬರಲು ಅನುಮತಿ ನೀಡಿವೆ. ಆದರೆ, ಮಂಗಳೂರಿನಲ್ಲಿ ಈ ನಿಷೇಧವೇಕೆ ಎಂದು ಕೆಲ ಸಂಘಟನೆಗಳು ಪ್ರಶ್ನಿಸುತ್ತಿವೆ. ಇದರ ಬಗ್ಗೆ ವಿವರ ಕೋರಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ರಾಜ್ಯ ಸರಕಾರದ ವಿವರವನ್ನೂ ಕೋರಿತ್ತು.

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಡ್ರೆಸ್ ಕೋಡ್ ವಿಧಿಸುವುದು ಕರ್ನಾಟಕದಲ್ಲಿ ಹೊಸ ಸಂಗತಿಯಲ್ಲ. ಕೆಲ ವರ್ಷಗಳ ಹಿಂದೆ ಕ್ರೈಸ್ಟ್ ಮತ್ತಿತರ ಕಾಲೇಜುಗಳು ನಮ್ಮ ಸಂಸ್ಕೃತಿಗೆ ಅವಮಾನ ಮಾಡುವ ದಿರಿಸನ್ನು ಧರಿಸಿ ಬರುವುದು ಬೇಡ ಎಂದು ಹೇಳಿದ್ದವು. ಕ್ರೈಸ್ಟ್ ಕಾಲೇಜಿನಲ್ಲಿ ಜೀನ್ಸ್ ಧರಿಸುವುದನ್ನು ಕೂಡ ನಿಷೇಧಿಸಲಾಗಿತ್ತು. ಇದರ ವಿರುದ್ಧ ಮಹಿಳಾ ಸಂಘಟನೆಗಳು ಅಲ್ಲೋಲಕಲ್ಲೋಲ ಎಬ್ಬಿಸಿದ್ದವು.

ವಿದ್ಯಾರ್ಥಿನಿಯರು ಧರಿಸುವ ಬಟ್ಟೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿನ ಕೆಲ ಕಾಲೇಜುಗಳು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದ್ದರೂ, ಕೆಲ 'ಲಿಬರಲ್' ಕಾಲೇಜುಗಳು ಪ್ರಚೋದನಾತ್ಮಕ ಬಟ್ಟೆ ಧರಿಸಿ ಬರಲು ಅವಕಾಶ ನೀಡುತ್ತಿವೆ. ಬುರ್ಖಾ ನಿಷೇಧಿಸುವ ಬದಲು ಇಂಥ ಅಸಹ್ಯಕರ ಬಟ್ಟೆ ಧರಿಸಿ ಬರುವುದನ್ನು ಈ ಕಾಲೇಜುಗಳು ಯಾಕೆ ನಿಷೇಧಿಸಬಾರದು?

English summary
A Mangalore based pre-university college St. Aloysius college has banned wearing burqa by any student inside the class. It is also contemplating putting this on prospectus also. But, many colleges in Karnataka, especially in Bangalore are allowing burqa in college. Should all colleges ban it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X