ಕೆಆರ್ ಪೇಟೆ: 2 ಹೈಸ್ಕೂಲ್ ವಿದ್ಯಾರ್ಥಿನಿಯರು ನೇಣಿಗೆ

Subscribe to Oneindia Kannada

two-high-school-girls-suicide-madya
ಕೆ.ಆರ್.ಪೇಟೆ (ಮಂಡ್ಯ), ಮಾ.5: ಇಬ್ಬರು ವಿದ್ಯಾರ್ಥಿನಿಯರು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕನಹಳ್ಳಿಯ ಶೃತಿ (13) ಹಾಗೂ ಹರೇಬೊಮ್ಮನಹಳ್ಳಿಯ ದಿವ್ಯಾ (13) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯರು. ಅರೆಬೊಪ್ಪನಹಳ್ಳಿಯ ಮಂಜೇಗೌಡರ ಪುತ್ರಿ ದಿವ್ಯಾ ಮತ್ತು ಚಿಕ್ಕೇನಹಳ್ಳಿಯ ಸಿ.ಜೆ.ಲೋಕೇಶ್ ಪುತ್ರಿ ಶೃತಿ ಅಕ್ಕ-ತಂಗಿಯರ ಮಕ್ಕಳು. ಕೆ.ಆರ್. ಪೇಟೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಈ ಕೃತ್ಯವೆಸಗಿದ್ದಾರೆ.

8ನೆ ತರಗತಿಯ ವಿದ್ಯಾರ್ಥಿನಿಯರಾದ ಇವರು ಹಾಸ್ಟೆಲ್‌ನ ಒಂದೇ ಕೊಠಡಿಯಲ್ಲಿ ವಾಸ್ತವ್ಯವಿದ್ದರೆನ್ನಲಾಗಿದೆ. ಇಂದು ಬೆಳಗ್ಗೆ ಸಹಪಾಠಿಗಳು ಇಲ್ಲದಿದ್ದಾಗ ಇವರಿಬ್ಬರೂ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

English summary
Two high school girls Shruthi and Divya have committed suicide on Mar 5 morning in KR Pet, Mandya.
Please Wait while comments are loading...