ಇನ್ಫೋಸಿಸ್ ಗೆ ಬಂಗಾಳದಲ್ಲಿ ಭಾರಿ ಮುಖಭಂಗ

Posted by:
Give your rating:

No SEZ to Infosys

ಕೋಲ್ಕತ್ತಾ, ಫೆ.22: ಎಸ್ ಇಜಡ್ ಮಾನ್ಯತೆ ಸಿಗದ ಹೊರತೂ ಬಂಗಾಳಕ್ಕೆ ಕಾಲಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಇನ್ಫೋಸಿಸ್ ಸಂಸ್ಥೆಗೆ ಭಾರಿ ಮುಖಭಂಗವಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರ ಇನ್ಪೋಸಿಸ್ ಸಂಸ್ಥೆಗೆ ನಾವು ಎಸ್ ಇಜಡ್ ಮಾನ್ಯತೆ ನೀಡುವುದಿಲ್ಲ ಎಂದು ಘೋಷಿಸಿದೆ.

ಇನ್ಫಿ ಹಾಗೂ ವಿಪ್ರೋ ಸಂಸ್ಥೆಗಳು ರಾಜರ್ ಹತ್ ಪ್ರದೇಶದಲ್ಲಿ ತಮ್ಮ ಘಟಕ ಆರಂಭಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಆ ಪ್ರದೇಶಕ್ಕೆ ವಿಶೇಷ ಆರ್ಥಿಕ ವಲಯ ಮಾನ್ಯತೆ ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದೆ ಎಂದು ಪಶ್ಚಿಮ ಬಂಗಾಳದ ಐಟಿ ಸಚಿವ ಪಾರ್ಥ ಚಟರ್ಜಿ ಅವರು ಸೋಮವಾರ(ಫೆ.21)ಪ್ರತಿಕ್ರಿಯಿಸಿದ್ದಾರೆ.

ಆದರೆ, ಇನ್ಫೋಸಿಸ್ ಸಂಸ್ಥೆಗೆ ಎಸ್ ಇಜಡ್ ನ ಕೆಲವು ಸೌಲಭ್ಯ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ನಮ್ಮ ಸರ್ಕಾರ ಎಸ್ ಇಜಡ್ ಸ್ಥಾಪಿಸಲು ಮುಂದಾಗಿಲ್ಲ ಎಂದು ಸಚಿವ ಪಾರ್ಥ ಹೇಳಿದ್ದಾರೆ.

ಆದರೆ, ಇನ್ಫೋಸಿಸ್ ಸಂಸ್ಥೆಗೆ ವ್ಯಾಟ್, ವಿದ್ಯುತ್ ವೆಚ್ಚ ಹಾಗೂ ಕಿರು ಸಾಲ ನೀಡಿಕೆಯಲ್ಲಿ ವಿನಾಯತಿ ನೀಡಲು ಸರ್ಕಾರ ಬದ್ಧವಾಗಿದೆ. ಟಾಟಾ ಮೋಟರ್ಸ್ ಸಂಸ್ಥೆ ಪ್ರಕರಣಕ್ಕೂ ಇನ್ಫೋಸಿಸ್ ಘಟಕ ಸ್ಥಾಪನೆಗೂ ವ್ಯತ್ಯಾಸವಿದೆ ಎಂದು ಪಾರ್ಥ ಹೇಳಿದರು.

ಕೇಂದ್ರ ಸರ್ಕಾರ ಮನಸ್ಸು ಮಾಡಿದೆ ಸೇವಾ ತೆರಿಗೆ, ಕೇಂದ್ರ ಅಬಕಾರಿ ಹಾಗೂ ಕಾರ್ಪೋರೇಟ್ ಆದಾಯ ತೆರಿಗೆ ಮನ್ನಾ ಮಾಡಬಹುದಾಗಿದೆ. ರಾಜರ್ ಹತ್ ಪ್ರದೇಶದಲ್ಲಿ ಇನ್ಫೋಸಿಸ್ ಸಂಸ್ಥೆ 50 ಎಕರೆ ಭೂಮಿ ಮಂಜೂರಾಗಿದೆ.

English summary
West Bengal IT Minister Partha Chatterjee on Monday, Feb 21 informed the IT giant Infosys that the state cannot recommend its project for the special economic zone (SEZ) status.
Please Wait while comments are loading...
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive