Englishবাংলাગુજરાતીहिन्दीമലയാളംதமிழ்తెలుగు
Filmibeat Kannada

ಟೆಕ್ ಎಂ ಮಹೀಂದ್ರಾ ವಿಲೀನ, ಸತ್ಯಂ ಷೇರು ಜಿಗಿತ

Posted by:
Published: Thursday, March 22, 2012, 16:53 [IST]
 

ಟೆಕ್ ಎಂ ಮಹೀಂದ್ರಾ ವಿಲೀನ, ಸತ್ಯಂ ಷೇರು ಜಿಗಿತ

ಹೈದರಾಬಾದ್ , ಮಾ.22: ಗುರುವಾರ(ಮಾ.22) ಮಹೀಂದ್ರಾ ಸತ್ಯಂ ಷೇರುಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಮಹೀಂದ್ರಾ ಅಂಡ್ ಮಹೀಂದ್ರಾ- ಮಹೀಂದ್ರ ಸತ್ಯಂ ಹಾಗೂ ಟೆಕ್ ಮಹೀಂದ್ರ ವಿಲೀನ ಪ್ರಕ್ರಿಯೆಗೆ ಎರಡೂ ಕಂಪನಿಗಳ ಬೊರ್ಡ್ ಒಪ್ಪಿಗೆ ನೀಡಿದೆ.

ಮೂರು ವರ್ಷಗಳ ನಂತರ ವಿಲೀನ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದ್ದು, 2:17 ಅನುಪಾತದಲ್ಲಿ ಸುಮಾರು 2.4 ಬಿಲಿಯನ್ ಮೌಲ್ಯದ ಡೀಲ್ ಚಾಲನೆ ದೊರೆತಿದೆ. ಟೆಕ್ ಮಹೀಂದ್ರ 2 ಷೇರು ಹೊಂದಿದ್ದರೆ ಮಹೀಂದ್ರಾ ಸತ್ಯಂ 17 ಷೇರು ಸಿಗಲಿದೆ.

ಈ ವಿಲೀನಕ್ಕೆ ಬಾಂಬೆ ಹೈಕೋರ್ಟ್ ಹಾಗೂ ಆಂಧ್ರಪ್ರದೇಶದ ಹೈ ಕೋರ್ಟ್, ಅಕೌಂಟೆಂಟ್ ಗಳು ಹಾಗೂ ಮರ್ಚೆಂಟ್ ಬ್ಯಾಂಕರ್ ಗಳ ಒಪ್ಪಿಗೆ ಸಿಗಬೇಕಿದೆ. ವಿಲೀನದ ನಂತರ ಹೊಸ ಹೆಸರಿನಲ್ಲಿ ಕಂಪನಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ವಿಲೀನದ ನಂತರ ಉದ್ಯೋಗಿಗಳ ಸಂಖ್ಯೆ 75,000ಕ್ಕೆ ಏರಲಿದೆ. 350 ಗ್ರಾಹಕರನ್ನು ಹೊಂದಲಿದೆ. ಮಹೀಂದ್ರಾ ಸತ್ಯಂ ಸಿಇಒ ಸಿಪಿ ಗುರ್ನಾನಿ ಹೊಸ ವಿಲೀನ ಕಂಪನಿಯ ಮುಖ್ಯಸ್ಥರಾಗಲಿದ್ದಾರೆ ಎಂದು ಟೆಕ್ ಮಹೀಂದ್ರಾ ವ್ಯವಸ್ಥಾಪಕ ನಿರ್ದೇಶಕ ವಿನೀತ್ ನಾಯರ್ ಘೋಷಿಸಿದ್ದಾರೆ.

2009 ರಲ್ಲಿ ಸತ್ಯಂ ಕಂಪ್ಯೂಟರ್ ನ ಸಿಇಒ ರಾಮಲಿಂಗ ರಾಜು ಅವರ ವಂಚನೆ ಪ್ರಕರಣದಿಂದ ನೆಲಕಚ್ಚಿದ್ದ ಕಂಪನಿಯನ್ನು ಟೆಕ್ ಮಹೀಂದ್ರಾ ಕೈ ಹಿಡಿದು ಮೇಲಕ್ಕೆತ್ತಿತ್ತು. ಜೊತೆಗೆ ರಾಮಲಿಂಗ ರಾಜು ಕೃಪಾಕಟಾಕ್ಷದಿಂದ ಸುಮಾರು 2,889 ಕೋಟಿ ರು ಆದಾಯ ತೆರಿಗೆ ಭಾರವನ್ನು ಮಹೀಂದ್ರ ಸತ್ಯಂ ಹೊತ್ತುಕೊಂಡಿತ್ತು.

English summary
Tech Mahindra on Wednesday(Mar.22) announced much awaited merger with India’s fourth largest information technology services firm, Satyam Computer Services. With a share swap ratio of 2:17, company will likely to have new name.
ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like