ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ನಿಮಗೆ ತಿಳಿದಿರಲಿ, ಬೇಕಾಗಬಹುದು

|
Google Oneindia Kannada News

Old age Apartments for Senior Citizens in Bangalore
ವೃದ್ಧಾಶ್ರಮ ಎನ್ನುವ ಪದ ಹಳೆಯದಾಯಿತು. ಹಿರಿಯ ನಾಗರಿಕರಿಗೆ ಮೀಸಲಾದ ಹೊಸ ವಸತಿ ಯೋಜನೆಯೊಂದು ಬೆಂಗಳೂರಿನಲ್ಲಿ ಚಾಲ್ತಿಗೆ ಬಂದಿದೆ. ಹಿರಿಯ ನಾಗರಿಕರಿಗೆ ಅಪಾರ್ಟ್‌ಮೆಂಟ್ ರೂಪಿಸುವ ವಿನೂತನ ಕಲ್ಪನೆಯನ್ನು ಆರಂಭಿಸಿದ್ದು ಬೆಂಗಳೂರಿನ ಪಂಚವಟಿ ಟ್ರಸ್ಟ್.

ಹಿರಿಯ ನಾಗರಿಕರ ಅನುಕೂಲಕ್ಕೆಂದೇ ಪಂಚವಟಿ ಟ್ರಸ್ಟ್ ಅಪಾರ್ಟ್‌ಮೆಂಟುಗಳನ್ನು ಸಿದ್ಧಗೊಳಿಸಿದೆ. ಊಟ, ಔಷಧೋಪಚಾರ, ಭದ್ರತೆ, ಸಾರಿಗೆ ವ್ಯವಸ್ಥೆ ಮತ್ತು ಮನರಂಜನೆಯ ಸೌಲಭ್ಯವನ್ನು ವಯೋವೃದ್ಧ ಜೀವಿಗಳಿಗೆ ಒದಗಿಸಲಾಗುತ್ತದೆ.

ಸ್ವಯಂ ಸೇವಾ ಸಂಸ್ಥೆಯಾಗಿರುವ ಪಂಚವಟಿ ಟ್ರಸ್ಟ್ ಬೆಂಗಳೂರಿನ ಎಲೆಲ್ಟ್ರಾನಿಕ್ ಸಿಟಿಯಲ್ಲಿದೆ, 2011ರ ಫೆಬ್ರವರಿ ತಿಂಗಳಿನಲ್ಲಿಯೇ 14 ಮನೆಗಳನ್ನೊಳಗೊಂಡ ಎರಡು ಅಪಾರ್ಟ್‌ಮೆಂಟ್ ಉದ್ಗಾಟಿಸಲಾಗಿತ್ತು. ನವೆಂಬರ್ 7 ರಂದು ಮತ್ತೊಂದು ಅಪಾರ್ಟ್‌ಮೆಂಟ್ ತೆರೆಯಿತು.

27 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಈ ಅಪಾರ್ಟ್‌ಮೆಂಟ್, ಪಾರ್ಕ್, ಫಿಟ್ ನೆಸ್ ಸೆಂಟರ್, ರೆಸ್ಟೋರೆಂಟ್ ಎಲ್ಲವೂ ಒಳಗೊಂಡಿದೆ. ಅಪಾರ್ಟ್ ಮೆಂಟಿನ ಒಳಗೆ, ಹೊರಗೆ ಎಲ್ಲವನ್ನೂ ವಯಸ್ಸಾದವರ ಅವಶ್ಯಕತೆಗೆ ತಕ್ಕಂತೆ ರೂಪಿಸಲಾಗಿದೆ.

ಪಂಚವಟಿ ಟ್ರಸ್ಟ್ ನಡೆಸುವ ಈ ನಂದಗೋಕುಲ ಬೆಂಗಳೂರಿನಿಂದ 20 ಕಿ.ಮೀ ದೂರದಲ್ಲಿದೆ. ಬನ್ನೇರುಘಟ್ಟ ರಸ್ತೆ, ವಕೀಲ್ ಟೌನ್ ಸ್ಕೇಪ್ ಒಳಗೆ ಹಾದುಹೋದರೆ ಜಿಗಣಿ ಬಳಿಯಲ್ಲಿ ಸುಮಾರು 1000 ಅಪಾರ್ಟ್‌ಮೆಂಟ್ ಇರುವ ಪ್ರದೇಶವಿದೆ.

ನೀವು ಮಾಡಬೇಕಾದುದಿಷ್ಟೆ. 10 ರಿಂದ 35 ಲಕ್ಷ ರೂ ಬೆಲೆಬಾಳುವ ಯಾವುದಾದರೊಂದು ವಸತಿಯನ್ನು ಖರೀದಿಸಬೇಕು. ಅಲ್ಲಿ ಹಿರಿಯ ನಾಗರಿಕರು ವಾಸಿಸಬಹುದು. ಹಿರಿಯರ ಕಾಲಾನಂತರ ಅವರು ನಾಮಿನೇಶನ್ ಮಾಡಿದವರಿಗೆ ಹಣ ವಾಪಸ್ಸು ಬರುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ವಿಳಾಸ:
ಇ-ಮೇಲ್ ವಿಳಾಸ: [email protected], ಫೋನ್ ನಂಬರ್: 0-9449819501, 080-22448111, 0-9980467980.

English summary
Old age homes getting old fashioned even as Non-profit orgs like Panchavati trust coming up with apartments in Bangalore for senior citizens on money back basis to the nominee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X