ಅಣ್ಣಾ ಬಳಗದ ಕಾರ್ಯಕರ್ತೆ ಕೊಲೆ ಕೇಸ್ ಕ್ಲೋಸ್

Posted by:
 
Share this on your social network:
   Facebook Twitter Google+ Comments Mail

Shehla Masood Murder
ಭೋಪಾಲ್, ಫೆ.29: ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತೆ ಶೆಲಾ ಮಸೂದ್ ಕೊಲೆ ಪ್ರಕರಣವನ್ನು ಸಿಬಿಐ ಹಾಗೂ ಸ್ಥಳೀಯ ಪೊಲೀಸರು ಬೇಧಿಸಿದ್ದಾರೆ. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರುದ್ಧ ಆಂದೋಲನದಲ್ಲೂ ಶೆಲಾ ಗುರುತಿಸಿಕೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಜಹೀದಾ ಪರ್ವೆಜ್ ಎಂಬ ವಿನ್ಯಾಸಗಾರ್ತಿಯೊಬ್ಬಳು ಸೇರಿದ್ದಾಳೆ ಎಂದು ಸಿಬಿಐ ಮಾಹಿತಿ ಹೊರಹಾಕಿದೆ.

ಬಾಡಿಗೆ ಹಂತಕರನ್ನು ಬಳಸಿ ಶೆಲಾಳನ್ನು ಕೊಲ್ಲಲು ಜಹೀದಾ ಸಂಚು ರೂಪಿಸಿದ್ದಳು. ತನ್ನ ಪತಿ ಜೊತೆ ಶೆಲಾಗೆ ಅನೈತಿಕ ಸಂಬಂಧ ಇದೆ ಎಂಬ ಸಂಶಯ ಜಹೀದಾಗೆ ಬಂದಿತ್ತು ಎನ್ನಲಾಗಿದೆ.

ಮಂಗಳವಾರ ಸಿಬಿಐ ತಂಡ, ಜಹೀದಾಳನ್ನು ಬಂಧಿಸಿ ವಿಚಾರಣೆ ನಡೆಸಿದೆ. ಸುಮಾರು 3 ಲಕ್ಷ ರು ಸುಪಾರಿ ನೀಡಿ ಶೆಲಾ ಅವರ ಕೊಲೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರ ಮೇಲೂ ಗುಮಾನಿ ವ್ಯಕ್ತವಾಗಿದೆ.

ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರುದ್ಧ ಭಾರತ(IAC) ಹೋರಾಟದ ಪ್ರಮುಖ ಕಾರ್ಯಕರ್ತೆಯಾಗಿದ್ದ 39 ವರ್ಷದ ಶೆಲಾರನ್ನು ಆಗಸ್ಟ್ 16, 2011ರಲ್ಲಿ ಹತ್ಯೆಗೈಯಲಾಗಿತ್ತು.

English summary
Murder case of Shehla Masood, an Right to Information (RTI) activist and an aide to Anna Hazare, is believed to have been cracked by Bhopal police and sources claimed that she was killed over an extra marital affair.
Please Wait while comments are loading...
Your Fashion Voice
Advertisement
Content will resume after advertisement