ಗಮನಿಸಿ, ಧನಲಕ್ಷ್ಮಿ ಬ್ಯಾಂಕ್ ಮಾರಾಟಕ್ಕಿಲ್ಲ

Posted by:
 
Share this on your social network:
   Facebook Twitter Google+    Comments Mail

ಗಮನಿಸಿ, ಧನಲಕ್ಷ್ಮಿ ಬ್ಯಾಂಕ್ ಮಾರಾಟಕ್ಕಿಲ್ಲ
ಬೆಂಗಳೂರು, ಏ.10: ಕೇರಳ ಮೂಲದ ಖಾಸಗಿ ವಲಯದ ಧನಲಕ್ಷ್ಮಿ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಬ್ಯಾಂಕ್ ಮಾರಾಟ ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಬ್ಯಾಂಕಿನ ಹೊಸ ಸಿಇಒ ಪಿಜಿ ಜಯಕುಮಾರ್ ಅಲ್ಲಗೆಳೆದಿದ್ದಾರೆ.

ಹಳೆ ಸಿಇಒ ಅಮಿತಾಬ್ ಚತುರ್ವೇದ ನಿರ್ಗಮನದ ನಂತರ ಬ್ಯಾಂಕ್ ದಿವಾಳಿ ಎದ್ದಿರುವ ಸುದ್ದಿ ಹಬ್ಬಿತ್ತು. ಕಳೆದ ಒಂದು ವರ್ಷದಿಂದ ಹೆಚ್ಚಿನ ವಹಿವಾಟು ನಡೆಸದ ಬ್ಯಾಂಕ್, ತನ್ನ ಉದ್ಯೋಗಿಗಳ ಸಂಖ್ಯೆ ಕಡಿತಕ್ಕೂ ಮುಂದಾಗಿತ್ತು.

ಹೊಸ ಸಿಇಒ ಜಯಕುಮಾರ್ ಬಂದ ಮೇಲೆ ಹೊಸ ಆರ್ಥಿಕ ನೀತಿ, ಖರ್ಚು ಕಡಿಮೆ ಮಾಡಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಬ್ಯಾಂಕ್ ವಿಲೀನ ಅಥವಾ ಮಾರಾಟವಾಗುತ್ತಿಲ್ಲ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಬ್ಯಾಂಕ್ ಉದ್ಯೋಗಿಗಳ ಸಂಬಳದಲ್ಲಿ ಶೇ 40 ರಷ್ಟು ಕಡಿತಗೊಳಿಸಲಾಗಿದೆ. ಉದ್ಯೋಗಿಗಳ ಸಂಖ್ಯೆಯನ್ನು 4,600 ರಿಂದ 4,200ಕ್ಕೆ ಇಳಿಸಲಾಗಿದೆ.

200 ಕೋಟಿ ರು ಮೌಲ್ಯದ ದೀರ್ಘಾವಧಿ ಬಾಂಡ್ ಗಳ ಮಾರಾಟ, ಷೇರುಗಳ ಮಾರಾಟ ದಿಂದ ಸುಮಾರು 400 ಕೋಟಿ ರು ಗಳಿಸುವ ನಿರೀಕ್ಷೆಯಲ್ಲಿದೆ.

ಬಿಎಸ್ ಇಯಲ್ಲಿ ಧನಲಕ್ಷ್ಮಿ ಬ್ಯಾಂಕ್ ಷೇರುಗಳು ಬೆಳಗ್ಗೆ ರು 72.60 ರುನಂತೆ ಶೇ 2.09ರಷ್ಟು ಇಳಿಮುಖವಾಗಿತ್ತು.

English summary
P G Jayakumar CEO has clarified that the bank is not for sale. Kerala based private sector Dhanlaxmi Bank, which has been passing through a rough patch since the last one year has seen things get worst after the departure of Amitabh Chaturvedi from the company last month.
Write a Comment
AIFW autumn winter 2015