ಯೂಟ್ಯೂಬ್ ವಿಜ್ಞಾನ ಸ್ಪರ್ಧೆ ಗೆದ್ದ ಬೆಂಗ್ಳೂರ್ ಹುಡ್ಗ

Posted by:
 
Share this on your social network:
   Facebook Twitter Google+    Comments Mail

ಯೂಟ್ಯೂಬ್ ವಿಜ್ಞಾನ ಸ್ಪರ್ಧೆ ಗೆದ್ದ ಬೆಂಗ್ಳೂರ್ ಹುಡ್ಗ
ಬೆಂಗಳೂರು, ಫೆ.23: ಯೂಟ್ಯೂ ಸ್ಪೇಸ್ ಲ್ಯಾಬ್ ಆಯೋಜಿಸಿದ್ದ ವಿಶ್ವ ವಿಜ್ಞಾನ ಸ್ಪರ್ಧೆಯಲ್ಲಿ 18 ವರ್ಷದ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಚಿನ್ ಕುಕ್ಕೆ ಪ್ರಾದೇಶಿಕ ವಿಜೇತರಾಗಿ ಹೊರ ಹೊಮ್ಮಿದ್ದಾರೆ.

ನಗರದ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿರುವ ಸಚಿನ್ ಅವರ ಜೊತೆ ಇನ್ನೂ 6 ಜನರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಹ್ಯಾಕಾಶದಲ್ಲಿ ನಡೆಸಬಹುದಾದ ಪ್ರಯೋಗದ ಬಗ್ಗೆ ಯೂಟ್ಯೂಬ್, ಲೆನೆವೊ ಹಾಗೂ ಸ್ಪೇಸ್ ಅಡ್ವೆಂಚರ್ಸ್ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯ 17-18 ವಯೋಮಿತಿ ವಿಭಾಗದಲ್ಲಿ ಸಚಿನ್ ವಿಜೇತರಾಗಿದ್ದಾರೆ.

ನಾಸಾ, ESA ಹಾಗೂ JAXA ಸಹಯೋಗದೊಂದಿಗೆ ಆರು ಮಂದಿ ಪ್ರಾದೇಶಿಕ ವಿಜೇತರು ವಿಶ್ವಮಟ್ಟದ ಇನ್ನೂ ಇಬ್ಬರು ವಿಜೇತರು ಸೇರಿ ತಮ್ಮ ಪ್ರಯೋಗವನ್ನು ಅಂತಾರಾಷ್ಟ್ರೀಯ ಬಾಹ್ಯಕಾಶ ಕೇಂದ್ರದಲ್ಲಿ ಪೂರೈಸಬಹುದಾಗಿದೆ.

ಲೆನೆವೊ ಥಿಂಕ್ ಪ್ಯಾಡ್ ಲ್ಯಾಪ್ ಟಾಪ್ ಬಳಸಿ ಯೂಟ್ಯೂಬ್ ನಲ್ಲಿ ಈ ಪ್ರಯೋಗವನ್ನು ನೇರವಾಗಿ ಪ್ರಸಾರ ಮಾಡಲಾಗುತ್ತದೆ.

ಸುಮಾರು 80 ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಶೇ.40 ರಷ್ಟು ಸ್ಪರ್ಧೆಗಳು ಭಾರತದ ಮೂಲದವರು ಎಂಬುವುದು ವಿಶೇಷ. ಮೈಕ್ರೋ ಗ್ರಾವಿಟಿಯಲ್ಲಿ ಫೆರೋ ದ್ರಾವಣಗಳ ಥರ್ಮಲ್ ಕಂಡೆಕ್ಟಿವಿಟಿ ಬಗ್ಗೆ ಸಚಿನ್ ಪ್ರಯೋಗ ನಡೆಸಿದ್ದರು.

English summary
An 18-year old engineering student Sachin Kukke from BMSCE Bangalore was declared as the regional winner from India in the 'YouTube Space Lab' global science competition.
Write a Comment
AIFW autumn winter 2015