Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಗೌಡರೇ ಜಿಮ್ ಗೆ ಹೋಗಬೇಡಿಪ್ಪಾ: ಯಡಿಯೂರಪ್ಪ

Posted by:
Updated: Monday, October 22, 2012, 17:18 [IST]
 

ಗೌಡರೇ ಜಿಮ್ ಗೆ ಹೋಗಬೇಡಿಪ್ಪಾ: ಯಡಿಯೂರಪ್ಪ

ಗುಲ್ಬರ್ಗ, ಏ.11: 'ನಾಡಿನಲ್ಲಿ ಬರಗಾಲ ತಾಂಡವಾಡುತ್ತಿರುವುದಾಗ ನೀವು ಜಿಮ್ ಗಾಗಿ ವಿದೇಶ ಪ್ರವಾಸಕ್ಕೆ ಹೋಗುವುದು ತರವಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಕಿವಿ ಮಾತು ಹೇಳಿದ್ದಾರೆ.

ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸದಲ್ಲಿರುವ ಮಾಜಿ ಸಿಎಂ ಬುಧವಾರ ಬೆಳಗ್ಗೆ ಹಾಲಿ ಸಿಎಂಗೆ ಹೀಗೆ ವಿನಂತಿ ಮಾಡಿದ್ದಾರೆ: ರಾಜ್ಯದ ಮುಕ್ಕಾಲು ಭಾಗ ಬರದಿಂದ ತತ್ತರಿಸುತ್ತಿದೆ. ಇಂತಹ ಸಂಕಟದ ಸ್ಥಿತಿಯಲ್ಲಿ ಉದ್ಯಮಿಗಳಿಂದ ಬಂಡವಾಳ ಆಕರ್ಷಿಸಲು ವಿದೇಶ ಪ್ರವಾಸ ಕೈಗೊಳ್ಳುವುದು ವಿಪರ್ಯಾಸವಾದೀತು. ಆದ್ದರಿಂದ ವಿದೇಶಕ್ಕೆ ಹೋಗುವ ಬಗ್ಗೆ ಮತ್ತೊಮ್ಮೆ ಆಲೋಚಿಸಿ' ಎಂದಿದ್ದಾರೆ.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಅಧಿಕಾರಿಗಳ ದಂಡಿನೊಂದಿಗೆ (Global Investors Meet- GIM) ಇದೇ 15 ರ ರಾತ್ರಿ ಬೆಂಗಳೂರಿನಿಂದ ಹೊರಡಲು ಸಿದ್ಧತೆ ನಡೆಸಿದ್ದಾರೆ. ಸಿಂಗಾಪುರ ಮತ್ತು ಜಪಾನ್ ಸುತ್ತಾಡಿ, ಅಲ್ಲಿನ ಬಂಡವಾಳಶಾಹಿಗಳನ್ನು ಭೇಟಿ ಮಾಡಿ ಏ. 21ಕ್ಕೆ ವಾಪಸಾಗಲಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ಜನರಿಗೆ ಅಭಯ ನೀಡಬೇಕಾಗಿರುವುದು ಯಾವುದೋ ದೇವರು ದಿಂಡಿರು ಅಲ್ಲ. ಬದಲಿಗೆ ಕಂದಾಯ ಸಚಿವರು. ಆದರೆ ಖುದ್ದು ಸದಾನಂದ ಗೌಡರೇ ಆ ಖಾತೆಯ ಹೊಣೆಹೊತ್ತಿರುವಾಗ ಇದ್ಯಾತರದ್ದು ವಿದೇಶ ಪ್ರವಾಸ ಎಂದು ಮಂದಿ ಕೇಳುವಂತಾಗಿದೆ.

ರಾಜ್ಯದ ಜನತೆಯನ್ನು ಕಂಗಾಲು ಮಾಡಿರುವ ಬರಗಾಲವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಅಧ್ಯಯನ ಮಾಡಲು ಗೌಡರು ವಿದೇಶಕ್ಕೆ ಹೊರಟಿರಬಹುದು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಹ ವ್ಯಂಗ್ಯವಾಡಿದ್ದಾರೆ. ಇನ್ನು, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರೂ ಕಿಡಿಕಾರಿದ್ದಾರೆ - ಕೇಂದ್ರಕ್ಕೆ ಬರ ವರದಿ ಸಲ್ಲಿಸಿ, ಹೆಚ್ಚಿನ ಅನುದಾನ ತಂದು ಜನರಿಗೆ ಅನುಕೂಲ ಮಾಡಿಕೊಡಬೇಕಾದ ಮುಖ್ಯಮಂತ್ರಿಗಳು ಬಂಡವಾಳ ಆಕರ್ಷಣೆ ನೆಪದಲ್ಲಿ ವಿದೇಶಕ್ಕೆ ಹೊರಟಿರುವುದು ನಾಡಿನ ದುರಂತ ಎಂದಿದ್ದಾರೆ.
when the rome is burning ... ನೀವೆನನ್ನುತ್ತೀರಿ!?

Story first published:  Wednesday, April 11, 2012, 9:26 [IST]
English summary
Ex CM Yeddyurappa exonerates CM DV Sadananda gowda to stop going to GIM to attract investment to the state while Karnataka is reeling under severe drought. when the rome is burning ...
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like