ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕಾಲ ಲಾಂಛನ ಸೃಷ್ಟಿಕರ್ತ ಮೈಸೂರು ಬಾಲಸ್ವಾಮಿ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Sakala logo creator Mysore artist Balaswamy
ಮೈಸೂರು, ಏ, 2 : ಸಾರ್ವಜನಿಕರಿಗೆ ನಾಗರಿಕ ಸೇವೆಯನ್ನು ಕಾಲಮಿತಿಯೊಳಗೆ ಒದಗಿಸುವ ರಾಜ್ಯ ಸರಕಾರದ ಮಹತ್ತರ ಯೋಜನೆಯಾದ ನಾಗರಿಕ ಸೇವಾ ಖಾತರಿ ಯೋಜನೆ "ಸಕಾಲ" ಸೋಮವಾರ, ಏಪ್ರಿಲ್ 2ರಂದು ರಾಜ್ಯಾದ್ಯಂತ ಜಾರಿಗೆ ಬರುತ್ತಿದೆ. ಈ ಯೋಜನೆಯ ಲಾಂಛನವನ್ನು ವಿನ್ಯಾಸಗೊಳಿಸಿದವರು ಮೈಸೂರಿನ ಕಲಾವಿದ ಬಾಲಸ್ವಾಮಿ ಎಂಬುವುದು ಹೆಮ್ಮೆಯ ವಿಷಯವಾಗಿದೆ.

ಸಮಯ ಮತ್ತು ಕಾನೂನಿನ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಿದ ಲಾಂಛನ ಇದಾಗಿದೆ. ಈ ಲಾಂಛನ ವಿನ್ಯಾಸಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿ ಸದಾನಂದಗೌಡರವರು 50 ಸಾವಿರ ರೂಪಾಯಿಯನ್ನು ಬಹುಮಾನವಾಗಿ ನೀಡಿ ಬಾಲಸ್ವಾಮಿಯನ್ನು ಗೌರವಿಸಿದ್ದಾರೆ.

ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಬಳಿಕ ಕಾವಾದಲ್ಲಿ ತರಬೇತಿ ಪಡೆದ ಬಾಲಸ್ವಾಮಿಯವರು, ಬಿಎಫ್ಎನಲ್ಲಿ ಅಪ್ಲೈಡ್ ಆರ್ಟ್ಸ್ ಐಚ್ಚಿಕ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ಬೆಂಗಳೂರಿನಲ್ಲಿ ವಿವಿಧ ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡಿದ್ದರು.

ನಂತರ ಮೈಸೂರಿಗೆ ಹಿಂತಿರುಗಿದ ಅವರು ಶಿಲ್ಪಕೃತಿ ಐಚ್ಚಿಕ ವಿಷಯದಲ್ಲಿ ಫೈನ್ ಆರ್ಟ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗಕ್ಕೆ ಲಾಂಛನ ವಿನ್ಯಾಸ ಮಾಡಿದ ಐವರ ಪೈಕಿ ಇವರೂ ಒಬ್ಬರಾಗಿದ್ದಾರೆ. ಬಾಲಸ್ವಾಮಿ ಸಂಪರ್ಕ: 99003 00038. [ಸಕಾಲ ಎಂದರೇನು, ಬಳಕೆ ಹೇಗೆ?]

English summary
Karnataka Guarantee of Services Act popularly known as, Sakala, launched across Karnataka on April 2, Monday. The attractive logo, with a clock, depicting timely service has been created by Mysore artist Balaswamy. He has been rewarded by Karnataka govt for his creative work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X