ಅರ್ಜೆಂಟ್ ಕೋರ್ಟಿಗೆ ಬರುವಂತೆ ಬಿಎಸ್ವೈಗೆ ಸಮನ್ಸ್

Posted by:
 
Share this on your social network:
   Facebook Twitter Google+ Comments Mail

BS Yeddyurappa
ಬೆಂಗಳೂರು, ಫೆ.23: ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಅರ್ಜಿ ಮನ್ನಿಸಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೋರ್ಟ್ ಖುದ್ದು ಹಾಜರಾಗುವಂತೆ ಲೋಕಾಯುಕ್ತ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ರೇಸ್ ಕೋರ್ಸ್ ನಿವಾಸದಲ್ಲಿರುವ ಬಿಎಸ್ ಯಡಿಯೂರಪ್ಪ ಅವರು ಲೋಕಾಯುಕ್ತರ ಪೊಲೀಸರು ನೀಡಿದ ಸಮನ್ಸ್ ಗೆ ಗುರುವಾರ(ಫೆ.23) ಮಧ್ಯಾಹ್ನ ಸಹಿ ಹಾಕಿ ಸ್ವೀಕರಿಸಿದ್ದಾರೆ.

ಇದೀಗ ಬಂದ ಸುದ್ದಿ: ಸಿರಾಜಿನ್ ಬಾಷಾ ಸಲ್ಲಿಸಿರುವ ಡಿನೋಟಿಫಿಕಿಷನ್ ಸಂಭಿಸಿದ ಮೊದಲನೇ ದೂರಿನ ವಿಚಾರಣೆ ನಡೆಸಿದ ನ್ಯಾ. ಸುಧೀಂದ್ರರಾವ್ ಅವರು ಮುಂದಿನ ವಿಚಾರಣೆಯನ್ನು ಮಾ.16ಕ್ಕೆ ಮುಂದೂಡಿ ಗುರುವಾರ(ಫೆ.23) ಸಂಜೆ ಆದೇಶ ಹೊರಡಿಸಿದ್ದಾರೆ. ಯಡಿಯೂರಪ್ಪ ಸೇರಿದಂತೆ 7 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.

ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿರಾಜಿನ್ ಬಾಷಾ ಸಲ್ಲಿಸಿರುವ ಮೊದಲ ದೂರಿನ ಅಡಿಯಲ್ಲಿ ಈ ಸಮನ್ಸ್ ಜಾರಿಕೊಂಡಿದೆ. ಆದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಜಗದೀಶ್ ಶೆಟ್ಟರ್, ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಹಲವು ಶಾಸಕರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

English summary
Lokayukta court has issued summons against former CM Yeddyurapa in Land Denotification Case. Yeddyurappa has signed the summons and will have to appear before the court today(Feb.23).
Please Wait while comments are loading...
Your Fashion Voice
Advertisement
Content will resume after advertisement