ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೊ...

Posted by:
Give your rating:

ರೋಮ್, ಏ.11: 'ಕರ್ನಾಟಕದಲ್ಲಿ ಬರಗಾಲ ತಾಂಡವಾಡುತ್ತಿರುವುದಾಗ ಜಿಮ್ ಗೆ ಹೋಗುವುದು ತರವಲ್ಲ' ಎಂದು ಹಿರಿಯರು ನಮ್ಮ ನಾಡಿನ ದೊರೆ ಡಿವಿ ಸದಾನಂದ ಗೌಡರಿಗೆ ಕಿವಿ ಮಾತು ಹೇಳಿದ್ದಾರೆ. ಈ ಸಂದರ್ಭದಲ್ಲಿ 'ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೊ' ಎಂಬ ಸ್ವಾರಸ್ಯ ಕಥೆಯನ್ನು ಇಲ್ಲಿ ಹೇಳೋಣ ಅಂತ...

ಎಲ್ಲಿಯ ಕರ್ನಾಟಕ, ಎಲ್ಲಿಯ ರೋಮ್? ಎಲ್ಲಿಯ ಸದಾನಂದ ಗೌಡ, ಎಲ್ಲಿಯ ನೀರೊ!? ಆದರೂ... ನೀರೊ ಕುರಿತಾದ ಕುತೂಹಲಕಾರಿ ಇತಿಹಾಸ. ಅದು ಕ್ರಿಸ್ತ ಶಕ 64ರ ಕಾಲಘಟ್ಟ. ಇದೋ 2010ರ ಬರಗೆಟ್ಟ ಕಾಲಘಟ್ಟ.

ರೋಮ್ ಹೊತ್ತಿ ಉರಿಯುತ್ತಿದ್ದಾಗ ರೋಮನ್ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದರು ಎಂದು ಮಂದಿ ಅಂದಿನಿಂದಲೂ ಕೊರೆಯುತ್ತಿದ್ದಾರೆ. ಆದರೆ ಇದೇ ವಾಸ್ತವವಾ? ಎಂಬುದರ ಬಗ್ಗೆ ಅಂದಿನಿಂದಲೂ ಚರ್ಚೆಗಳಾಗಿವೆ. ಅಂದು ಏನಾಯಿತೆಂದರೆ ಮುಕ್ಕಾಲು ಭಾಗ ರೋಮ್ ಪಟ್ಟಣಕ್ಕೆ ಬೆಂಕಿಬಿದ್ದಿತ್ತು. Circus Maximus ಎಂಬ ಸ್ಟೇಡಿಯಂ ಬಳಿ ಕಾಣಿಸಿಕೊಂಡ ಈ ಬೆಂಕಿ ಆರು ದಿನಗಳ ಕಾಲ ತನ್ನ ಕೆನ್ನಾಲಗೆ ಚಾಚಿತ್ತು.

ಆರು ದಿನಗಳ ನಂತರ ಒಮ್ಮೆ ಬೆಂಕಿಯನ್ನು ನಂದಿಸಲಾಯಿತು. ಆದರೆ ಇನ್ನೂ ಮೂರು ದಿನಗಳ ಕಾಲ ತನ್ನ ಸಂಗೀತಕ್ಕೆ ತಕ್ಕಂತೆ ನರ್ತಿಸುವಂತೆ ನೀರೊ ಕಿಡಿ ಹೊತ್ತಿಸಿದ. ಬಳಿಕ, ಬೆಂಕಿಬಿದ್ದ ಜಾಗದಲ್ಲಿ ಸುಮಾರು 200 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡ ನೀರೊ ಭವ್ಯವಾದ ಸಂಗ್ರಹಾಲಯ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಇಲ್ಲಿ ಇನ್ನೂ ಒಂದಷ್ಟು ಉಪಕಥೆಗಳಿವೆ:

ಈ ಬೆಂಕಿ ಅವಘಡಕ್ಕೆ ಜನ ಒಬ್ಬರಿಗೊಬ್ಬರನ್ನು ದೂಷಿಸತೊಡಗಿದರು. ಅನೇಕ ಗಾಳಿಸುದ್ದಿಗಳು ಈ ಬೆಂಕಿಗೆ ಮತ್ತಷ್ಟು ಗಾಳಿ ಹಾಕತೊಡಗಿದವು. ಅತ್ತ ರೋಮ್ ಪಟ್ಟಣ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೊ ಪಿಟೀಲು ಕೊಯ್ಯುತ್ತಿದ್ದ. ಏಕೆಂದರೆ ಆತನಿಗೆ ಸಂಗೀತವೆಂದರೆ ಅಷ್ಟು ಇಷ್ಟವಾಗಿತ್ತು. ಆತ ಜನರ ರಕ್ಷಣೆಗೆ ಧಾವಿಸಲಿಲ್ಲ ಎಂಬುದು ಮುಖ್ಯವಾದ ಆಪಾದನೆ. ಆದರೆ ಇದು ಆಪವಾದವಾ!? ಏಕೆಂದರೆ ಆ ಕಾಲಕ್ಕೆ ಪಿಟೀಲನ್ನು ಕಂಡುಹಿಡಿದೇ ಇರಲಿಲ್ಲ. ಆ ಘಟನೆ ನಡೆದ 1,500 ವರ್ಷಗಳ ಬಳಿಕ ಪಿಟೀಲನ್ನು (fiddle/violin) ಕಂಡುಹಿಡಿಯಲಾಯಿತು ಎನ್ನುತ್ತದೆ ಇತಿಹಾಸ.

ಇಲ್ಲಿ ಗಮನಿಸಬಹುದಾದ ಅಂಶವೆಂದರೆ ರಾಜ್ಯಭಾರ ನಡೆಸುವ ದೊರೆಗಳ ನಿಷ್ಪ್ರಯೋಜಕತನ, ನಿಷ್ಕಾಳಜಿಯನ್ನು ಎತ್ತಿ ತೋರಿಸುವುದಕ್ಕಾಗಿ ಇಂತಹ ಮಾತು ಚಾಲ್ತಿಗೆ ಬಂತು ಎಂಬ ವಾದವೂ ಇದೆ. ಹಾಗಾದರೆ ಈಗಿನ ಕಾಲದಲ್ಲಿ ನಮ್ಮನ್ನಾಳುವ ದೊರೆಗಳು ಇಂತಹ ನೀರೋಗಳೇ ಎಂಬುದರಲ್ಲಿ ಎರಡು ಮಾತಿಲ್ಲ.

English summary
When Rome was burning what did Nero do? Tradition and some historical accounts contend that Roman Emperor Nero fiddled while Rome burned in AD 64. Some historians say that the whole thing was always meant to be a metaphor for ineffectual leadership. Must be true in the case of present Neros...
Please Wait while comments are loading...
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive