ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭುಟ್ಟೋ ಪುತ್ರನ ಕರೆ, ಪಾಕಿಸ್ತಾನಕ್ಕೆ ರಾಹುಲ್

By Mahesh
|
Google Oneindia Kannada News

 Rahul accepts Bilawal Bhutto Invitation
ನವದೆಹಲಿ, ಏ.8: ಭಾರತಕ್ಕೆ ಖಾಸಗಿ ಭೇಟಿಗಾಗಿ ಆಗಮಿಸಿರುವ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಊಟ, ಹರಕೆ, ದರ್ಗಾ ಭೇಟಿಯಲ್ಲಿ ನಿರತರಾಗಿದ್ದಾರೆ. ಈ ನಡುವೆ ಜರ್ದಾರಿ ಪುತ್ರ ಬಿಲಾವಲ್ ಭುಟ್ಟೋ ನೀಡಿದ ಆಹ್ವಾನವನ್ನು ರಾಹುಲ್ ಗಾಂಧಿ ಮನ್ನಿಸಿದ್ದಾರೆ.

ರಾಹುಲ್ ಗಾಂಧಿ ಅವರು ಪಾಕಿಸ್ತಾನಕ್ಕೆ ಬರುವ ಆಶ್ವಾಸನೆ ನೀಡಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ನೀಡಿದ ಭೋಜನಕೂಟದಲ್ಲಿ ರಾಹುಲ್ ಗಾಂಧಿ ಹಾಗೂ ಬಿಲಾವಲ್ ಅವರು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಅತ್ತ ಭಾರತದ ಹಿರಿಯ ನಾಯಕರ ಜೊತೆ ಅಪ್ಪ ಜರ್ದಾರಿ ನಗು ನಗುತ್ತಾ ಮಾತಾಡುತ್ತಿದ್ದಾರೆ. ಪಾಕಿಸ್ತಾನ ಯುವ ನಾಯಕ ಬಿಲಾವಲ್ ಮಾತ್ರ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ್ದರು.

41 ವರ್ಷದ ರಾಹುಲ್ ಗಾಂಧಿ ಹಾಗೂ 23 ವರ್ಷ ಬಿಲಾವಲ್ ಭುಟ್ಟೋ ಜರ್ದಾರಿ ಇಬ್ಬರ ಜೀವನದಲ್ಲೂ ಒಂದಿಷ್ಟು ಸಾಮ್ಯತೆ ಇರುವುದು ಇಬ್ಬರ ಮಾತುಕತೆಗೆ ಇನ್ನಷ್ಟು ವೇಗ ತಂದುಕೊಟ್ಟಿತು.

ಕೇಂಬ್ರಿಡ್ಜ್ ನಲ್ಲಿ ರಾಹುಲ್ ವ್ಯಾಸಂಗ ಮಾಡಿದ್ದರೆ, ಬಿಲಾವಲ್ ಆಕ್ಸ್ ಫರ್ಡ್ ವಿದ್ಯಾರ್ಥಿಯಾಗಿದ್ದರು. ರಾಹುಲ್ ಅಪ್ಪ ರಾಜೀವ್ ಹಾಗೂ ಬಿಲಾವಲ್ ಅಮ್ಮ ಬೆನಜೀರ್ ಭುಟ್ಟೋ ಇಬ್ಬರು ಹಂತಕರ ಸಂಚಿಗೆ ಬಲಿಯಾದರು.

ರಾಹುಲ್ ರಂತೆ ಬಿಲಾವಲ್ ಕೂಡಾ ಪ್ರಜಾಪ್ರಭುತ್ವ, ಯುವಜನಾಂಗದ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದಾರೆ. ಬಿಲಾವಲ್ ಭಾರತದ ಭೇಟಿ ಕುರಿತ ಅಪ್ಡೇಟ್ ಗಲನ್ನು ಅವರ ಅಭಿಮಾನಿಗಳು ಟ್ವೀಟರ್ ಮೂಲಕ ಆಗಾಗ ತಿಳಿದುಕೊಳ್ಳುತ್ತಿದ್ದಾರೆ.

ಮಾತುಕತೆ ನಡೆಯಿತು.. ಆದರೆ: ಭಯೋತ್ಪಾದಕರ ಹಾವಳಿ, ಮುಂಬೈ ದಾಳಿಯ ರೂವಾರಿ ಸಯೀದ್ ಹಫೀಜ್ ವಿರುದ್ಧ ಕಠಿಣ ಕ್ರಮದ ವಿಚಾರ, ಕಾಶ್ಮೀರ ಸಮಸ್ಯೆ, ಪ್ರಾದೇಶಿಕ ವಿಷಯಗಳು, ಇದಲ್ಲದೇ ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಸರಬ್‌ಜಿತ್ ಸಿಂಗ್ ಕ್ಷಮಾದಾನ, ಸಿಯಾಚಿನ್, ಕಾಶ್ಮೀರ ವಿಷಯವಾಗಿ ಮಾತನಾಡಿದ್ದು, ಚರ್ಚಿಸಿದ್ದು ಜರ್ದಾರಿ ಹಾಗೂ ಮನಮೋಹನ್ ಸಿಂಗ್ ಅಲ್ಲ ಬದಲಿಗೆ ರಾಹುಲ್ ಹಾಗೂ ಬಿಲಾವಲ್ ಎಂಬುದು ಗಮನಾರ್ಹ ಸಂಗತಿ.

ಸುಮಾರು 40 ನಿಮಿಷಗಳ ಕಾಲ ರಾಹುಲ್ ಜೊತೆ ಊಟ, ಚರ್ಚೆ ನಡೆಸಿದ ಬಿಲಾವಲ್ ಇದು ನನಗೆ ಸಂತೋಷಕರ ಭೋಜನ ಕೂಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿಯಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಆಹ್ವಾನ ಸಿಕ್ಕಿದೆ. ಆದರೆ, ಭಾರತದ ಪ್ರಮುಖ ನಾಯಕರು ಪಾಕಿಸ್ತಾನಕ್ಕೆ ಯಾವಾಗ ತೆರಳುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

English summary
AICC general secretary Rahul Gandhi has accepted Bilawal Bhutto Zardari's invitation to visit Pakistan. Zardari visited India met PM Manmohan singh had good lunch and later visited Ajmer Sharif today(Apr.8). Reportedly now talks made on 26/11 Mumbai Terror Attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X