ಹುಕ್ಕಾ ಪಾರ್ಲರಲ್ಲಿ ಸಿಕ್ಕಿಬಿದ್ದ ಬೆಂಗಳೂರು ಶಾಲಾ ಮಕ್ಕಳು

Posted by:
Give your rating:

ಬೆಂಗಳೂರು, ಮಾ. 5 : ಪರವಾನಗಿ ಇಲ್ಲದಿದ್ದರೂ ಭರ್ಜರಿ ವ್ಯಾಪಾರ ನಡೆಸುತ್ತಿರುವ ಐಷಾರಾಮಿ ಹುಕ್ಕಾ ಪಾರ್ಲರುಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿರುವ 7 ಹಿಲ್ಸ್ ಹುಕ್ಕಾ ಪಾರ್ಲರ್ ಮೇಲೆ ದಾಳಿ ಮಾಡಿದಾಗ ಅಲ್ಲಿದ್ದ ಜಂಗುಳಿಯನ್ನು ಕಂಡು ಅಧಿಕಾರಿಗಳು ಬೇಸ್ತುಬಿದ್ದಿದ್ದಾರೆ.

ಏಕೆಂದರೆ, ಅಲ್ಲಿ ಕಾಲಕಳೆಯಲು ಬಂದಿದ್ದು ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ಬಿಷಪ್ ಕಾಟನ್ ಗಂಡುಮಕ್ಕಳ ಶಾಲೆಯ ಸಮವಸ್ತ್ರಧಾರಿ ಮಕ್ಕಳು. ಈ ಗುಂಪಿನಲ್ಲಿ ಕೆಲ ಹೆಣ್ಣುಮಕ್ಕಳು ಕೂಡ ಇದ್ದರು. ಪರೀಕ್ಷೆ ಹತ್ತಿರ ಬಂದಾಗ ಓದಿನತ್ತ ಗಮನ ಹರಿಸುವುದು ಬಿಟ್ಟು ಹುಕ್ಕಾ ಪಾರ್ಲರುಗಳಲ್ಲಿ ಮೋಜುಮಸ್ತಿ ಮಾಡುತ್ತಿದ್ದ 50ಕ್ಕೂ ಹಚ್ಚು ವಿದ್ಯಾರ್ಥಿಗಳನ್ನು ಕಂಡು ಅಧಿಕಾರಿಗಳಿಗೆ ಸಖತ್ ಶಾಕ್.

ಹುಕ್ಕಾ ಸೇದಲು ಇರುವ ಈ ಪಾರ್ಲರಲ್ಲಿ ಇನ್ನೂ ಮೀಸೆ ಚಿಗುರದ ಮಕ್ಕಳನ್ನು ಬಿಟ್ಟಿದ್ದೇಕೆ ಎಂದು ಬಿಬಿಎಂಪಿ ಅಧಿಕಾರಿಗಳು ಪಾರ್ಲರ್ ಮಾಲಿಕರನ್ನು ವಿಚಾರಿಸುತ್ತಿದ್ದಾರೆ. ದಾಳಿ ನಡೆಸಿದಾಗ ಕೆಲ ಮಕ್ಕಳು ಹುಕ್ಕಾ ಸೇದುತ್ತಿದುದು ಕಂಡುಬಂದಿದೆ ಮತ್ತು ಹೆಚ್ಚಿನವರು ಬಿಲಿಯರ್ಸ್ ಆಟವಾಡಿಕೊಂಡು ಕಾಲಕಳೆಯುತ್ತಿದ್ದರು.

ಈ ಹುಕ್ಕಾ ಪಾರ್ಲರ ಪ್ರವೇಶಿಸಬೇಕೆಂದರೆ ಕನಿಷ್ಠ 300ರಿಂದ 400 ರು. ವ್ಯಯಿಸಬೇಕಾಗುತ್ತದೆ. ಒಂದು ಬಾರಿ ಒಳಹೊಕ್ಕರೆ ಎಷ್ಟು ಬೇಕಾದಷ್ಟಾದರೂ ಹುಕ್ಕಾ ಸೇದಬಹುದು. ಈ ಮಕ್ಕಳಿಗೆ ಇಷ್ಟೊಂದು ಹಣ ಬಂದಿದ್ದಾದರೂ ಎಲ್ಲಿಂದ? ಶಾಲೆಯಲ್ಲಿ ಇವರು ಎಂಥ ನೀತಿಪಾಠ ಕಲಿಯುತ್ತಾರೆ? ಬ್ಯಾಗು ಹೊತ್ತುಕೊಂಡು ದಿನಾ ಶಾಲೆಗೆ ಹೋಗುವ ಮಕ್ಕಳು ಶಾಲೆ ಬಿಟ್ಟ ನಂತರ ಏನು ಮಾಡುತ್ತಿದ್ದಾರೆಂದು ಪಾಲಕರಿಗೆ ತಿಳಿದಿದೆಯಾ?

English summary
50 students of Bishop Cotton boys school, which is situated on Residency road, have been caught when BBMP officials raided 7 hills hukka parlor, for doing business without permission. Few boys were caught smoking and playing billiards. Do the parents know what their kids are doing after the school?
Please Wait while comments are loading...
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive