ರಾಮರಾಮ! ಇನ್ನೂ 16 ಶಾಸಕರಿಂದ ಬ್ಲೂಫಿಲಂ ವೀಕ್ಷಣೆ

Posted by:
 
Share this on your social network:
   Facebook Twitter Google+ Comments Mail

karnataka-blue-boys-number-rised-to-16-olekar
ಹಾವೇರಿ, ಮಾ.5: ವಿಧಾನಸಭೆ ಕಲಾಪ ವೇಳೆ ಸದನದಲ್ಲಿ ಮೂವರು ಸಚಿವರಷ್ಟೇ ಅಲ್ಲ; ಇನ್ನೂ 16 ಶಾಸಕರು ಬ್ಲೂ ಫಿಲಂ ವೀಕ್ಷಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ಪಕ್ಷಭೇದ ಮರೆತು ಎಲ್ಲ ಶಾಸಕರೂ ಇದನ್ನು ಸವಿದಿದ್ದಾರೆ. ಇದನ್ನು ಸ್ವತಃ, ಪ್ರಕರಣದ ತನಿಖೆಗಾಗಿ ನೇಮಗೊಂಡಿರುವ ಸದನ ಸಮಿತಿ ಸದಸ್ಯ ನೆಹರೂ ಓಲೇಕಾರ್ ಬಹಿರಂಗಪಡಿಸಿದ್ದಾರೆ.

ಬಿಜೆಪಿಯ ಮೂವರು ಮಾಜಿ ಸಚಿವರು ಮಾತ್ರ ಬ್ಲೂಫಿಲಂ ನೋಡಿಲ್ಲ. ಬೇರೆ ಪಕ್ಷದವರು ಕೂಡಾ ನೋಡಿರುವ ಕುರಿತು ದಾಖಲೆಗಳಿವೆ ಎಂದಿದ್ದಾರೆ. ಒಟ್ಟು 15 ರಿಂದ 16 ಮಂದಿ ಶಾಸಕರು ಬ್ಲೂ ಫಿಲಂ ನೋಡಿದ್ದಾರೆ. ಅದರಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಕೂಡಾ ಇದ್ದಾರೆ. ಅವರು ಬ್ಲೂ ಫಿಲಂ ನೋಡುತ್ತಿದ್ದದ್ದು, ವಿಧಾನಸಭೆಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ಅವರು ಭಾನುವಾರ ಪ್ರಕಟಿಸಿದ್ದಾರೆ.

ಆದರೆ, ಬ್ಲೂಫಿಲಂ ವೀಕ್ಷಣೆ ಮಾಡಿರುವ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗುವ ಶಾಸಕರು ಯಾರು, ಅವರು ಯಾವ ಪಕ್ಷದವರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, ಮಾರ್ಚ್ 8 ರಂದು ಈ ಮೂವರು ಮಾಜಿ ಸಚಿವರ ವಿಚಾರಣೆ ನಡೆಯಲಿದೆ. ನಂತರ ಈ ಶಾಸಕರಿಗೂ ನೋಟಿಸ್ ಜಾರಿ ಮಾಡಿದ ಮೇಲೆ ಅವರ ಹೆಸರು, ಪಕ್ಷ ಎಲ್ಲವೂ ಬಹಿರಂಗಗೊಳ್ಳಲಿದೆ ಎಂದರು.

English summary
Karnataka blue-boys number increased to 16! Nehru Olekar, MLA and member of the House committee probing the blue film incident, has said on Sunday that 15-16 legislators other than the three former ministers had watched the controversial clipping in the Assembly.
Please Wait while comments are loading...
Your Fashion Voice
Advertisement
Content will resume after advertisement