ಬ್ರೇಕಿಂಗ್ : ಹಲ್ಲೆಗೊಳಗಾದ ಹಸುಳೆ ಅಫ್ರಿನ್ ಇನ್ನಿಲ್ಲ

Posted by:
 
Share this on your social network:
   Facebook Twitter Google+ Comments Mail

Battered baby Afreen is no more
ಬೆಂಗಳೂರು, ಏ.11: ಅಪ್ಪನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಮೂರು ತಿಂಗಳ ಹಸುಳೆ ಅಫ್ರೀನ್ ಬುಧವಾರ ಬೆಳಗ್ಗೆ 10.45ರ ಸುಮಾರಿಗೆ ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿದ್ದಾಳೆ. ಚೇತರಿಸಿಕೊಳ್ಳುವ ಯಾವ ಲಕ್ಷಣಗಳು ಕಾಣಿಸದೆ ದುರಂತ ಸಾವನ್ನಪ್ಪಿದ್ದಾಳೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಮೈತುಂಬೆಲ್ಲ ಸಿಗರೇಟಿನಿಂದ ಸುಟ್ಟ ಮತ್ತು ಕಚ್ಚಿದ ಗಾಯಗಳಾಗಿ, ಮುಖಕ್ಕೆ ಗುದ್ದಿದ್ದರಿಂದ ಕತ್ತಿನ ಮೂಳೆ ಸರಿದ ಅಫ್ರೀನ್ ಚಿಂತಾಜನಕ ಸ್ಥಿತಿಯಲ್ಲಿ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಾಗಿದ್ದಳು. ತೀವ್ರ ನಿಗಾ ಘಟಕದಲ್ಲಿರುವ ಮಗುವಿಗೆ ಕೃತಕ ಉಸಿರಾಟದ ಸಾಧನವನ್ನು ಅಳವಡಿಸಲಾಗಿದ್ದು, ರಕ್ತ ಪೂರೈಕೆ ಮಾಡಲಾಗಿತ್ತು.

ಬಂಧಿತನಾಗಿರುವ ಅಫ್ರೀನ್‌ಳ ಅಪ್ಪ ಉಮರ್ ಫಾರೂಕ್, ಹುಟ್ಟಿದ ಮಗು ಗಂಡಾಗದಿದ್ದರಿಂದ ಕೊಲ್ಲಲು ಯತ್ನಿಸಿದೆ ಎಂದು ಪೊಲೀಸರೆದಿರು ಒಪ್ಪಿಕೊಂಡಿದ್ದಾನೆ. ಇತ್ತ ಮಗು ಕಳೆದುಕೊಂಡ ತಾಯಿ ರೇಶ್ಮಾ ಬಾನು ರೋದನ ಮುಗಿಲು ಮುಟ್ಟಿದೆ. ಬೇಬಿ ಫಲಕ್ ದುರಂತ ಸಾವಿನ ರೀತಿಯೇ ಬೇಬಿ ಅಫ್ರಿನ್ ಅಂತ್ಯಕಂಡಿರುವುದು ಪುರುಷ ಪ್ರಧಾನ ಸಮಾಜಕ್ಕೆ ಧಿಕ್ಕಾರ ಎಸೆದಿದೆ.

English summary
Three-month-old baby Afreen died in Vani Vilas Hospital, Bangalore on Wednesday(Apr.11) following a cardiac arrest. Baby Afreen whose story is akin to Baby Falak's, was beaten and abused by her father because he wanted a boy.
Please Wait while comments are loading...
Your Fashion Voice
Advertisement
Content will resume after advertisement