1 ಕೋಟಿ ರೂ ಕದ್ದ ಚಾಲಾಕಿ ಕಳ್ಳಿ, ಕಳ್ಳನ ಬಂಧನ

Posted by:
Give your rating:

New Delhi Rs 1 Cr Robbery case
ನವದೆಹಲಿ, ಜ.14: ಸುಮಾರು 1 ಕೋಟಿ ರು ಕದ್ದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಕಳ್ಳಿ ಕಳ್ಳ ಜೋಡಿಯನ್ನು ದೆಹಲಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂವರು ಕಳ್ಳರು ಸೂರಜ್ ಮಲ್ ಬಿಹಾರ್ ಪ್ರದೇಶದಲ್ಲಿರುವ ನವೀನ್ ಜೈನ್ ಅವರ ಮನೆಯನ್ನು ದೋಚಿದ್ದಾರೆ ಎಂದು ಪೊಲೀಸರು ಮೊದಲಿಗೆ ಊಹಿಸಿದ್ದರು. ಆದರೆ, ಮನೆಯ ಬೀಗ ಒಳಗಿನಿಂದ ಒಡೆದಿರುವುದು ಕಂಡು ಬಂದಿತ್ತು.

ಮನೆಗೆಲಸದವರಿಂದಲೂ ಪೂರಕ ಮಾಹಿತಿ ಸಿಕ್ಕಿರಲಿಲ್ಲ. ಆದರೆ, ಸಿಸಿಟಿವಿ ಕೆಮೆರಾ ಮೂಲಕ ಕೂಡಾ ಯಾವುದೇ ಸುಳಿವು ಸಿಗದೆ ಪೊಲೀಸರು ಕಂಗಲಾಗಿದ್ದರು. ಈ ಸಂದರ್ಭದಲ್ಲಿ ನವೀನ್ ಜೈನ್ ಅವರ ಮಗಳ ನಡವಳಿಕೆ ಮೇಲೆ ಅನುಮಾನ ಬಂದು ವಿಚಾರಿಸಿದಾಗ ಸತ್ಯಾಂಶ ಹೊರ ಬಿದ್ದಿದೆ.

ಪ್ರೇಮಜಾಲದಲ್ಲಿ ಬಿದ್ದಿದ್ದ ಯುವತಿ ತನ್ನ ಗೆಳೆಯನೊಂದಿಗೆ ಮನೆಯಲ್ಲಿದ್ದ ನಗ ನಾಣ್ಯ,ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಆದರೆ, ದುಡ್ಡು ಕದ್ದು ಮದುವೆಯಾಗು ಯೋಜನೆ ಯಾಕೋ ಅರ್ಧದಲ್ಲೇ ನಿಂತಾಗ, ಹುಡುಗಿ ಮನೆಗೆ ಹಿಂತಿರುಗಿದ್ದಾಳೆ.

ಪೊಲೀಸರು ಯುವತಿ ಹಾಗೂ ಆಕೆಯ ಪ್ರಿಯಕರನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

English summary
Delhi Police have cracked the Rs 1 crore robbery case at a house in Surajmal Bihar, New Delhi carried out by a girl along with her boyfriend.
Please Wait while comments are loading...
Advertisement
Content will resume after advertisement