ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮು ಗಲಭೆ ಮಸೂದೆ : ಏನಿದು ? ಕೇಳೋಣ ಬನ್ನಿ

By Mahesh
|
Google Oneindia Kannada News

Dr Rakesh Sinha speak on Communal Violence
ಬೆಂಗಳೂರು, ಫೆ.22: ಕೋಮು ಗಲಭೆ ಮಸೂದೆ ರಾಷ್ಟ್ರೀಯ ಐಕ್ಯತೆಗೆ ಮಾರಕ ಎಂಬ ವಿಷಯದ ಮೇಲೆ ದೆಹಲಿ ವಿವಿಯ ಪ್ರೊ. ಡಾ. ರಾಕೇಶ್ ಸಿನ್ಹಾ ಅವರು ಫೆ. 25 ರಂದು ಉಪನ್ಯಾಸ ನೀಡಲಿದ್ದಾರೆ.

Center for Educational and Social Studies (CESS) ಭಾಗವಾಗಿರುವ ಜಿಜ್ಞಾಸ ಸಂಸ್ಥೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಕೋಮು ಗಲಭೆ ಮಸೂದೆ ಬಗ್ಗೆ ರಾಕೇಶ್ ಸಿನ್ಹಾ ಅವರ ಜೊತೆ ಸಾರ್ವಜನಿಕರು ಸಂವಾದ ನಡೆಸಬಹುದಾಗಿದೆ.

ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ಬಿ ಪದ್ಮರಾಜ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಎಂಎಲ್ ಸಿಪಿವಿ ಕೃಷ್ಣ ಭಟ್ಟ ಅವರು ಉಪಸ್ಥಿತರಿರುತ್ತಾರೆ.

ಸ್ಥಳ: ಮಿಥಿಕ್ ಸೊಸೈಟಿ, ಯವನಿಕಾ ಆಡಿಟೋರಿಯಂ ಎದುರು ನೃಪತುಂಗ ರಸ್ತೆ, ಬೆಂಗಳೂರು

ಜಿಜ್ಞಾಸ ಹಾಗೂ CESS ಬಗ್ಗೆ : ಜಿಜ್ಞಾಸ ಎಂದರೆ ಸಂಸ್ಕೃತದಲ್ಲಿ ವಿಚಾರಣೆ, ಚರ್ಚೆ ಎಂದಾಗುತ್ತದೆ. CESS ಅಡಿಯಲ್ಲಿರುವ ಜಿಜ್ಞಾಸ ಮೂಲಕ ಜ್ಞಾನಾರ್ಥಿಗಳನ್ನು ಪ್ರೋತ್ಸಾಹಿಸುವುದು ಸಂಸ್ಥೆಯ ಮೂಲ ಉದ್ದೇಶ.

ಭಾರತ ಬರೀ ದೇಶವಲ್ಲ, ಸಮಸ್ತ ನಾಗರೀಕ ಸಮಾಜ. ನಾಗರೀಕ ಸಮಾಜದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಹಳೆ ಕಂದಾಚಾರಗಳು ಹೊಸ ನಿಯಮಗಳನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂಬುದು ನಮ್ಮ ಉದ್ದೇಶ.

ನಮ್ಮ ನಾಗರೀಕತೆ ಧರ್ಮದ ನೆಲೆಗಟ್ಟಿನ ಮೇಲೆ ನಿಂತಿದೆ. ನಮ್ಮ ಧರ್ಮ ಹಾಗೂ ಕಾನೂನು ವಿಶ್ವಕ್ಕೆ ಮಾದರಿಯಾಗಿದೆ. ವಿಜ್ಞಾನದ ತಳಹದಿಯ ಮೇಲೆ ಶೈಕ್ಷಣಿಕ ಹಾಗೂ ಸಮಾಜಿಕ ಸಮಸ್ಯೆಗಳತ್ತ CESS ಗಮನ ಹರಿಸುತ್ತದೆ.

English summary
CESS Bangalore in association with ' Jijnasa' has organized an interactive session with Dr Rakesh Sinha. Subject: 'Communal Violence Bill, threat to national integration', on 25 Feb at 4pm at Mythic Society. Dr Rakesh Sinha is Associate Professor in the department of Political Science at Delhi University and a Director for India Policy Foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X