ಗೋಧ್ರಾ ಹತ್ಯಾಕಾಂಡ, ಮೋದಿಗೆ ಕ್ಲೀನ್ ಚಿಟ್

Posted by:
 
Share this on your social network:
   Facebook Twitter Google+    Comments Mail

ಗೋಧ್ರಾ ಹತ್ಯಾಕಾಂಡ, ಮೋದಿಗೆ ಕ್ಲೀನ್ ಚಿಟ್
ಅಹಮದಾಬಾದ್, ಏ.10: ಗುಜರಾತ್ ನ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಸ್ ಐಟಿ ನೀಡಿರುವ ವರದಿಯಲ್ಲಿ ಗುಜರಾತ್ ಸಿಎಂ ನರೇಂದ್ರ ಮೋದಿ ವಿರುದ್ಧ ಯಾವುದೇ ಸಾಕ್ಷಿಯಿಲ್ಲ ಎಂದು ವಿಶೇಷ ನ್ಯಾಯಾಲಯ ಮಂಗಳವಾರ(ಏ10) ತೀರ್ಪು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಸೇರಿದಂತೆ 61 ಜನರನ್ನು ಆರೋಪಮುಕ್ತರನ್ನಾಗಿ ಮಾಡಿದೆ.

ಗೋಧ್ರಾ ಹತ್ಯಾಕಾಂಡ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿ ನರೇಂದ್ರ ಮೋದಿ ಸೇರಿದಂತೆ 69 ಅಧಿಕಾರಿಗಳ ವಿರುದ್ಧ ಮಾಜಿ ಕಾಂಗ್ರೆಸ್ ಸಂಸದ ಎಹಸಾನ್ ಜಫ್ರಿ ಪತ್ನಿ ಜಕೀರಾ ಜಫ್ರಿ ಆರೋಪಿಸಿದ್ದರು. ತೀಸ್ತಾ ಸೆಟಲ್ವಾಡ್ ಸಹ ಅರ್ಜಿದಾರರಾಗಿದ್ದು, ಕೋರ್ಟ್ ತೀರ್ಪಿಗೆ ಅಸಂತೋಷ ವ್ಯಕ್ತಪಡಿಸಿದ್ದಾರೆ.

ಆದರೆ, ಮಾಜಿ ಸಿಬಐ ಮುಖ್ಯಸ್ಥ ಅರ್ ಕೆ ರಾಘವನ್ ನೇತೃತ್ವದ Special Investigation Team (SIT) ತಂಡ ಮೋದಿ ವಿರುದ್ಧ ಯಾವುದೇ ಸಾಕ್ಷಿ ಲಭ್ಯವಿಲ್ಲ ಎಂದು ಕೋರ್ಟ್ ಗೆ ವರದಿ ನೀಡಿದೆ.

2002ರ ಫೆಬ್ರವರಿ 27ರಂದು ನಡೆದಿದ್ದ ಭೀಕರ ಹತ್ಯಾಕಾಂಡದಲ್ಲಿ ಸಾಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್6 ಬೋಗಿಯಲ್ಲಿದ್ದ 59 ಕರಸೇವಕರನ್ನು ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಸಜೀವವಾಗಿ ಸುಟ್ಟಹಾಕಲಾಗಿತ್ತು.


ಈ ಪ್ರಕರಣದಲ್ಲಿ ಒಂದು 134 ಜನರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಅವರಲ್ಲಿ 16 ಜನ ತಲೆಮರೆಸಿಕೊಂಡಿದ್ದು, 13 ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಬಿಡುಗಡೆ ಮಾಡಲಾಗಿತ್ತು. 15 ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಮತ್ತು 80 ಜನರು ಜೈಲಿನಲ್ಲಿದ್ದರು.

English summary
A court in Ahmedabad gave a clean chit to Gujarat Chief Minister Narendra Modi over Gulbarg massacre and Godhra riots case. The court on Tuesday, Apr 10 claimed that Special Investigation Team (SIT) did not find any proof which can implicate Modi and 61 other accused persons in the case.
Write a Comment
AIFW autumn winter 2015